ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮೂವರು ಅಂತಾರಾಷ್ಟ್ರೀಯ ಲೇಡಿ ಡ್ರಗ್​ ಪೆಡ್ಲರ್​ಗಳ ಸೆರೆ | Terrific Operation of NBC Officers: Arrest by three international lady drug peddlers


ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಮೂವರು ಅಂತಾರಾಷ್ಟ್ರೀಯ ಲೇಡಿ ಡ್ರಗ್​ ಪೆಡ್ಲರ್​ಗಳ ಸೆರೆ

ವಶ ಪಡಿಸಿಕೊಂಡ ಡ್ರಗ್ಸ್​

ಮಹಿಳೆಯರ ವಿಚಾರಣೆಯಿಂದ ನೈಜೀರಿಯಾದ ಕಿಂಗ್ ಪಿನ್ ಮತ್ತು ದೆಹಲಿಯ ಆತನ ಜಾಲದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದು, ನೈಜೀರಿಯಾ ಮೂಲದ ಮಹಿಳೆ ಸೇರಿ ಒಂಭತ್ತು ಜನರನ್ನ ಎಸ್​ಸಿಬಿ ಬಂಧಿಸಿದೆ. 

ಬೆಂಗಳೂರು: ಎನ್​ಸಿಬಿ ಅಧಿಕಾರಿಗಳ ಭರ್ಜರಿ ಕಾರ್ಯಚರಣೆಯಿಂದ ಮೂವರು ಇಂಟರ್ ನ್ಯಾಷನಲ್ ಲೇಡಿ ಡ್ರಗ್ ಪೆಡ್ಲರ್​ಗಳ ಬಂಧನ ಮಾಡಿದ್ದು, ಬರೋಬ್ಬರಿ 34.89 ಕೆ.ಜಿಯ 52 ಕೋಟಿ ಬೆಲೆಬಾಳುವ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಸೂಟ್ ಕೇಸ್ ತಳಭಾಗದಲ್ಲಿ ಹೆರಾಯಿನ್​ ಸಂಗ್ರಹಿಸಿ ಸಾಗಟ ಮಾಡಲು ಯತ್ನಿಸಿದ್ದಾರೆ. ಮೊದಲಿಗೆ ಜಿಂಬಾಬ್ವೆಯಿಂದ 7 ಕೆ.ಜಿ. ಹೆರಾಹಿನ್ ಬೆಂಗಳೂರು ಕೆಐಎಎಲ್ ತಂದಿದ್ದ ಓರ್ವ ಡ್ರಗ್ ಪೆಡ್ಲರ್, ಆ‌ ಮೂಲಕ ಮಾಹಿತಿ ಆಧರಿಸಿ ಮತ್ತಿಬ್ಬರು ಲೇಡಿ ಪೆಡ್ಲರ್​ಗಳ ಬಂಧನ ಮಾಡಲಾಗಿದೆ. ಲೇಡಿ ಪೆಡ್ಲರ್​ಗಳು ತಂಗಿದ್ದ ಲಾಡ್ಜ್​ನಲ್ಲಿ ಎನ್​ಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದು, ಈ ವೇಳೆ ಅದೇ ಮಾದರಿಯ ಬ್ಯಾಗ್ ನಲ್ಲಿ 6.890 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಕೂಡಲೇ ಟೆಕ್ನಿಕಲ್ ಅನಾಲಿಸಿಸ್ ಮಾಡಿ ಆರೋಪಿಗಳ ಬಂಧನ ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *