ಬಿಗ್‍ಬಾಸ್ ಮೊದಲ   ಇನ್ನಿಂಗ್ಸ್‌ನಲ್ಲಿ 76 ದಿನ ಕಳೆದಿರುವ ನೀವು ಸೆಕೆಂಡ್ ಇನ್ನಿಂಗ್ಸ್‌ನಲ್ಲಿ 26 ದಿನಗಳ ಕಾಲ ಕಳೆದಿದ್ದೀರ. ಏನು ವ್ಯತ್ಯಾಸವಾಗಿದೆ, ಸ್ಪರ್ಧಿಗಳಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ ಎಂದು ಸುದೀಪ್ ಸೂಪರ್ ಸಂಡೇ ವಿಥ್ ಸುದೀಪದಲ್ಲಿ ಸ್ಪರ್ಧಿಗಳನ್ನು ಕೇಳಿದಾಗ ಕೆಲವು ಒಳ್ಳೆಯ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ದಿವ್ಯಾ ಸುರೇಶ್ ಮೊದಲ ಇನ್ನಿಂಗ್ಸ್‌ನಲ್ಲಿ ಮಂಜು ಜೊತೆಗೆ ಹೆಚ್ಚಾಗಿ ಇರುತ್ತಿದ್ದರು. ಆದರೆ ಇದೀಗ ಎಲ್ಲರ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಎಲ್ಲರ ಜೊತೆಗೆ ಬೆರೆಯುತ್ತಾರೆ. ಗೇಮ್‍ನಲ್ಲಿಯೂ ಚೆನ್ನಾಗಿ ಆಡುತ್ತಾರೆ ಎಂದು ಮನೆಮಂದಿ ಹೇಳಿದ್ದಾರೆ. ಚಕ್ರವರ್ತಿ, ದಿವ್ಯಾ ಸುರೇಶ್ ನಡುವೆ ಈ ಹಿಂದೆ ಕೆಲವು ವಿಚಾರವಾಗಿ ಮನಸ್ಥಾಪವಿತ್ತು ಆದರೆ ಇದೀಗ ಚಕ್ರವರ್ತಿ ಅವರು ದಿವ್ಯಾ ಅವರನ್ನು ಹೊಗಳಿದ್ದಾರೆ. ಪಾಸಿಟಿವ್ ಆಗಿರುತ್ತಾರೆ. ಎಲ್ಲರನ್ನೂ ಸಮಾನವಾಗಿ ನೋಡುತ್ತಾರೆ, ತಾಳ್ಮೆ ಬಂದಿದೆ ಎಂದು ದಿವ್ಯಾ ಅವರನ್ನು ಹಾಡಿಹೋಗಳಿದ್ದಾರೆ.

ಶುಭಾ ಮೊದಲಿದ್ದ ಹಾಗೇ ಸೋಂಬೆರಿಯಾಗಿ ಇದ್ದಾರೆ. ಅವರ ಕ್ಯೂಟ್‍ನೇಸ್ ಹಾಗೇಯೆ ಇದೆ. ರಾಣಿ ಹಾಗೇ ಇದ್ದರು, ಇದೀಗ ಮಹಾರಾಣಿಯಂತೆ ಆಗಿದ್ದಾರೆ, ಅವರು ಬದಲಾಗಿಯೇ ಇಲ್ಲ ಎಂದು ಕೆಲವರು ಶುಭಾ ಕುರಿತಾಗಿ ಹೇಳಿದ್ದಾರೆ. ಅರವಿಂದ್, ಮಂಜು, ಮೊದಲಿದ್ದ ಹಾಗೇ ಇದ್ದಾರೆ. ವೈಷ್ಣವಿ ತುಂಬಾ ಕಾಮಿಡಿಯಾಗಿ ಮಾತನಾಡಿಕೊಳ್ಳುತ್ತಾ ತುಂಬಾ ಬದಲಾಗಿದ್ದಾರೆ ಎಂದು ಮನೆ ಮಂದಿ ಸದಸ್ಯರ ಕುರಿತಾಗಿ ಅವರ ಅನಿಸಿಕೆಗಳನ್ನು ಹೇಳಿದ್ದಾರೆ.

