ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್​ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು? | Puneeth Rajkumar remembered in Ede Tumbi Haduvenu Program


ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಪುನೀತ್​ಗೆ ಸ್ವರ ನಮನ; ಗುರು ಕಿರಣ್ ಹೇಳಿದ್ದೇನು?

ಗುರುಕಿರಣ್​

ನಟ ಪುನೀತ್​ ರಾಜ್​ಕುಮಾರ್​ ಇಲ್ಲ ಎನ್ನುವ ವಿಚಾರವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಸಾಕಷ್ಟು ಜನರು ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಲರ್ಸ್​ ಕನ್ನಡವಾಹಿಯಲ್ಲಿ ಪ್ರಸಾರವಾಗುತ್ತಿರುವ​ ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಪುನೀತ್​ಗೆ ಸ್ವರ ನಮನ ಸಲ್ಲಿಸಲಾಗಿದೆ. ಈ ವಾರದ ಎಪಿಸೋಡ್ ಸಂಪೂರ್ಣವಾಗಿ​ ಪುನೀತ್​ ನೆನಪು ಮಾಡಿಕೊಳ್ಳುವ ಹಾಗೂ ಅವರಿಗೆ ನಮನ ಸಲ್ಲಿಸುವ ಕೆಲಸ ವೇದಿಕೆ ಮೇಲೆ ಆಗಲಿದೆ ಎನ್ನಲಾಗುತ್ತಿದೆ.

ಎಸ್​.ಪಿ. ಬಾಲಸುಬ್ರಹ್ಮಣ್ಯಂ​ ತೀರ್ಪುಗಾರರಾಗಿ ನಡೆಸಿಕೊಡುತ್ತಿದ್ದ  ‘ಎದೆ ತುಂಬಿ ಹಾಡುವೆನು’ ಸಂಗೀತ  ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿತ್ತು. ಸಾಕಷ್ಟು ಟ್ಯಾಲೆಂಟ್​ಗಳಿಗೆ ಇದು ವೇದಿಕೆ ಆಗಿತ್ತು. ಈಗ ಕಲರ್ಸ್​ ಕನ್ನಡ ವಾಹಿನಿ ಈ ಶೋನ ಹೊಸ ಸೀಸನ್​ ಆರಂಭಿಸಿದೆ. ಆಗಸ್ಟ್​ 14ರಂದು ಈ ರಿಯಾಲಿಟಿ ಶೋ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ವಿಶೇಷ ತೀರ್ಪುಗಾರರಾಗಿ ಎಸ್‌ಪಿಬಿ ಅವರ ಪುತ್ರ ಎಸ್.ಪಿ. ಚರಣ್ ಇದ್ದಾರೆ. ಈ ವೇದಿಕೆ ಮೇಲೆ ಪುನೀತ್​ ಅವರಿಗೆ ನಮನ ಸಲ್ಲಿಸಲಾಗಿದೆ.

ಪುನೀತ್​ ಹೃದಯಾಘಾತದಿಂದ ನಿಧನ ಹೊಂದುವ ಹಿಂದಿನ ದಿನ ಅಂದರೆ ಅಕ್ಟೋಬರ್​ 28ರ ರಾತ್ರಿ ಅವರು ಗಾಯಕ ಗುರುಕಿರಣ್​ ಅವರ ಮನೆಗೆ ತೆರಳಿದ್ದರು. ಗುರುಕಿರಣ್​ ಬರ್ತ್​ಡೇ ಪಾರ್ಟಿಯಲ್ಲಿ ಪುನೀತ್​ ನಗುತ್ತಾ ಓಡಾಡಿಕೊಂಡಿದ್ದರು. ಆದರೆ, ಬೆಳಗ್ಗೆ ಆಗುವವರೆಗೆ ಪುನೀತ್ ನಿಧನ ಹೊಂದಿದ್ದರು. ಈ ಘಟನೆ ಗುರುಕಿರಣ್​​ಗೆ ಶಾಕ್​ ನೀಡಿದೆ. ರಾತ್ರಿ ಪಾರ್ಟಿಯಲ್ಲಿ ಹಾಯಾಗಿ ಸಮಯ ಕಳೆದಿದ್ದ ಅಪ್ಪು ಮುಂಜಾನೆ ಇಲ್ಲ ಎನ್ನುವುದನ್ನು ಅವರ ಬಳಿ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅವರು ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಮಾತು ಪೂರ್ಣಗೊಳ್ಳುವ ವೇಳೆ ಅವರ ಕಣ್ಣೀರ ಕೋಡಿ ಒಡೆದಿತ್ತು. ‘ರಾತ್ರಿ ನೋಡಿದ ವ್ಯಕ್ತಿ ಬೆಳಗ್ಗೆ ಇಲ್ಲ ಎಂದರೆ..’ ಎಂದು ಗುರುಕಿರಣ್​ ಭಾವುಕರಾದರು. ​​

ಇದನ್ನೂ ಓದಿ: ಬೆಂಗಳೂರಿನ ಎಸ್​ಆರ್​ವಿ ಥಿಯೇಟರ್​ನಲ್ಲಿ ಕೊನೆಯದಾಗಿ ಅಟೆಂಡ್​ ಮಾಡಿದ್ದ ಪುನೀತ್​; ಇಲ್ಲಿದೆ ಸಿಸಿಟಿವಿ ವಿಡಿಯೋ

ಸಾಯುವುದಕ್ಕೂ ಒಂದು ವಾರ ಮೊದಲು ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದ ಪುನೀತ್​ ರಾಜ್​ಕುಮಾರ್​

TV9 Kannada


Leave a Reply

Your email address will not be published.