ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸಾಂಕ್ರಾಮಿಕದ ಕೆಟ್ಟ ಪರಿಸ್ಥಿತಿ ಇದೆ ಎಂದು ಒಂದು ತಿಂಗಳ ಹಿಂದೆಯೇ ಹೇಳಿದ್ದೆ. ವ್ಯವಸ್ಥಿತ ಯೋಜನೆ ರೂಪಿಸದ ಕಾರಣ ಸಾಕಷ್ಟು ಸಾವು ನೋವು ಆದವು. ಮೇ ತಿಂಗಳೊಂದರಲ್ಲೇ ಒಂದು ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮತ್ತೆ ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಪರೋಕ್ಷವಾಗಿವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಇಂದಿಗೂ ಮೈಸೂರಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಇದರಿಂದ ಉದ್ಯಮದ ಮೇಲೆ ಸಾಕಷ್ಟು ಒಡೆತ ಬಿದ್ದಿದೆ. ಮುಂದಿನ ದಿನಗಳಲ್ಲಿ ಪಾಸಿಟಿವಿಟಿ ರೇಟ್ ಶೇಕಡ 5ಕ್ಕೆ ತರಲು ಶ್ರಮ ವಹಿಸಲಾಗ್ತಿದೆ. ನೂತನ ಡಿಸಿ ಡಾ.ಬಗಾದಿ ಗೌತಮ್ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ನಾನು ಎದೆ ಮುಟ್ಟಿಕೊಂಡು ಹೇಳ್ತೀನಿ ನಾನು ಯಾವ ವ್ಯವಹಾರ, ಉದ್ಯಮವನ್ನೂ ನಡೆಸುತ್ತಿಲ್ಲ.
ನನ್ನ ವ್ಯವಹಾರ ಜನರ ಹಿತ ಅಷ್ಟೇ. ನಾನು ಯಾವ ಕಂಟ್ರಾಕ್ಟರ್‌ಗಳಿಂದ ನಯಾಪೈಸೆ ಕಮಿಷನ್ ಪಡೆದಿಲ್ಲ‌. ಅಧಿಕಾರಿಗಳತ್ರ ಕೈ ಚಾಚಿಲ್ಲ, ಒಂದು ಟೀ ಕೂಡ ಕುಡಿದಿಲ್ಲ. ಇದಕ್ಕಾಗಿಯೇ ನನಗೆ ಅಧಿಕಾರಿಗಳು ಗೌರವ ಕೊಡ್ತಾರೆ, ನಾನು ಕೊಡ್ತೀನಿ ಎಂದರು.

The post ‘ಎದೆ ಮುಟ್ಕೊಂಡು ಹೇಳ್ತೀನಿ.. ಯಾವ ಕಂಟ್ರಾಕ್ಟರ್‌ಗಳಿಂದ ನಯಾಪೈಸೆ ಕಮಿಷನ್ ಪಡೆದಿಲ್ಲ‌’ appeared first on News First Kannada.

Source: newsfirstlive.com

Source link