ಭಾರತದಲ್ಲಿ ಪ್ರತಿಭಾವಂತರಿಗೇನು ಕೊರತೆಯಿಲ್ಲ. ನಾವು ಭೇಟಿ ಮಾಡುವ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ವಿಶೇಷವಾದ ಪ್ರತಿಭೆ ಅಡಗಿರುತ್ತದೆ. ಸಾಮಾಜಿಕ ಮಾಧ್ಯಮ ಇಲ್ಲದಿದ್ದರೆ ಜನರಿಗೆ ತಮ್ಮ ಪ್ರತಿಭೆಯನ್ನು ಹೊರಹಾಕಲು ವೇದಿಕೆಗಳೇ ಸಿಗುತ್ತಿರಲಿಲ್ಲ.

ಅಂದಹಾಗೇ ಚಿಕ್ಕ ಬಾಲಕನೊರ್ವ ಎಮ್ಮೆ ಮೇಲೆ ಕುಳಿತು ಬಾಲಿವುಡ್ ಹಾಡೊಂದನ್ನು ಹಾಡಿದ್ದಾನೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಪಟ್ಟೆ ವೈರಲ್ ಆಗುತ್ತಿದೆ. ಆಟ ಆಡುವ ವಯಸ್ಸಿನಲ್ಲಿ ಈ ಬಾಲಕ ಎಮ್ಮೆ ಮೇಲೆ ಆರಾಮವಾಗಿ ಕುಳಿತುಕೊಂಡು ಸಲ್ಮಾನ್‍ಖಾನ್ ಅಭಿನಯದ ‘ಮುಜ್ಸೆ ಶಾದಿ ಕರೋಗಿ’ ಎಂಬ ಹಾಡನ್ನು ಇಂಪಾಗಿ ಹಾಡಿದ್ದಾನೆ.

ವೀಡಿಯೋ ಎಲ್ಲಿಯದು ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಾಲಕನ ಧ್ವನಿಯನ್ನು ಕೇಳಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಈ ಹಾಡು 2004ರಲ್ಲಿ ಹಿಟ್ ಪಡೆದುಕೊಂಡಿತ್ತು. ವೈರಲ್ ಆಗುತ್ತಿರುವ ಈ ವೀಡಿಯೋ ನೋಡಿದ ಎಲ್ಲರೂ ಬಾಲಕನ ಧ್ವನಿಗೆ ಮಾರುಹೋಗುತ್ತಿದ್ದಾರೆ.

ಡೇವಿಡ್ ಧವನ್ ನಿರ್ದೇಶಿಸಿ, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿರುವ 2004ರ ರೊಮ್ಯಾಂಟಿಕ್ ಸಿನಿಮಾ ‘ಮುಜ್ಸೆ ಶಾದಿ ಕರೋಗಿ’ ಆಗಿದ್ದು, ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ.

The post ಎಮ್ಮೆ ಮೇಲೆ ಕುಳಿತು ‘ಮುಜ್ಸೆ ಶಾದಿ ಕರೋಗಿ’ ಎಂದ ಹುಡುಗ – ಬಾಲಕನ ಕಂಠಕ್ಕೆ ನೆಟ್ಟಿಗರು ಫಿದಾ appeared first on Public TV.

Source: publictv.in

Source link