ಯಾರೇ ಬದಲಾದರು ಚಕ್ರವರ್ತಿ ಮತ್ತು ಪ್ರಶಾಂತ್ ಅವರು ಬದಲಾಗಿಲ್ಲ. ಲಾಸ್ಟ್ ಸೀಸನ್ ಅಲ್ಲಿ ಇದ್ದ ಹಾಗೇ ಇದ್ದಾರೆ. ಅವರು ಗಲಾಟೆ ಮಾಡುತ್ತಾ, ಮಾತನಾಡುತ್ತಾ, ಗೇಮ್ ಆಡುತ್ತಾ ಇದ್ದಾರೆ. ಆದರೆ ಇಬ್ಬರು ಜಗಳ ಮಾಡಿಕೊಳ್ಳುತ್ತಾರೆ ಆದರೆ ಒಬ್ಬರಿಗೊಬ್ಬರು ಬಿಟ್ಟುಕೊಡುವುದಿಲ್ಲ ಅವರಿಬ್ಬರು ಸ್ನೇಹ ಮೊದಲಿದ್ದಾಗೆ ಇದೇ ಎಂದು ವೈಷ್ಣವಿ ಹೇಳಿದ್ದಾರೆ.

ಸ್ಪರ್ಧಿಗಳ ಮಾತು ಕೇಳಿದೆ ಸುದೀಪ್ ಹೌದು ಕೆಲವು ಬದಲಾವಣೆಗಳಾಗಿವೆ. ಚಕ್ರವರ್ತಿ ಅವರು ಹಿಂದೆಯೂ ಗಲಾಟೆ ಮಾಡುತ್ತಾ ಇದ್ರು, ಈಗಲೂ ಮಾಡುತ್ತಿದ್ದಾರೆ, ಚಕ್ರವರ್ತಿ ಅವರು ಕವನ ರೂಪದಲ್ಲಿ ಬೇಸರ ಹೊರಹಾಕುತ್ತಿದ್ದರು, ಈಗಲೂ ಅದೇ ರೀತಿ ಇದೇ ಅಲ್ವಾ ಎಂದು ಸುದೀಪ್ ಹೇಳಿದ್ದಾರೆ. ಈ ವೇಳೆ ಮನೆಮಂದಿ ಜೋರಾಗಿ ನಕ್ಕಿದ್ದಾರೆ.

ಬಿಗ್‍ಬಾಸ್ ಸ್ಪರ್ಧಿಗಳಲ್ಲಿ ಕೆಲವು ವಿಚಾರಗಳ ಕುರಿತಾಗಿ ಬದಲಾವಣೆಯಾಗಿರುವುದು ನಿಜ. ಕಳೆದ ಸೀಸನ್‍ನ ಎಪಿಸೋಡ್ ನೋಡಿ ಮತ್ತೆ ಮನೆಗೆ ಎಂಟ್ರಿಕೊಟ್ಟಿರುವ ಸ್ಪರ್ಧಿಗಳಿಗೆ ಯಾರ ಜೊತೆಗೆ ಹೇಗೆ ಇರಬೇಕು, ಏನು ಮಾತನಾಡಬಾರದು, ಮಾತನಾಡಬೇಕು, ಹೇಗೆ ಗೇಮ್ ಆಡಬೇಕು ಎನ್ನುವುದು ಗೊತ್ತಾಗಿದೆ. ಹೀಗಾಗಿ ಎಲ್ಲರೂ ತುಂಬಾ ಪ್ಲ್ಯಾನ್ ಮಾಡಿ ಆಟ ಶುರು ಮಾಡಿದ್ದಾರೆ. ಮನೆಯಲ್ಲಿ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆಗುತ್ತಿದೆ, ಬಿಗ್‍ಬಾಸ್ ಆಟ ದಿನದಿಂದ ದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ.

The post ಎರಡನೇ ಇನ್ನಿಂಗ್ಸ್‌ನಲ್ಲಿ ‘ಬಿಗ್’ ಮನೆ ಮಂದಿಯಲ್ಲಾದ ಬದಲಾವಣೆ ಏನು? appeared first on Public TV.

Source: publictv.in

Source link