ಟೀಮ್​ ಇಂಡಿಯಾ ಪರ ಆಡಲು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತೆ. ಒಂದೇ ಒಂದು ಅವಕಾಶ ಸಿಕ್ಕರೆ ಸಾಕು, ಎರಡೂ ಕೈಗಳಿಂದ ಬಾಚಿಕೊಳ್ಳೋಕೆ, ರೆಡಿಯಾಗಿರ್ತಾರೆ. ಆದ್ರೆ ಇಲ್ಲೊಬ್ಬ ಕ್ರಿಕೆಟಿಗ, ದೇಶಿ ಟೂರ್ನಿಗಳಲ್ಲಿ ಮಿಂಚಿದ್ರೂ, ಆತನಿಗೆ ಅವಕಾಶ ಮಾತ್ರ ಸಿಗುತ್ತಿಲ್ಲ!

ಕಳೆದೆಂಟು ತಿಂಗಳಿಂದ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟಿರುವ ಹಲವು ಯುವ ಆಟಗಾರರು, ಆಸ್ಟ್ರೇಲಿಯಾ, ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಮಿಂಚಿದ್ದಾರೆ.! ಇವರಲ್ಲಿ ಶೇ. 90ರಷ್ಟು ಭಾಗ ಐಪಿಎಲ್​ನಲ್ಲಿ ಮಿಂಚಿದವರು. ದೇಶಿ ಕ್ರಿಕೆಟ್​ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡದ ಇವರು, ಇದೀಗ ಟೀಮ್​ ಇಂಡಿಯಾದಲ್ಲಿ ಕಮಾಲ್​ ಮಾಡ್ತಿದ್ದಾರೆ. ಆದರೆ ದೇಶಿ ಕ್ರಿಕೆಟ್​ನ ಬೆಸ್ಟ್​​ ಪೇಸ್ ಅಟ್ಯಾಕರ್ ಎನಿಸಿಕೊಂಡಿರುವ ಈ ಪ್ರತಿಭಾವಂತನಿಗೆ ಮಾತ್ರ, ಪದೇ ಪದೇ ಅನ್ಯಾಯ ಮಾಡಲಾಗ್ತಿದೆ. ಅವಕಾಶ ನೀಡದೆ ವಯಸ್ಸಿನ ಬಣ್ಣ ಹಚ್ಚಲಾಗ್ತಿದೆ.

ಅನ್ಯಾಯಕ್ಕೆ ಒಳಗಾದ ನತದೃಷ್ಟ ಕ್ರಿಕೆಟಿಗ ಉನಾದ್ಕತ್​
ದೇಶಿ ಕ್ರಿಕೆಟ್​​ನಲ್ಲಿ ಕಿಂಗ್​ ಎನಿಸಿಕೊಂಡಿರುವ ಎಡಗೈ ವೇಗಿ ಜಯದೇವ್​ ಉನಾದ್ಕಟ್​​​​, ರಣಜಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ರು. ಆದ್ರೆ ಸೌರಾಷ್ಟ್ರದ ಈ ವೇಗಿ, ಅದ್ಭುತ ಪರ್ಫಾಮೆನ್ಸ್​ ನಡುವೆಯೂ ಟೀಮ್​ ಇಂಡಿಯಾಕ್ಕೆ ಆಯ್ಕೆಯಾಗದಿರೋ ನತದೃಷ್ಟ ಕ್ರಿಕೆಟಿಗ. 19ನೇ ವರ್ಷಕ್ಕೆ ಟೀಮ್ ಇಂಡಿಯಾಕ್ಕೆ ಕಾಲಿಟ್ಟ ಉನಾದ್ಕತ್​, ರಿವರ್ಸ್​ ಸ್ವಿಂಗ್​ನಿಂದ ಎಲ್ಲರ ಗಮನ ಸೆಳೆದ​​. ಡಿಫ್ರೆಂಟ್​ ಲೈನ್​ ಆ್ಯಂಡ್​ ಲೆಂಥ್​ ಬೌಲಿಂಗ್​​ನಿಂದಲೇ ಗಮನ ಸೆಳೆದಿರೋ ಈ ಎಡಗೈ ವೇಗಿ, ಹಲವು ಸಾಧನೆಗಳ ಹೊರತಾಗಿ ಟೀಮ್ ಇಂಡಿಯಾದ ಅವಕಾಶ ಬಾಗಿಲು ಇನ್ನೂ ತೆರೆದಿಲ್ಲ. ಇಷ್ಟೆಲ್ಲಾ ಯಾಕ್​ ಹೇಳ್ತಿದ್ದೀವಿ ಅಂದ್ರೆ ಟೀಮ್​ ಇಂಡಿಯಾ ಆಯ್ಕೆದಾರರು ತೆಗೆದುಕೊಂಡಿರುವ ಈ ನಿರ್ಧಾರದಿಂದ!

