ಎಡವಟ್ಟು ಮಾಡಿಕೊಂಡು ಸ್ಟಾರ್​ ನಟನ ಜತೆ ನಟಿಸುವ ಆಫರ್​ ಕಳೆದುಕೊಂಡ ಅಮಲಾ ಪೌಲ್​ | Amala Paul Missed Akkineni Nagarjuna Movie After demand Huge Remuneration


ಎಡವಟ್ಟು ಮಾಡಿಕೊಂಡು ಸ್ಟಾರ್​ ನಟನ ಜತೆ ನಟಿಸುವ ಆಫರ್​ ಕಳೆದುಕೊಂಡ ಅಮಲಾ ಪೌಲ್​

ಅಮಲಾ ಪೌಲ್​

ನಟರಿಗೆ ಕೊಡುವ ಸಂಭಾವನೆಗೆ ಹೋಲಿಸಿದರೆ ನಟಿಯರಿಗೆ ಸಿಗುವ ಸಂಭಾವನೆ ಕಡಿಮೆಯೇ. ಎಲ್ಲಾ ಚಿತ್ರರಂಗದಲ್ಲೂ ಇದು ನಡೆದೇ ಇದೆ. ಕೆಲವೇ ಕೆಲವು ನಟಿಯರು ಮಾತ್ರ, ಕೆಲವೇ ಕೆಲವು ಸಿನಿಮಾಗಳಲ್ಲಿ ಹೀರೋಗಿಂತ ಹೆಚ್ಚಿನ ಸಂಭಾವನೆ ಪಡೆದ ಉದಾಹರಣೆ ಇದೆ. ಅದೇ ರೀತಿ ಖ್ಯಾತ ನಟಿ ಅಮಲಾ ಪೌಲ್​ ಕೂಡ ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟಿದ್ದರು. ಈ ಕಾರಣಕ್ಕೆ ಅವರು ಸಿನಿಮಾ ಆಫರ್​ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ. ಅಕ್ಕಿನೇನಿ ನಾಗಾರ್ಜುನ ನಟನೆಯ ‘ಗೋಸ್ಟ್​’​  ಸಿನಿಮಾದಿಂದ ಕಾಜಲ್​ ಅಗರ್​ವಾಲ್​ ಹಿಂದೆ ಸರಿದಿದ್ದಾರೆ. ಇದಕ್ಕೆ ಈಗ ಅಮಲಾ ಪೌಲ್​ ಎಂಟ್ರಿ ಆಗಬೇಕಿತ್ತು. ದೊಡ್ಡ ಮೊತ್ತದ ಸಂಭಾವನೆಗೆ ಬೇಡಿಕೆ ಇಟ್ಟು ಅವರು ಎಡವಟ್ಟು ಮಾಡಿಕೊಂಡಿದ್ದಾರೆ.

ನಿರ್ದೇಶಕ ಪ್ರವೀಣ್​ ಅವರು ಅಮಾಲಾಗೆ ‘ಗೋಸ್ಟ್​’ನಲ್ಲಿ ನಟಿಸಲು ಆಫರ್​ ನೀಡಿದ್ದರು. ಸಿನಿಮಾದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ನಾಯಕ-ನಾಯಕಿ ಉಳಿದುಕೊಳ್ಳುವ ಪರಿಸ್ಥಿತಿ ಬಂದೊದಗುತ್ತದೆ. ಈ ವೇಳೆ ಇಬ್ಬರ ನಡುವೆ ಪ್ರೀತಿ ಮೂಡುತ್ತದೆ. ಇದನ್ನು ಹಾಡಿನ ಮೂಲಕ ತೋರಿಸೋಕೆ ನಿರ್ದೇಶಕರು ನಿರ್ಧರಿಸಿದ್ದಾರೆ. ಲಿಪ್​ ಲಾಕ್​ ಸೇರಿ ಕೆಲ ಇಂಟಿಮೇಟ್​ ದೃಶ್ಯಗಳು ಇದರಲ್ಲಿ ಇರಲಿದೆ. ಸಿನಿಮಾ ಸಂಭಾವನೆಯ ಜತೆಗೆ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳೋಕೆ ಅಮಲಾ ಹೆಚ್ಚಿನ ಹಣ ಕೇಳಿದ್ದರು. ಇದನ್ನು ಭರಿಸೋಕೆ ನಿರ್ಮಾಪಕರು ನಿರಾಕರಿಸಿದ್ದಾರೆ.

ಈಗಾಗಲೇ ‘ಗೋಸ್ಟ್​’ ಸಿನಿಮಾದ ಶೂಟಿಂಗ್​ ಪ್ರಾರಂಭಗೊಂಡಿದೆ. ನಾಯಕಿ ಇಲ್ಲದ ದೃಶ್ಯಗಳನ್ನು ಶೂಟ್​ ಮಾಡಲಾಗುತ್ತಿದೆ. ಹೀರೋಯಿನ್​ ಬದಲಾದ ಕಾರಣಕ್ಕೆ ಸಿನಿಮಾದ ಶೂಟಿಂಗ್​ ವಿಳಂಬವಾಗಬಹುದು. ಮುಂದಿನ ಎರಡು ತಿಂಗಳಲ್ಲಿ ಸಂಪೂರ್ಣವಾಗಿ ಸಿನಿಮಾ ಶೂಟಿಂಗ್​ ಮುಗಿಸುವ ಆಲೋಚನೆ ಚಿತ್ರತಂಡಕ್ಕೆ ಇತ್ತು. ಆದರೆ, ಅದು ಕೈಗೂಡೂವ ಸೂಚನೆ ಕಾಣುತ್ತಿಲ್ಲ.

ಅಮಲಾ ಪೌಲ್​ ಎರಡು ತಮಿಳು ಹಾಗೂ ಒಂದು ಮಲಯಾಳಂ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ ಸಂದರ್ಭದಲ್ಲಿ ಅಮಲಾ ಪೌಲ್​ ಭಾವನಾತ್ಮಕವಾಗಿ ಪೋಸ್ಟ್ ಒಂದನ್ನು ಮಾಡಿದ್ದರು. ಬಹುಬೇಗನೆ ನಮ್ಮನ್ನು ಬಿಟ್ಟು ತೆರಳಿದಿರಿ ಎಂದು ಅಮಲಾ ಬರೆದುಕೊಂಡಿದ್ದರು.

ಇದನ್ನೂ ಓದಿ: ‘ಪುನೀತ್​ ರಾಜ್​ಕುಮಾರ್​​​ ಇನ್ನೂ ಇಲ್ಲೇ ಇದ್ದಾರೆ ಅನಿಸುತ್ತಿದೆ’; ಅಕ್ಕಿನೇನಿ ನಾಗಾರ್ಜುನ ಬೇಸರ

Samantha: ಮದುವೆ ಹೆಣ್ಣಿಗೆ ಮೇಕಪ್​ ಮಾಡ್ತಾರೆ ಸಮಂತಾ; ಬುಕಿಂಗ್​ ಓಪನ್​ ಆಗಿದೆ ಎಂದ ನಟಿ

TV9 Kannada


Leave a Reply

Your email address will not be published. Required fields are marked *