ಬೆಂಗಳೂರು: ಫೇಸ್​​ಬುಕ್​ನಲ್ಲಿ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಹೆಸರಲ್ಲಿ ನಕಲಿ ಅಕೌಂಟ್​ ಸೃಷ್ಟಿಯಾಗಿದ್ಯಾ ಅಂತ ಒಮ್ಮೆ ಚೆಕ್​ ಮಾಡಿಕೊಳ್ಳಿ. ಅಥವಾ ನಿಮ್ಮ ಸ್ನೇಹಿತರ ಹೆಸರಲ್ಲಿ ಹೊಸದಾಗಿ ಫ್ರೆಂಡ್​​ ರಿಕ್ವೆಸ್ಟ್​​ ಬಂದ್ರೆ, ಅದನ್ನ ಅಕ್ಸೆಪ್ಟ್​ ಮಾಡೋ ಮುನ್ನ ಅದು ಫೇಕ್​ ಅಕೌಂಟಾ, ಜೆನ್ಯೂನ್ ಅಕೌಂಟಾ ಅಂತ ಒಮ್ಮೆ ಸ್ನೇಹಿತರ ಬಳಿ ವಿಚಾರಿಸಿ. ಯಾಕಂದ್ರೆ ಫೇಸ್​​ಬುಕ್​ನಲ್ಲಿ ವಂಚಕರು ಫೇಕ್​ ಅಟಕೌಂಟ್​​ನಿಂದ ರಿಕ್ವೆಸ್ಟ್​ ಕಳಿಸಿ ಜನಸಾಮಾನ್ಯರನ್ನ ಯಾಮಾರಿಸುತ್ತಿರುವ ಪ್ರಕರಣಗಳು ಹೆಚ್ಚಾಗ್ತಿವೆ.

ಈಗ ಕೊರೊನಾ ಮಹಾಮಾರಿಯನ್ನ ಬಂಡವಾಳ ಮಾಡಿಕೊಂಡಿರೋ ಖದೀಮರು, ಹಲವರನ್ನ ಯಾಮಾರಿಸಿ ಹಣ ಪಡೆದು ವಂಚಿಸಿದ್ದಾರೆ. ಇವರು ಹೇಗೆ ತಮ್ಮ ಕೃತ್ಯ ಎಸಗುತ್ತಾರೆ ಅಂದ್ರೆ, ಈಗಾಗಲೇ ಇರೋ ಕೆಲವರ ಅಸಲಿ ಫೇಸ್​ಬುಕ್​ ಪ್ರೊಫೈಲ್​ನಿಂದ ಫೋಟೋ, ಹೆಸರು ಇತ್ಯಾದಿ ಮಾಹಿತಿಗಳನ್ನ ಬಳಸಿಕೊಂಡು ನಕಲಿ ಅಕೌಂಟ್​​ ಸೃಷ್ಟಿಸುತ್ತಾರೆ. ಬಳಿಕ ಅವರ ಫ್ರೆಂಡ್​​ಲಿಸ್ಟ್​ನಲ್ಲಿ ಇರುವ ಇತರರಿಗೆ ರಿಕ್ವೆಸ್ಟ್​​ ಕಳಿಸುತ್ತಾರೆ. ಬಳಿಕ ಮೆಸೇಜ್ ಮಾಡಿ, ನನ್ನ ಸ್ನೇಹಿತನಿಗೆ ಕೊರೊನಾ ಪಾಸಿಟೀವ್ ಬಂದಿದೆ, ನನ್ನ ಸ್ನೇಹಿತ ಕೊರೊನಾಗೆ ಬಲಿಯಾಗಿದ್ದಾನೆ.. ಹೀಗೆ ಬೇರೆ ಬೇರೆ ರೀತಿಯ ಕಾರಣ ಹೇಳ್ತಾರೆ. ಅವರಿಗೆ ಸಹಾಯ ಮಾಡಬೇಕು. ಗೂಗಲ್ ಪೇ ಅಥವಾ ಫೋನ್ ಪೇ ಮೂಲಕ ಹಣ ಕಳಿಸಿ, ನಿಮಗೆ ವಾಪಸ್​ ಕೊಡ್ತೀನಿ ಅಂತ ಕೇಳಿಕೊಳ್ತಾರೆ. ನೀವೇನಾದ್ರೂ ಕೇವಲ ಪ್ರೊಫೈಲ್ ಫೋಟೋ ನೋಡಿ, ಇದು ನಮ್ಮ ಸ್ನೇಹಿತರೇ ಕಳಿಸಿರೋ ಮೆಸೇಜ್ ಅಂದುಕೊಂಡು ಹಣ ಹಾಕಿದ್ರೆ ಬೀಳುತ್ತೆ ಪಂಗನಾಮ. ಈ ರೀತಿ ಕೊರೊನಾ ಸಮಯದಲ್ಲಿ ನಕಲಿ ಖಾತೆ ಸೃಷ್ಟಿಸಿ ವಂಚನೆ ನಡೆಯುತ್ತಿದೆ. ಗಣ್ಯರು, ಐಪಿಎಸ್, ಐಎಎಸ್ ಅಧಿಕಾರಿಗಳು, ಶ್ರೀಮಂತರ ಹೆಸರಲ್ಲೂ ಈ ರೀತಿ ನಕಲಿ ಎಫ್​ಬಿ ಖಾತೆ ಸೃಷ್ಟಿಸಿ ವಂಚಿಸಿರೋ ಉದಾಹರಣೆಗಳಿವೆ.

