ಎದೆ ತುಂಬಿ ಹಾಡುವೆನು ಸಂಗೀತ ಇನ್ನೂ ಕೇವಲ 3 ವಾರ ಮಾತ್ರ ಪ್ರಸಾರ..!

ಎದೆ ತುಂಬಿ ಹಾಡುವೆನು ಸಂಗೀತ ಕಾರ್ಯಕ್ರಮ ಗಾನ ಲೋಕದಲ್ಲಿ ಅದ್ಭುತ ಸೃಷ್ಟಿಸಿದ ಶೋ. ಇದಕ್ಕೆ ಮುಖ್ಯ ಕಾರಣ ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಮಣ್ಯಂ. ಕಿರುತೆರೆಯಲ್ಲಿ ಇಂತಹದೊಂದ್ದು ಸಂಗೀತ ಕಾರ್ಯಕ್ರಮ ಮಾಡಬಹುದು ಅಂತಾ ತೋರಿಸಿಕೊಟ್ಟವರು. ಅವರು ಶುರು ಮಾಡಿದ ಸಂಗೀತ ಪರಂಪರೆ ಹಲವು ಆವೃತ್ತಿಯಲ್ಲಿ ಮೂಡಿ ಬಂದು ಜನರ ಫೇವರೆಟ್​ ಲಿಸ್ಟ್​ಗೆ ಸೇರ್ಪಡೆಯಾಗಿದೆ.
ಎಸ್​ಪಿಬಿ ಅವರ ಕಾಲಾ ನಂತರ ಅವರು ಹಾಕಿ ಕೊಟ್ಟ ದಾರಿಯಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಆವೃತ್ತಿಯನ್ನ ಕಲರ್ಸ್​ ಕನ್ನಡ ಶುರುಮಾಡಿ ಅಗಸ್ಟ್​ 14 ರಿಂದ ಕನ್ನಡಿಗರಿಗೆ ಸಂಗೀತ ರಸದೌತಣ ನೀಡುತ್ತಾ ಬಂದಿದೆ. ಇನ್ನೊಂದು ವಿಶೇಷ ಅಂದ್ರೇ ಕಾರ್ಯಕ್ರಮವನ್ನ ಎಸ್​ಪಿಬಿ ಅವರ ಪುತ್ರ ಚರಣ್​ ಅವರೇ ಲಾಂಚ್​ ಮಾಡಿದ್ದರು. ಈಗ ಈ ವಿಷಯವನ್ನ ಮತ್ತೋಮ್ಮೆ ಪ್ರಸ್ತಾಪಿಸಲು ಕಾರಣ ಎದೆ ತುಂಬಿ ಹಾಡುವೆನು ಫಿನಾಲೆ ಹಂತ ತಲುಪಿದ್ದು ಇನ್ನೂ ಕೇವಲ 3 ವಾರಗಳು ಮಾತ್ರ ನಿಮ್ಮ ಮನೆಗೆ ಬರಲಿದೆ.

ಇನ್ನು, ಎದೆ ತುಂಬಿ ಹಾಡುವೆನು ಶೋ ಸಾಕಷ್ಟು ವಿಭಿನ್ನವಾಗಿ ಹೊಸ ಹೊಸ ಕಾನ್ಸೆಪ್ಟ್ ಮೂಲಕ ಸಂಗೀತದ ಜೊತೆಗೆ ಮನರಂಜನೆ ನೀಡುತ್ತಿದ್ದು, ಎಸ್​ಪಿಬಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಅವರ ನಡೆ, ನುಡಿ ನೆನದು ಅದೇಷ್ಟೊ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಷ್ಟೇಯಲ್ಲ..ಬಡ ಪ್ರತಿಭೆಗಳು ಬೆಳಕಿಗೆ ತಂದು ಅವರ ಬದುಕಿಗೆ ದಾರಿ ದೀಪವಾಗಿದೆ. ಎಮೋಷನಲ್​ ಕ್ಷಣಗಳ ನಡುವೆ ಕೂಡ ಮಸ್ತ್​ ಮನೆರಂಜನೆ ನೀಡಿರುವ ಸ್ಪರ್ಧಿಗಳು.. ಶೋ ಉದ್ದಕ್ಕೂ ಅದ್ಭತ ಪರ್ಫಾಮನ್ಸ್​ಗಳನ್ನ ನೀಡಿ ಸೈ ಎನಿಸಿಕೊಂಡಿದ್ದಾರೆ. ಮಾಸ್ ರೌಂಡ್​, ರೆಟ್ರೋ ರೌಂಡ್​, ಜನಪದ ರೌಂಡ್​ ಹೀಗೆ ಹಲವು ವಿಭಿನ್ನ ಬಗೆಯ ಸುತ್ತುಗಳ ಮೂಲಕ ಎಲ್ಲಾ ಬಗೆಯ ಹಾಡುಗಳನ್ನ ಹಾಡಿ ವೀಕ್ಷಕರನ್ನ ರಂಜಿಸಿದ್ದಾರೆ…

