ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅನೇಕ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಈ ಹಿನ್ನೆಲೆ ತಡವಾಗಿಯಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಸೋಂಕು ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್ ರಚನೆ ಮಾಡಿದೆ.

ಎರಡು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಿತ್ತು. ಅದರ ಬೆನ್ನಲ್ಲೇ 20ಕ್ಕೂ ಹೆಚ್ಚು ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಈಗಲೂ ಸಾವಿನ ಸರಣಿ ಮುಂದುವರೆದಿದೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ಟಾಸ್ಕ್​ಫೋರ್ಸ್​​ ರಚನೆಯಾಗಿದೆ.

  • ಆಕ್ಸಿಜನ್ ವ್ಯವಸ್ಥೆಗೆ ನೋಡಲ್ ಅಧಿಕಾರಿಯಾಗಿ ಮಹದೇಶ್ವರ ಬೆಟ್ಟದ ಡಿಸಿಎಫ್ ಏಡುಕುಂಡಲಾ ಅವರನ್ನ ನೇಮಕ ಮಾಡಲಾಗಿದೆ.
  • ಜಿಲ್ಲಾಸ್ಪತ್ರೆ ನಿರ್ವಹಣೆಗೆ ಬಿ.ಆರ್.ಟಿ ಡಿಸಿಎಫ್ ಸಂತೋಷ್ ಅವರನ್ನ ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
  • ಜಿಲ್ಲೆಯ ಎಲ್ಲಾ ಶಾಸಕರು‌, ಜಿಲ್ಲಾಧಿಕಾರಿ, ಸಿಇಒ, ಡೀನ್, ಡಿಹೆಚ್ಒ, ಎಸ್​ಪಿ ಸೇರಿದಂತೆ 15 ಮಂದಿ ಟಾಸ್ಕ್ ಫೋರ್ಸ್​ನ ಭಾಗವಾಗಿದ್ದಾರೆ.

ಹಳ್ಳಿಗಳಲ್ಲಿ ಕೊರೊನಾ ತಡೆಯಲು ಕ್ರಮ
ಇಂದಿನಿಂದ ಏಸಿಂಪ್ಟಮ್ಯಾಟಿಕ್(ರೋಗಲಕ್ಷಣವಿಲ್ಲದ) ಎಲ್ಲಾ ಕೊರೊನಾ ರೋಗಿಗಳು ಕೋವಿಡ್​​ ಕೇರ್ ಸೆಂಟರ್ಗಳಿಗೆ ದಾಖಲಾಗಬಹುದು. ನಾಲ್ಕೈದು ದಿನದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 200 ಹಾಸಿಗೆಗಳ ಕೋವಿಡ್ ಆಸ್ಪತ್ರೆ ಆರಂಭವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

The post ಎಚ್ಚೆತ್ತ ಜಿಲ್ಲಾಡಳಿತ: ಚಾಮರಾಜನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ ಟಾಸ್ಕ್‌ಫೋರ್ಸ್ ರಚನೆ appeared first on News First Kannada.

Source: newsfirstlive.com

Source link