ರಣಜಿಯಲ್ಲಿ ಉನಾದ್ಕತ್​ ಪ್ರದರ್ಶನ
ಪಂದ್ಯ              89
ವಿಕೆಟ್​​            327
ಎಕಾನಮಿ        2.94
ಬೆಸ್ಟ್​​               7/41

ಪ್ರದರ್ಶನಕ್ಕಿಂತ ವಯಸ್ಸೇ ಮುಖ್ಯ ಎಂದ ಸೆಲೆಕ್ಟರ್ಸ್​​..!
ದೇಶಿ ಕ್ರಿಕೆಟ್​ನಲ್ಲಿ 327 ವಿಕೆಟ್​ ಕಬಳಿಸಿ ಪರಾಕ್ರಮ ಮೆರೆದ್ರೂ, ಹಲವು ವರ್ಷಗಳಿಂದ ಉನಾದ್ಕತ್​ಗೆ ಟೀಮ್ ಇಂಡಿಯಾದಲ್ಲಿ ಚಾನ್ಸ್​ ನೀಡಿಲ್ಲ. ಈ ಬಗ್ಗೆ ಆಯ್ಕೆಗಾರರನ್ನ ಪ್ರಶ್ನಿಸಿದ ಸೌರಾಷ್ಟ್ರ ಕೋಚ್​​ ಕಾರ್ಸನ್​ ಘಾರ್ವಿ, ಉನಾದ್ಕತ್​ಗೆ ಏಕೆ ಚಾನ್ಸ್​ ನೀಡ್ತಿಲ್ಲ ಅಂತ ಕೇಳಿದ್ದಾರೆ. ಆದ್ರೆ ಬಿಸಿಸಿಐ, ಪ್ರದರ್ಶನಕ್ಕಿಂತ ವಯಸ್ಸಿಗೇ ಹೆಚ್ಚು ಆದ್ಯತೆ ನೀಡ್ತಿರೋದೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ..! ಹಾಗಾದ್ರೆ ಟೀಮ್​ ಇಂಡಿಯಾ ಆಯ್ಕೆಗೆ ಬಿಸಿಸಿಐ ಮುಂದಿರುವ ಮಾನದಂಡಗಳೇನು.? ವಯಸ್ಸಾ..? ಪ್ರದರ್ಶನವಾ..? ಅನ್ನೋ ಪ್ರಶ್ನೆ ಹುಟ್ಟು ಹಾಕಿದೆ.

‘ಉನಾದ್ಕತ್​ ಆಯ್ಕೆಯಾಗೋದು ಕಷ್ಟ’
‘2019-20ರ ರಣಜಿ ಟ್ರೋಫಿ ಫೈನಲ್‌ನಲ್ಲಿ ನಾನು ಒಬ್ಬ ಸೆಲೆಕ್ಟರ್‌ನನ್ನು ಕೇಳಿದೆ. ಉನಾದ್ಕತ್​​ 60ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿ, ಏಕಾಂಗಿಯಾಗಿ ತಂಡವನ್ನು ಫೈನಲ್​​ವರೆಗೂ ಕೊಂಡೊಯ್ದಿದ್ದಾರೆ. ಅವರನ್ನು ಕನಿಷ್ಠ ಭಾರತ ಎ ತಂಡಕ್ಕೆ ಆಯ್ಕೆ ಮಾಡಬಹುದಲ್ಲವೇ ಎಂದು ಕೇಳಿದ್ದೆ. ಆಗ ಉತ್ತರಿಸಿದ ಅವರು, ಉನಾದ್ಕತ್​​ರನ್ನ ಇನ್ನು ಮುಂದೆ ಭಾರತಕ್ಕೆ ಆಯ್ಕೆ ಮಾಡಲಾಗುವುದಿಲ್ಲ. ಉನಾದ್ಕತ್​ ವಯಸ್ಸು ಈಗಾಗಲೇ 32 ರಿಂದ 33 ಆಗಿದೆ. ಇದು ನಿವೃತ್ತಿಗೆ ಸಮೀಪಿಸುವ ವಯಸ್ಸು. ಹೀಗಾಗಿ ಅವರ ಮೇಲೆ ಪ್ರಯೋಗ ಮಾಡಿದರೂ ಏನು ಪ್ರಯೋಜನ..? ಇದರಿಂದಾಗಿ ಯುವ ಆಟಗಾರನಿಗೆ ಚಾನ್ಸ್​ ನೀಡಿದ್ರೆ, ಆತ 8-10 ವರ್ಷಗಳ ಕಾಲ ಆಡುತ್ತಾನೆ. ಅದೇ ಉನಾದ್ಕತ್​ ಎಷ್ಟು ವರ್ಷಗಳ ಕಾಲ ಆಡಲು ಸಾಧ್ಯ ಹೇಳಿ..?’
-ಕಾರ್ಸನ್​ ಘಾರ್ವಿ, ಸೌರಾಷ್ಟ್ರ ಕೋಚ್​

