ಎಬಿಡಿ ನಿವೃತ್ತಿ RCBಗೆ ಹೊಸ ತಲೆನೋವು -ಯಾರ್​ ಆಗ್ತಾರೆ ಮುಂದಿನ ಎಬಿ ಡಿವಿಲಿಯರ್ಸ್?


ಎಬಿ ಡಿವಿಲಿಯರ್ಸ್ ಗ್ಲೋಬಲ್ ಟಿ20 ಟೂರ್ನಿಗಳಿಂದ ಹಿಂದೆ ಸರಿದಿದ್ದೆ ತಡ, ರಾಯಲ್​ ಚಾಲೆಂಜರ್ಸ್​ಗೆ ಹೊಸ ತಲೆನೋವು ಸೃಷ್ಟಿಯಾಗಿದೆ. ರಿಟೈನ್​ಗೆ ಮುಂದಾಗಿದ್ದ ಆರ್​ಸಿಬಿ, ಈಗ ಎಬಿಡಿಯಂತ ಸ್ಪೋಟಕ ದಾಂಡಿಗನ ಹುಡುಕಾಟಕ್ಕೆ ಮುಂದಾಗ್ತಿದೆ.

ಎಬಿ ಡಿವಿಲಿಯರ್ಸ್.. ರಾಯಲ್ ಚಾಲೆಂಜರ್ಸ್​ ಬೆಂಗಳೂರಿನ ಮ್ಯಾಚ್ ವಿನ್ನರ್.. ಗೇಮ್ ಚೇಂಜರ್​.. ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದ ಕೈಚೆಲ್ಲಿ ಹೋಗಿದ್ದ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದ ವಾರಿಯರ್.. ಆದ್ರೀಗ ಈ ರಣಬೇಟೆಗಾರ ಗ್ಲೋಬಲ್ ಟಿ20 ಕ್ರಿಕೆಟ್​ಗೆ ಗುಡ್​​ಬೈ ಹೇಳಿರೋದು ರಾಯಲ್​ ಚಾಲೆಂಜರ್ಸ್ ಬೆಂಗಳೂರಿಗೆ, ಹೊಸ ಸವಾಲಿನ ಜೊತೆಗೆ ತಲೆನೋವನ್ನೇ ಸೃಷ್ಟಿಸಿದೆ.

ಹೌದು, ಎಬಿಡಿ ಎಂಬ ಮ್ಯಾಚ್​ ವಿನ್ನರ್​ನನ್ನ ಮಿಸ್​ ಮಾಡಿಕೊಳ್ಳಲಿರುವ ಆರ್​ಸಿಬಿ. ಮುಂದಿನ ಆವೃತ್ತಿಯಲ್ಲಿ ಆತನ ಸ್ಥಾನಕ್ಕಾಗಿ ಸಮರ್ಥ ಆಟಗಾರನನ್ನ ಹುಡುಕುವ ಸವಾಲು ಎದುರಾಗಿದೆ. ಇದಕ್ಕಾಗಿ ಬೆಂಗಳೂರು ಫ್ರಾಂಚೈಸಿ, ಕೆಲ ಆಟಗಾರರನ್ನ ಲೀಸ್ಟ್​ ಮಾಡಿಕೊಂಡಿದೆ.

ರಿಟೈನ್​ನ ಅಡಿ ಮ್ಯಾಕ್ಸ್​ವೆಲ್​​ನ ಉಳಿಸಿಕೊಳ್ಳಲು ಚಿಂತನೆ..?
ಹೌದು, ಮೊದಲು ರಿಟೈನ್​ನ ಅಡಿ ಎಬಿ ಡಿವಿಲಿಯರ್ಸ್​ನ ಉಳಿಸಿಕೊಳ್ಳಲು ಮುಂದಾಗಿದ್ದ ಆರ್​ಸಿಬಿ, ಈಗ ಎಬಿಡಿಯ ನಿರ್ಧಾರದಿಂದಾಗಿ ಮ್ಯಾಕ್ಸ್​ವೆಲ್​ನ ರಿಟೈನ್ ಮಾಡಿಕೊಳ್ಳಲು ಮುಂದಾಗಿದೆ. ಅದ್ರಲ್ಲೂ ಕಳೆದ ಆವೃತ್ತಿಯಲ್ಲಿ ಆರ್​ಸಿಬಿ ಕೈ ಹಿಡಿದಿದ್ದ ಮ್ಯಾಕ್ಸಿ, ಟಿ20 ಕ್ರಿಕೆಟ್​ಗೆ ಹೇಳಿ ಮಾಡಿಸಿದ ಆಟಗಾರ. ಓರ್ವ ಗೇಮ್​​ ಚೇಂಜರ್ ಅಂತಾನೇ ಗುರುತಿಸಿಕೊಂಡಿರುವ ಮ್ಯಾಕ್ಸಿ, ರಿಟೈನ್ ಆಗೋದು ಬಹುತೇಕ ಖಚಿತ. ಅಷ್ಟೇ ಅಲ್ಲ, ಕಳೆದ ಆವೃತ್ತಿಯಲ್ಲಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ಟಿಮ್ ಡೇವಿಡ್​​ರನ್ನು ಉಳಿಸಿಕೊಳ್ಳುವ ಲೆಕ್ಕಚಾರವೂ ರಾಯಲ್ ಚಾಲೆಂಜರ್ಸ್ ಮುಂದಿದೆ.

