ಎಫ್​ಡಿಎ ನೌಕರಿ ಕೊಡಿಸುವುದಾಗಿ ತನ್ನದೇ ಸಂಬಂಧಿ ಯುವಕನಿಂದ ಹಣ ಪಡೆದು ವಂಚಿಸಿದ ಮಹಿಳಾ ಪಿಎಸ್​ಐ | Female PSI cheated by getting money from her own relative by assuring to give job in FDA


2020 ರಲ್ಲೆ ಎಫ್​ಡಿಎ ಪ್ರಶ್ನೆ ಪತ್ರಿಕೆ ಲೀಕ್ ಆಗಿ ರಾಜ್ಯಾದ್ಯಂತ ಸದ್ದು ಮಾಡಿತ್ತು .ಅದೇ ವರ್ಷದಲ್ಲೇ ಅಶ್ವಿನಿ ಅನಂತಪುರ ಇಂತಹದ್ದೊಂದು ಡೀಲ್ ಮಾಡಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಎಫ್​ಡಿಎ ನೌಕರಿ ಕೊಡಿಸುವುದಾಗಿ ತನ್ನದೇ ಸಂಬಂಧಿ ಯುವಕನಿಂದ ಹಣ ಪಡೆದು ವಂಚಿಸಿದ ಮಹಿಳಾ ಪಿಎಸ್​ಐ

ಬಸವರಾಜ ಜಳಕಿ, ಅಶ್ವಿನಿ ಅನಂತಪುರ

ಬಾಗಲಕೋಟೆ: ಹೇಗಾದರೂ ಮಾಡಿ ಒಂದು ಸರಕಾರಿ ಕೆಲಸ ಪಡೆಯಬೇಕು. ಸರಕಾರಿ ಕೆಲಸ ಸಿಕ್ರೆ ಜೀವನ ಸೆಟಲ್ ಆಯ್ತು ಅಂತ ಅನೇಕರು ವಿವಿಧ ಕಸರತ್ತು ನಡೆಸುತ್ತಿರ್ತಾರೆ‌. ಇಂತಹ‌ ಮನಸ್ಥಿತಿ ಇರುವವರನ್ನು ಇಟ್ಟುಕೊಂಡು ಕೆಲವರು ನೌಕರಿ ಆಮಿಷ ತೋರಿಸಿ ಹಣ ಹೊಡೆಯುವವರು ಇದ್ದಾರೆ. ಇಂತಹ ಅದೆಷ್ಟೋ ಉದಾಹರಣೆ ನಮ್ಮ ಕಣ್ಮುಂದೆ ಇವೆ. ಈಗ ಇಂತಹ ವಂಚನೆ ಮಾಡಿದೋರು ಓರ್ವ ಮಹಿಳಾ ಪಿಎಸ್ಐ. ನೌಕರಿ ಕೊಡಿಸೋದಾಗಿ ಹೇಳಿ ಸಂಬಂಧಿ ಯುವಕನಿಂದ ಲಕ್ಷ ಲಕ್ಷ ಹಣ ಪಡೆದು ಕೈಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ.

ಅಶ್ವಿನಿ ಅನಂತಪುರ ಎಂಬ ಮಹಿಳಾ ಸಬ್ ಇನ್ಸ್ಪೆಕ್ಟರ್ ಎಪ್​ಡಿಎ ನೌಕರಿ ಕೊಡಿಸೋದಾಗಿ ಹೇಳಿ ಬಸವರಾಜ ಜಳಕಿ ಎಂಬ ಯುವಕನಿಂದ ಎರಡು ಲಕ್ಷ ಹಣ ಪಡೆದು ವಂಚಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ. ಬಸವರಾಜ ಜಳಕಿ ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಯಾಗಿದ್ದಾನೆ. ಈತನಿಗೆ 2020ರ ಅವಧಿಯಲ್ಲಿ ಎಫ್ ಡಿ ಎ ನೌಕರಿ ಕೊಡಿಸೋದಾಗಿ ಹೇಳಿ ಎರಡು ಲಕ್ಷ ಹಣ ಪಡೆದಿದ್ದಾರಂತೆ. ಆದರೆ ಹಣವನ್ನು ನೇರವಾಗಿ ಪಡೆಯದೆ ತಮ್ಮ ತಂದೆಯ ಖಾತೆ ಮೂಲಕ ಬಸವರಾಜ ಸಹೋದರ ಸಂಗೇಶ್ ಅವರಿಂದ ಹಣ ಹಾಕಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಸಾಕ್ಷಿ ಎಂಬಂತೆ ಸಬ್ ಇನ್ಸ್ಪೆಕ್ಟರ್ ಅಶ್ವಿನಿ ಹಾಗೂ ಬಸವರಾಜ ಸಹೋದರ ಸಂಗಮೇಶ್ ಮಾತಾಡಿದ ಅಡಿಯೊ ಲಭ್ಯವಾಗಿದೆ. ಇದರಲ್ಲಿ ಹಣಕಾಸಿನ ಬಗ್ಗೆ ಮಾತಾಡಿದ ಅಡಿಯೊದಲ್ಲಿ ಒಟ್ಟು ಹದಿನೈದು ಲಕ್ಷ ಆಗುತ್ತದೆ. ಸದ್ಯ ಅಡ್ವಾನ್ಸ್ ಆಗಿ ಎರಡು ಲಕ್ಷ ಕೇಳ್ತಿದಾರೆ ಅಂತ ಮಾತಾಡಿದ್ದಾರೆ. ಜೊತೆಗೆ ಹಣ ವರ್ಗಾವಣೆ ಬಗ್ಗೆ ಬ್ಯಾಂಕ್ ದಾಖಲಾತಿ ಸಿಕ್ಕಿವೆ.

TV9 Kannada


Leave a Reply

Your email address will not be published.