ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ ಮಾಡುವಂತೆ ಆಗ್ರಹ; ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಬಿಗಿಭದ್ರತೆ | Flower growers are protesting at the APMC demanding a flower market in Chikballapur


ಎಪಿಎಂಸಿಯಲ್ಲಿ ಹೂವಿನ ಮಾರುಕಟ್ಟೆ ಮಾಡುವಂತೆ ಆಗ್ರಹ; ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಬಿಗಿಭದ್ರತೆ

ಹೂ ಸುರಿದು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ

ಚಿಕ್ಕಬಳ್ಳಾಪುರ: ಎಪಿಎಂಸಿಯಲ್ಲಿ (APMC) ಹೂವಿನ ಮಾರುಕಟ್ಟೆ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಹೂವಿನ ಬೆಳೆಗಾರರು ಮತ್ತು ವರ್ತಕರು ಆಗ್ರಹಿಸುತ್ತಿದ್ದಾರೆ. ಮಳೆ ಹಿನ್ನೆಲೆ ತಾತ್ಕಾಲಿಕ ಮಾರುಕಟ್ಟೆ ಕೆಸರು ಗದ್ದೆಯಂತಾಗಿದೆ. ಆ ಜಾಗದಲ್ಲಿ ಹೂವಿನ ವ್ಯಾಪಾರ ಮಾಡುವುದಕ್ಕೆ ಕಷ್ಟವಾಗುತ್ತಿದೆ. ಹೀಗಾಗಿ ಎಪಿಎಂಸಿಯಲ್ಲೇ ಮಾರಾಟಕ್ಕೆ ಅವಕಾಶ ನೀಡಬೇಕು ಅಂತ ರೈತರು ಒತ್ತಾಯಿಸುತ್ತಿದ್ದಾರೆ. ಎಪಿಎಂಸಿಯಲ್ಲಿ ಹೂವು ಮಾರಾಟಕ್ಕೆ ಯತ್ನಿಸುತ್ತಿದ್ದು, ರೈತರು, ವರ್ತಕರು ಹಾಗೂ ಎಪಿಎಂಸಿ ನಡುವೆ ವಾಗ್ವಾದ ನಡೆಯುತ್ತಿದೆ.

ತಾತ್ಕಾಲಿಕ ಮಾರುಕಟ್ಟೆ ಕೆಸರು ಗದ್ದೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ರೈತರು, ಕೊರೊನಾ ನಿಯಮಾವಳಿ ಸಡಿಲಗೊಂಡರು ಅವಕಾಶ ಯಾಕೆ ಕೊಡುತ್ತಿಲ್ಲವೆಂದು ಪ್ರಶ್ನಿಸುತ್ತಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಎಪಿಎಂಸಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಭುಗಿಲೆದ್ದ ಹೂವು ಬೆಳೆಗಾರರ ಆಕ್ರೋಶ
ಜಿಲ್ಲೆಯಲ್ಲಿ ಹೂವು ಬೆಳೆಗಾರರ ಆಕ್ರೋಶ ಭುಗಿಲೆದ್ದಿದೆ. ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಹೂವು ಸುರಿದು ರೈತರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ನೀಡದಿರುವುದು ಮತ್ತು ಹೂವು ವರ್ತಕರನ್ನು ಪೊಲೀಸರು ವಶಕ್ಕೆ ಪಡೆದ ಹಿನ್ನೆಲೆ ರೈತರು ರಸ್ತೆಗೆ ಹೂವು ಸುರಿದು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಆಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ತಾತ್ಕಾಲಿಕ ಮಾರುಕಟ್ಟೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ
ತಾತ್ಕಾಲಿಕ ಹೂ ಮಾರುಕಟ್ಟೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ ರೈತರು, ವರ್ತಕರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಈ ವೇಳೆ ರೈತರು ಮಾರುಕಟ್ಟೆಯನ್ನು ಕೆ.ವಿ.ಕ್ಯಾಂಪಸ್​ನಿಂದ ಎಪಿಎಂಸಿಗೆ ಸ್ಥಳಾಂತರ ಮಾಡುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ

ರೈತರಿಗೆ ಮೋಸ ಮಾಡಿದ್ದ ಆರೋಪಿಗಳಿಂದ ಹಣ ವಸೂಲಿ; ಪೊಲೀಸರ ಕಾರ್ಯಕ್ಕೆ ಮೆಚ್ಚಿ 1 ಲಕ್ಷ ರೂ. ಬಹುಮಾನ

2020-21ನೇ ಸಾಲಿನ ಖಾಸಗಿ ಶಾಲೆಗಳ ಶುಲ್ಕ; ಹೆಚ್ಚುವರಿ ಫೀಸ್ ಹಣ ವಾಪಸ್ ನೀಡಲು ಆದೇಶಿಸಿದ ಸರ್ಕಾರ

TV9 Kannada


Leave a Reply

Your email address will not be published. Required fields are marked *