ಕಳೆದ ಎರಡು ದಿನಗಳಿಂದ ಅಶ್ವಿನ್​ ಸಾರ್ವಕಾಲಿಕ ಶ್ರೇಷ್ಠ ಬೌಲರ್​​ ಹೌದಾ..! ಅಲ್ವಾ..! ಎಂಬ ಬಗ್ಗೆ ಚರ್ಚೆ ನಡೀತಾ ಇದೆ. ಈ ಹಗ್ಗಜಗ್ಗಾಟಕ್ಕೆ ಇನ್ನೂ ಫುಲ್​ ಸ್ಟಾಫ್​ ಬಿದ್ದಿಲ್ಲ. ಸದ್ಯದಲ್ಲಿ ಇತ್ಯರ್ಥವಾಗುವಂತ ವಿಚಾರವೂ ಅದಲ್ಲ ಬಿಡಿ. ಆದ್ರೆ, ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಸಿದ್ಧತೆ ನಡೆಸ್ತಾ ಇರೋ ಟೀಮ್​ ಇಂಡಿಯಾ ಪಾಲಿಗೆ ಕೇರಂ ಸ್ಪಿನ್ನರ್​ ಅಶ್ವಿನ್​, ಪ್ರಭಲ ಅಸ್ತ್ರ..!

ಅಶ್ವಿನ್​ ಕೈಲಿದೆ ಚಾಂಪಿಯನ್​ಶಿಪ್​ ಗೆಲುವಿನ ಕೀ
ಲೆಫ್ಟ್​​ ಹ್ಯಾಂಡ್​​ ಬ್ಯಾಟ್ಸ್​ಮನ್​ಗಳಿಗೆ ಕೇರಂ ಸ್ಪಿನ್ನರ್​​​ ಥ್ರೆಟ್

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕುರಿತಂತೆ ಹಲವು ವಿಶ್ಲೇಷಣೆಗಳು, ಚರ್ಚೆಗಳು ಈಗಾಗಲೇ ನಡೆದಿವೆ. ಹಲ ದಿಗ್ಗಜರು, ವಿಶ್ಲೇಷಕರು ಯಾವೆಲ್ಲಾ ಆಟಗಾರರು ಎಕ್ಸ್​​-ಫ್ಯಾಕ್ಟರ್​ ಪ್ಲೇಯರ್​​ಗಳಾಗ್ತಾರೆ ಅನ್ನೋದರ ಬಗ್ಗೆ, ಅಭಿಪ್ರಾಯವನ್ನೂ ಮಂಡಿಸಿದ್ದಾರೆ. ಹಲವರು ಬ್ಯಾಟ್ಸ್​ಮನ್​ಗಳ ಬಗ್ಗೆ ಒಲವು ತೋರಿಸಿದ್ರೆ, ಇನ್ನು ಕೆಲವರು ವೇಗಿಗಳು ಗೇಮ್​ ಚೈಂಜಿಂಗ್​ ಪರ್ಫಾಮೆನ್ಸ್​ ನೀಡ್ತಾರೆ ಎಂದು ಹೇಳಿದ್ದಾರೆ. ಆದ್ರೆ, ಇವರೆಲ್ಲರನ್ನೂ ಹಿಂದಿಕ್ಕಿ ಕೇರಂ ಸ್ಪಿನ್ನರ್​​ ಅಶ್ವಿನ್​ ರೋಸ್​ ಬೌಲ್​ ಅಂಗಳದಲ್ಲಿ ಮೋಡಿ ಮಾಡೋದು ಕನ್​ಫರ್ಮ್​..!