ಇಂಗ್ಲೆಂಡ್​ನ ಬಿಗ್ ಹಿಟ್ಟರ್​ನ ಮೇಲೂ ಆರ್​ಸಿಬಿ ಕಣ್ಣು
ಇತ್ತೀಚಿನ ದಿನಗಳಲ್ಲಿ ದಿನಗಳಲ್ಲಿ ಹೆಚ್ಚು ಸೌಂಡ್ ಮಾಡ್ತಿರೋ ಆಟಗಾರ, ಇಂಗ್ಲೆಂಡ್​ನ ಲಿಯಾಮ್ ಲಿವಿಂಗ್​ಸ್ಟೋನ್.. ಪವರ್ ಹಿಟ್ಟರ್​​ ಆಗಿ ಗುರುತಿಸಿಕೊಂಡಿರುವ ಈತ, ಎಬಿಡಿ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲ ಆಟಗಾರನೂ ಆಗಿದ್ದಾನೆ. ಹೀಗಾಗಿ ಈ ಇಂಗ್ಲೀಷ್ ಕ್ರಿಕೆಟರ್​ ಮೇಲೂ ಆರ್​ಸಿಬಿ, ಒಂದು ಕಣ್ಣಿಟ್ಟಿದೆ.

ಜೋಸ್ ಬಟ್ಲರ್​ಗೆ ಗಾಳ ಹಾಕಲು ರೆಡಿಯಾಗಿದೆ ಆರ್​​ಸಿಬಿ
ಹೌದು..! ಈಗಾಗಲೇ ವಿರಾಟ್​ ನಾಯಕತ್ವ ತ್ಯಜಿಸಿದ್ದಾರೆ. ಎಬಿಡಿ ನಿರ್ಗಮಿಸಿದ್ದಾರೆ. ಹೀಗಾಗಿ ವಿಕೆಟ್​ ಕೀಪರ್ & ಬ್ಯಾಟರ್​​​​​​, ನಾಯಕತ್ವದ ಗುಣಗಳನ್ನ ಹೊಂದಿರುವ ಆಟಗಾರನನ್ನ ಕರೆತರುವ ಯತ್ನದಲ್ಲಿದೆ. ಈ ಎಲ್ಲಾ ಅರ್ಹತೆಗಳೂ ಇಂಗ್ಲೆಂಡ್​ನ ಜೋಸ್ ಬಟ್ಲರ್​ರಲ್ಲಿವೆ. ಹೀಗಾಗಿ ಜೋಸ್​ ಬಟ್ಲರ್​​​ರನ್ನ ಮೆಗಾ ಹರಾಜಿನಲ್ಲಿ ಖರೀದಿಸಿ, ಒಂದೇ ಕಲ್ಲಿನಲ್ಲಿ ಎರೆಡು ಹಕ್ಕಿ ಹೊಡೆಯೋ ಪ್ಲಾನ್​ ಕೂಡ ಆರ್​ಸಿಬಿಯದ್ದಾಗಿದೆ.

ಇವರಷ್ಟೇ ಅಲ್ಲ, ಕಿವೀಸ್​ನ ಸ್ಪೋಟಕ ಆಟಗಾರ ಗ್ಲೆನ್ ಫಿಲಿಪ್ಸ್​ ಮೇಲೂ ಆರ್​ಸಿಬಿ ಕಣ್ಣಿಟ್ಟಿದೆ. ಸ್ಪೋಟಕ ಆಟಕ್ಕೆ ಹೆಸರುವಾಸಿಯಾಗಿರೋ ಈತ, ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸಬಲ್ಲರು. ಅಷ್ಟೇ ಅಲ್ಲ, ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಬಲ್ಲ ಈತ, ಕಿವೀಸ್​ನ ಗೇಮ್​ ಚೇಂಜರ್ ಪ್ಲೇಯರ್ ಕೂಡ.. ಹೀಗಾಗಿ ಈತನನ್ನೂ ಮೆಗಾ ಹರಾಜಿನಲ್ಲಿ ಖರೀದಿಸೋ ಲೆಕ್ಕಚಾರದಲ್ಲಿದೆ.

News First Live Kannada


Leave a Reply

Your email address will not be published. Required fields are marked *