ಪ್ರದರ್ಶನಕ್ಕಿಂತ ವಯಸ್ಸಿಗೇ ಹೆಚ್ಚು ಪ್ರಿಫರೆನ್ಸ್​ ನೀಡೋದಾಗಿ ಹೇಳಿರೋದು, ಮಾಜಿ ಕ್ರಿಕೆಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅದೇ ನೋಡಿ ಆಸೀಸ್​ ಕ್ರಿಕೆಟ್​ ಮಂಡಳಿಯಲ್ಲಿ, ಬ್ರಾಡ್​ ಹ್ಯಾಡಿನ್​, ಮೈಕಲ್​ ಹಸ್ಸಿ, ಪಾಕ್​ನ ಮಿಸ್ಬಾ ಉಲ್​ ಹಕ್​, ಇಂಗ್ಲೆಂಡ್​ನ ಜೋನಾಥನ್​ ಟ್ರಾಟ್​.. ಹೀಗೆ ಹಲವಾರು ಕ್ರಿಕೆಟಿಗರು 28 ರಿಂದ 30ರ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಎಂಟ್ರಿ ಕೊಟ್ರು. ಆದ್ರೆ ವಿಶ್ವ ಕ್ರಿಕೆಟ್​ಗೆ ಮಾದರಿಯಾಗಿರೋ ಬಿಸಿಸಿಐ, ಪ್ರದರ್ಶನಕ್ಕಿಂತ ವಯಸ್ಸಿಗೆ ಬೆಲೆ ನೀಡಿರುವ ನಡೆ ಸರಿಯಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟರ್ಸ್​! ಈ ಹಿಂದೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್​ ಕೂಡ, ಉನಾದ್ಕತ್​ರನ್ನ ಆಯ್ಕೆ ಮಾಡದಿದ್ದಕ್ಕೆ ಕಿಡಿಕಾರಿದ್ದರು.

ಸಾಧನೆ ಮಾಡೋದಿಕ್ಕೆ ವಯಸ್ಸಿನ ಅಡ್ಡಿ ಇರೋದಿಲ್ಲ. ಹಾಗಂತ ವ್ಯವಹಾರಕ್ಕಾಗಿ ಪ್ರತಿಭೆಗಳನ್ನ ತುಳಿಯುವ ಕೆಲಸ ಮಾಡಬಾರದು. ಅದೇನೇ ಇರಲಿ.. ಮುಂದಿನ ದಿನಗಳಲ್ಲಾದ್ರೂ ಬಿಸಿಸಿಐ ಇಂತಹ ನಿರ್ಧಾರದಿಂದ ಹೊರ ಬಂದು ಟ್ಯಾಲೆಂಟೆಡ್​ ಕ್ರಿಕೆಟಿಗರಿಗೆ ಮಣೆ ಹಾಕಲಿ ಅನ್ನೋದೇ, ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ!

The post ಎಡಗೈ ವೇಗಿ ಜಯದೇವ್ ಉನಾದ್ಕಟ್​​ಗೆ ಟೀಮ್ ಇಂಡಿಯಾ ಬಾಗಿಲು ಕ್ಲೋಸ್ appeared first on News First Kannada.

Source: newsfirstlive.com

Source link