ಕಳೆದ ವಾರ ರಾಜಾ-ರಾಣಿ ಜೋಡಿಗಳ ಮೂಲಕ ಬಂದಿದ್ದ ಎದೆ ತುಂಬಿ ಹಾಡುವೆನು ಸ್ಪರ್ಧಿಗಳು ಸ್ಪರ್ಧೆಯನ್ನ ಪಕ್ಕಕ್ಕಿಟ್ಟು ಕೊಂಚ ರಿಲ್ಯಾಕ್ಷ ಆಗಿ ಎಂಜಾಯ್ ಮಾಡಿದ್ರು. ಆದ್ರೇ ಈ ವಾರ ಫಿನಾಲೆ ಟೆನ್ಶನ್​ ಶುರುವಾಗಿದೆ. ಈ ವಾರ ನೇರ ಫಿನಾಲೆಗೆ ಲಗ್ಗೆ ಇಡುವ ಅವಕಾಶವನ್ನ ಸ್ಪರ್ಧಿಗಳಿಗೆ ನೀಡಲಾಗಿದ್ದು, ಟಿಕೇಟ್​ ಟೂ ಫಿನಾಲೆ ರೌಂಡ್​ ನಡಿತಾಯಿದೆ. ಈ ಸುತ್ತಿನಲ್ಲಿ ಗೆದ್ದರೆ ಫಿನಾಲೆ ಪಕ್ಕಾ ಆಗಿದ್ದು, ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಪರ್ಫಾಮ್​ ಮಾಡಿದ್ದಾರೆ. ಇನ್ನೊಂದು ವಿಶೇಷ ಅಂದ್ರೇ ನಟ ಶ್ರೀಮುರಳಿ ಹಾಗೂ ನಟಿ ಆಶಿಕಾ ಶೋಗೆ ಬಂದಿದ್ದಾರೆ.

ಈ ನಡವೇ ಪುನೀತ್ ರಾಜ್​ಕುಮಾರ್​ ನೆನೆದು ಇಡೀ ವೇದಿಕೆ ಭಾವುಕವಾಗಿದ್ದು, ಶ್ರೀಮುರುಳಿ ಅವರು ಅಪ್ಪುಗಾಗಿ ಹಾಡೊಂದನ್ನ ಡೆಡಿಕೇಟ್​ ಮಾಡಿದ್ದಾರೆ. ​ ಒಟ್ನಲ್ಲಿ ಇನ್ನೂ ಕೆಲವೇ ವಾರಗಳಲ್ಲಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮುಕ್ತಾಯವಾಗುತ್ತಿದ್ದು, ಫಿನಾಲೆಗೆ ಯಾರು ಎಂಟ್ರಿ ಕೊಡಲಿದ್ದಾರೆ. ಯಾರ ಮುಡಿಗೆ ಎದೆ ತುಂಬಿ ಹಾಡುವೆನು ಟ್ರೋಫಿ ಸೇರಲಿದೆ ಎಂಬುವುದನ್ನ ಕಾದು ನೋಡಬೇಕು.

News First Live Kannada

Leave a comment

Your email address will not be published. Required fields are marked *