ರಾಯಲ್ ಚಾಲೆಂಜರ್ಸ್ ಅಪತ್ಭಾಂದವ ಎಬಿಡಿ, ಅಂತರಾಷ್ಟ್ರೀಯ ಕ್ರಿಕೆಟ್​​ಗೆ ಗುಡ್​ಬೈ ಹೇಳಿ ವರ್ಷಗಳೇ ಕಳೆದಿವೆ. ಐಪಿಎಲ್​ನಲ್ಲಿ ಸಕ್ರಿಯರಾಗಿರೋ ಮಿಸ್ಟರ್​ 360 ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೆ ಇದ್ದಾರೆ. ಮೊನ್ನೆ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲೂ ಎಬಿಡಿಯ ಸಾಲಿಡ್​ ಇನ್ನಿಂಗ್ಸ್​​ ಅಭಿಮಾನಿಗಳನ್ನ ರಂಜಿಸಿತ್ತು.

ಎಬಿಡಿಯ ಈ ಮಾಸ್ಟರ್​ ಕ್ಲಾಸ್​ ಇನ್ನಿಂಗ್ಸ್​ ಬಗ್ಗೆ ಮಾತನಾಡಿರೋ ಕೊಹ್ಲಿ, ಡಿವಿಲಿಯರ್ಸ್​ ಅಂತರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ ಎಂದು ಅನ್ನಿಸುತ್ತಿಲ್ಲ ಎಂದಿದ್ದಾರೆ. ಐದು ತಿಂಗಳಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದ ಎಬಿಡಿ ಬ್ಯಾಟಿಂಗ್ ನೋಡಿದರೆ ಮುಂದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಲ್ಲ ಅಂತಾ ಹೇಳೋದು ಅಸಾಧ್ಯ ಎಂದಿದ್ದಾರೆ.

ಸದ್ಯ ವಿಶ್ವ ಕ್ರಿಕೆಟ್​​ನಲ್ಲಿ ಎಬಿಡಿ ಬ್ಯಾಟಿಂಗ್ ಬಗ್ಗೆ ಕೊಂಡಾಡ್ತಿದ್ದು, ಸೌತ್​ ಆಫ್ರಿಕಾ ತಂಡದ ಪರ ಟಿ20 ವಿಶ್ವಕಪ್​ನಲ್ಲಿ ಆಡುವಂತೆ ಅಭಿಮಾನಿಗಳು ಒತ್ತಾಯಿಸ್ತಿದ್ದಾರೆ. ಆದ್ರೆ ಎಬಿಡಿ ಆಡುವರಾ ಇಲ್ಲವಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

The post ಎಬಿಡಿ ನಿವೃತ್ತಿನಾ? ನೋ ವೇ ಚಾನ್ಸೇ ಇಲ್ಲ.. ಹಾಗೆ ಅನಿಸೋದೇ ಇಲ್ಲ ಅಂದಿದ್ಯಾರು ಗೊತ್ತಾ? appeared first on News First Kannada.

Source: newsfirstlive.com

Source link