ವಂಚಕರು ಇಲ್ಲೊಬ್ಬರಿಗೆ, ಅವರ ಸ್ನೇಹಿತರ ಅಸಲಿ ಖಾತೆ ಹೋಲುವ ಪ್ರೊಫೈಲ್ ಪೋಟೊಗಳನ್ನೇ ಬಳಸಿ ಫೇಕ್​ ಅಕೌಂಟ್​ ಸೃಷ್ಟಿಸಿ ಮೆಸೇಜ್ ಕಳಿಸಿದ್ದಾರೆ. ತುರ್ತಾಗಿ ಹಣದ ಅವಶ್ಯಕತೆಯಿದೆ ಇದೆ ಎಂದು ನಂಬಿಸಿ 15 ರಿಂದ 20ಸಾವಿರ ನೀಡುವಂತೆ ಮನವಿ ಮಾಡಿದ್ದಾರೆ. ಹೀಗೆ  ಜನ ಸಾಮಾನ್ಯರ ಖಾತೆಗಳನ್ನ ನಕಲು ಮಾಡಿ ಅವರ ಸ್ನೇಹಿತರಿಗೆ ವಂಚನೆ ಮಾಡಲಾಗ್ತಿದೆ.

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಸೈಬರ್ ಕ್ರೈಂ ಎಸಗುವ ಬಗ್ಗೆ ತರಬೇತಿಯನ್ನೆ ನೀಡಲಾಗ್ತಿದೆ ಅನ್ನೋ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಮುಂತಾದ ರಾಜ್ಯಗಳಲ್ಲಿ ಈ ಖದೀಮರಿಗೆ ತರಬೇತಿ ಸಿಗುತ್ತಿದೆ. ಹೈಸ್ಕೂಲ್ ಓದಿದ ಯುವಕರಿಗೆ ಟ್ರೈನಿಂಗ್ ನೀಡಿ  ಮೊಬೈಲ್, ಸಿಮ್ ಕಾರ್ಡ್, ಲ್ಯಾಪ್ ಟಾಪ್ ಒದಗಿಸಿ ವಂಚನೆಯನ್ನೇ ವೃತ್ತಿ ಮಾಡಿಕೊಂಡಿದ್ದಾರಂತೆ ಖದೀಮರು.

ನೀವು ವಹಿಸಬೇಕಾದ ಎಚ್ಚರಿಕೆಗಳು 

  • ನಿಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಡೇಟಾ ಕದಿಯಲು ಸಾಧ್ಯವಾಗದಂತೆ ಪ್ರೊಫೈಲ್ ಲಾಕ್ ಮಾಡಿ
  • ನಿಮ್ಮ ಸ್ನೇಹಿತರೇ ಹಣ ಕೇಳಿದರೂ ಕೂಡ ಅವರಿಗೆ ಕರೆ ಮಾಡಿ ಇನ್ನೊಮ್ಮೆ ಖಚಿತಪಡಿಸಿಕೊಳ್ಳಿ. ಕೇವಲ ಮೆಸೇಜ್ ನೋಡಿ ಯಾವುದೇ ಕಾರಣಕ್ಕೂ ಹಣ ನೀಡಲೆಬೇಡಿ.
  • ಒಮ್ಮೆ ಫ್ರೆಂಡ್ ಅಗಿರುವ ಸ್ನೇಹಿತರ ಕಡೆಯಿಂದ ಇನ್ನೊಮ್ಮೆ ರಿಕ್ವೆಸ್ಟ್ ಬಂದರೆ ಅಕ್ಸೆಪ್ಟ್ ಮಾಡುವ ಮುನ್ನ ಅದು ಅವರಿಂದಲೇ ಸೃಷ್ಟಿಯಾದ ಅಕೌಂಟಾ ಅಲ್ವಾ ಅನ್ನೋದನ್ನ ಖಚಿತ ಪಡಿಸಿಕೊಳ್ಳಿ. ಪರಿಚಯಸ್ಥರ ಪ್ರೊಫೈಲ್ ಅಂದುಕೊಂಡು ಕೂಡಲೇ ರಿಕ್ವೆಸ್ಟ್ ಆಕ್ಸೆಪ್ಟ್ ಮಾಡಲೇಬೇಡಿ
  • ನಿಮ್ಮ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿರೋದು ಗೊತ್ತಾದ್ರೆ ಕೂಡಲೇ ನಿಮ್ಮ ಆಪ್ತರಿಗೆ ಮಾಹಿತಿ ತಿಳಿಸಿ, ಅಂಥ ಅಕೌಂಟ್​​ಗಳಿಂದ ಬರುವ ರಿಕ್ವೆಸ್ಟ್​ ಸ್ವೀಕರಿಸದಂತೆ ಹೇಳಿ. ಹಾಗೂ ನಕಲಿ ಅಕೌಂಟ್​​ ಅನ್ನು ರಿಪೋರ್ಟ್​ ಮಾಡಿ
  • ಸೈಬರ್ ಕ್ರೈಂ ಗೆ ಹೋಗಿ ಈ ಬಗ್ಗೆ ದೂರು ನೀಡಿ

 

The post ಎಚ್ಚರ ಎಚ್ಚರ.. ಕಂಡಕಂಡವರ ಹೆಸ್ರಲ್ಲಿ ನಕಲಿ ಎಫ್​ಬಿ ಅಕೌಂಟ್​ ರಚಿಸಿ ಉಂಡೇನಾಮ ಹಾಕ್ತಿದ್ದಾರೆ ಖದೀಮರು appeared first on News First Kannada.

Source: newsfirstlive.com

Source link