ಕೋಲಾರ: ಎತ್ತಿನ ಬಂಡಿಗೆ ಹಿಂಬದಿಯಿಂದ ಐಷರ್ ವಾಹನ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಹಾಗೂ ಎರಡು ಎತ್ತುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೋಲಾರದ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಾರಾಯಣಸ್ವಾಮಿ(45) ಮೃತ ದುರ್ದೈವಿ. ಜಿಲ್ಲೆಯ, ಶ್ರೀನಿವಾಸಪುರ ತಾಲ್ಲೂಕಿನ ಅರಿಕೆರೆ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವೆಂಕಟರಮಣಪ್ಪ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗ್ತಿದೆ. ಐಶರ್​ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

The post ಎತ್ತಿನ ಬಂಡಿಗೆ ಐಷರ್ ವಾಹನ ಡಿಕ್ಕಿ- ಓರ್ವ ವ್ಯಕ್ತಿ, ಎತ್ತುಗಳು ಸ್ಥಳದಲ್ಲೇ ಸಾವು appeared first on News First Kannada.

Source: newsfirstlive.com

Source link