‘ಎದೆ ತುಂಬಿ ಹಾಡುವೆನು’ ಈಗ ಮತ್ತಷ್ಟು ಕಲರ್​​ಫುಲ್.. ವೇದಿಕೆ ಮೇಲೆ ದಸರಾ ರಂಗು

ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಈ ವಾರ ಸಖತ್ ಕಲರ್ಫುಲ್ ಆಗಿ ಬರುತ್ತಿದ್ದು, ಜಗಮಗಿಸುವ ವೇದಿಕೆಯಲ್ಲಿ ಜನಪದ ಹಾಡುಗಳ ಮಹಾ ಮೇಳ ನಡೆಯುತ್ತಿದೆ.

ಜನಪದ ದಸರಾ ಕಾನ್ಸೆಪ್ಟ್ ಮೂಲಕ ಕರ್ನಾಟಕದ ವಿವಿಧ ಜನಪದ ವಾದ್ಯ ವೃಂದವನ್ನ ಎದೆ ತುಂಬಿ ಹಾಡುವೆನು ವೇದಿಕೆಗೆ ಕಲರ್ಸ್ ಕನ್ನಡ ಕರೆತಂದಿದೆ.. ಈ ವಾರ ಗೆಸ್ಟ್ ಕೂಡ ಬಂದಿದ್ದು, ಎಕ್ಸೈಟ್ಮೆಂಟ್ ಹೆಚ್ಚಿಸಿದೆ. ಅಷ್ಟೇ ಅಲ್ಲದೆ ಮೈಸೂರು ದಸರಾ ಮಾದರಿಯಲ್ಲಿ ಸಂಚಿಕೆ ಬರುತ್ತಿದ್ದು, ಹಾಡುಗಳ ಹಬ್ಬ ಸೃಷ್ಟಿಯಾಗಿದೆ.

ಪ್ರತಿಯೊಬ್ಬರ ಪರ್ಫಮೆನ್ಸ್ ಕೂಡ ಭರ್ಜರಿಯಾಗಿದ್ದು, ಅದ್ರಲ್ಲೂ ಸೂರ್ಯಕಾಂತ್ ಹಾಡಿಗೆ ಎಲ್ಲರೂ ಮೂಕವಿಸ್ಮಿತರಾಗಿದ್ದಾರೆ.. ಇನ್ನು ಕಿರಣ್ ಹಾಗೂ ಚಿನ್ಮಯ್ ಹಾಡಿನ ಮೋಡಿಗೆ ಮನಸೋತ ಎಲ್ಲರೂ ಕುಣಿದು ಕುಪ್ಪಳಿಸಿದ್ದು, ನೀವು ಕೂಡ ಕುಣಿಯೋದು ಗ್ಯಾರಂಟಿ.

ಒಟ್ನಲ್ಲಿ ಅದ್ಧೂರಿಯಾಗಿ ಜನಪದ ಸೊಗಡನ್ನ ವೇದಿಕೆಗೆ ತಂದಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಈ ವಾರ ಮನರಂಜನೆಯ ಜೊತೆಗೆ ಫುಲ್ ಪವರ್ ಪ್ಯಾಕ್ನಲ್ಲಿ ಬರುತ್ತಿದ್ದು, ದಸರಾ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರಗು ತರುತ್ತಿದೆ.

News First Live Kannada

Leave a comment

Your email address will not be published. Required fields are marked *