ಮಹತ್ವದ ಐಸಿಸಿ ಟ್ರೋಫಿ ಫೈನಲ್​ಗೆ ಸಿದ್ಧತೆ ನಡೆಸಿರುವ ಕೊಹ್ಲಿ ಆ್ಯಂಡ್​ ಕಂಪನಿಗೆ, ಪ್ಲೇಯಿಂಗ್​ ಇಲೆವೆನ್​ ಆಯ್ಕೆಯ ಬಗ್ಗೆ ಗೊಂದಲವಿದೆ. ತವರಿನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಬ್ಯಾಟ್​​​ ಮತ್ತು ಬಾಲ್​ ಎರಡರಲ್ಲೂ ನೀಡಿದ ಪರ್ಫಾಮೆನ್ಸ್​ ಅಶ್ವಿನ್​ಗೆ ಆಡೋ ಬಳಗ ಸಲೀಸಾಗೇ ಜಾಗ ಮಾಡಿದೆ. ಹಾಗಿದ್ರೂ ತವರಿನಂತೆ ಸೇನಾ ರಾಷ್ಟ್ರಗಳಲ್ಲಿ ಅಶ್ವಿನ್​ ಪರಿಣಾಮಕಾರಿಯಲ್ಲ ಅನ್ನೋ ವಾದ, ಇನ್ನೂ ಚರ್ಚೆಯಲ್ಲಿದೆ. ಆದ್ರೆ ಟಾಪ್​ ಆರ್ಡರ್​​ ಬ್ಯಾಟ್ಸ್​​ಮನ್​ಗಳನ್ನ, ಹಾಗೂ ಲೆಫ್ಟ್​​ ಹ್ಯಾಂಡೆಡ್​ ಬ್ಯಾಟ್ಸ್​ಮನ್​ಗಳ ವಿರುದ್ಧ ನೀಡಿರೋ ಪ್ರದರ್ಶನ, ಅಶ್ವಿನ್​ರನ್ನೇ ಕೀ ಪ್ಲೇಯರ್​ ಎಂದು ಹೇಳ್ತಿದೆ.

ಕಾನ್ವೆ, ಲಾಥಮ್​ಗೆ ಕೇರಂ ಸ್ಪಿನ್ನರ್​ ಕಂಟಕ​

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ದ್ವಿಶತಕ ಸಿಡಿಸಿರುವ ಡಿವೋನ್​ ಕಾನ್ವೆ, ಇನ್ನೋರ್ವ ಆರಂಭಿಕ ಟಾಮ್​ ಲಾಥಮ್​, ಟೀಮ್​ ಇಂಡಿಯಾಗೆ ಸವಾಲಾಗಬಲ್ಲರು ಅನ್ನೋದು ಹಲವು ವಾದವಾಗಿದೆ. ಕಾನ್ವೆಯ ರೆಡ್​ ಹಾಟ್​ ಫಾರ್ಮ್​, ಲಾಥಮ್​ರ ಟ್ರ್ಯಾಕ್​ ರೆಕಾರ್ಡ್​​ ಗಮನಿಸಿದ್ರೆ, ಅದು ಸತ್ಯವೂ ಹೌದು..! ಆದ್ರೆ, ಅಶ್ವಿನ್​​ಗೆ ಅವರಿಬ್ಬರು ಸವಾಲೇ ಅಲ್ಲ..! ಲೆಫ್ಟ್​ ಹ್ಯಾಂಡ್​ ಬ್ಯಾಟರ್ಸ್​ಗಳನ್ನ ಸಲೀಸಾಗಿ ಪೆವಿಲಿಯನ್​ಗಟ್ಟೋ ಸಾಮರ್ಥ್ಯ ಅಶ್ವಿನ್​ಗಿದೆ. ಇದನ್ನ ಈ ಅಂಕಿ-ಅಂಶಗಳೇ ನಿರೂಪಿಸ್ತಿವೆ.

ಟೆಸ್ಟ್​ನಲ್ಲಿ ಎಡಗೈ ಬ್ಯಾಟ್ಸ್​ಮನ್​ಗಳ ಹೆಚ್ಚು ವಿಕೆಟ್​
ಬೌಲರ್​                  ಪಂದ್ಯ           ವಿಕೆಟ್          LHB ವಿಕೆಟ್​
ಅಶ್ವಿನ್​                     78                409                207
ಮುರಳಿಧರನ್         133                800                191
ಆ್ಯಂಡರ್ಸನ್​           161                616                191
ಶೇನ್ ವಾರ್ನ್​         145               708                 172

ಟಾಪ್​ ಆರ್ಡರ್​​ ಬ್ಯಾಟ್ಸ್​ಮನ್​ಗಳಿಗೂ ಅಶ್ವಿನ್​ ಕಾಟ..!

ಟೆಸ್ಟ್​ ಕ್ರಿಕೆಟ್​​ನಲ್ಲಿ ಕೇವಲ ಲೆಫ್ಟ್​​ ಹ್ಯಾಂಡ್​ ಬ್ಯಾಟ್ಸ್​ಮನ್​ಗಳನ್ನ ಮಾತ್ರವಲ್ಲ..! ಟಾಪ್​​ 3 ಕ್ರಮಾಂಕದ ಬ್ಯಾಟ್ಸ್​​ಮನ್​ಗಳನ್ನೇ ಅಶ್ವಿನ್​ ಹೆಚ್ಚು ಬಾರಿ ಕಾಡಿರೋದು. ಇದೇ ಈಗ ಕಿವೀಸ್​​ ಓಪನರ್ಸ್​ಗೆ ಸವಾಲಾಗಿರೋದು.

ಅಶ್ವಿನ್​ VS ಟಾಪ್​ 3​​ ಬ್ಯಾಟರ್ಸ್​
RHB                                       LHB
522.3             ಓವರ್​            ​  704.5
1,492              ರನ್​                1,671
45               ವಿಕೆಟ್​                81

ಅಶ್ವಿನ್​ರ ಈ ರೆಕಾರ್ಡ್ಸ್​​​ ಕಾನ್ವೆ ಹಾಗೂ ಟಾಮ್​ ಲಾಥಮ್​ಗೆ ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಈ ಇಬ್ಬರಿಗೆ ಮಾತ್ರವಲ್ಲ..! ಕಿವೀಸ್​ ನಾಯಕನಿಗೂ ಅಶ್ವಿನ್​ ಎದುರಿಸೋದೆ ಸವಾಲಾಗಿದೆ. ಇವರೆಗೆ ಆಡಿದ 5 ಇನ್ನಿಂಗ್ಸ್​ಗಳಲ್ಲಿ ಕೇನ್​ ವಿಲಿಯಮ್​ಸನ್​, 4 ಬಾರಿ ಅಶ್ವಿನ್​ ಮೋಡಿಗೆ ಬಲಿಯಾಗಿದ್ದಾರೆ. ಇನ್ನೊಬ್ಬ ಅನುಭವಿ ಬ್ಯಾಟ್ಸ್​ಮನ್​ ರಾಸ್​ ಟೇಲರ್​​ ಕೂಡ 3 ಬಾರಿ ಕೇರಂ ಸ್ಪಿನ್ನರ್​​ಗೆ ವಿಕೆಟ್​ ಒಪ್ಪಿಸಿದ್ದಾರೆ.

ಮೇಲಿನ ಅಂಕಿ-ಅಂಶಗಳೆಲ್ಲವೂ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ಅಶ್ವಿನ್​ ಟೀಮ್​ ಇಂಡಿಯಾದ ಪ್ರಭಲ ಅಸ್ತ್ರ ಅನ್ನೋದನ್ನ ಸಾರಿ ಸಾರಿ ಹೇಳ್ತಿವೆ. ಟೀಮ್ ಮ್ಯಾನೇಜ್​ಮೆಂಟ್​ ಕೂಡ ಅಶ್ವಿನ್​ ಮೇಲೆ ಭರವಸೆಯನ್ನಿಟ್ಟಿದೆ. ಜೊತೆಗ ಇಂಗ್ಲೆಂಡ್​ನ ಪ್ಲೇಯಿಂಗ್​ ಕಂಡೀಶನ್​ನಲ್ಲಿ ಅಶ್ವಿನ್​ ಸ್ಪಿನ್​ ಜಾದೂ ವರ್ಕೌಟ್​ ಆಗುತ್ತಾ ಅನ್ನೋ ಕುತೂಹಲವೂ ಮೂಡಿದೆ.

The post ಎಡಗೈ ಬ್ಯಾಟ್ಸ್​ಮನ್​ಗಳ ಪಾಲಿನ ವಿಲನ್ ಆಫ್​ಸ್ಪಿನ್ನರ್​ ಆರ್.ಅಶ್ವಿನ್..! appeared first on News First Kannada.

Source: newsfirstlive.com

Source link