ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ್ ಆಸ್ಪತ್ರೆಯಲ್ಲಿ ಎರಡನೇ ಬಾರಿ ಕವಿಡ್​ ಟೆಸ್ಟ್​ ನಡೆಸಲಾಗಿದ್ದು ಎರಡನೇ ಬಾರಿಯೂ ಟೆಸ್ಟ್​ ವರದಿ ನೆಗೆಟಿವ್ ಬಂದಿದೆ ಎಂದು ಸಿದ್ದರಾಮಯ್ಯ ಆಪ್ತ ವೈದ್ಯ ಡಾ. ರವಿಕುಮಾರ್ ಹೇಳಿಕೆ ನೀಡಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಸಿದ್ದರಾಮಯ್ಯಗೆ ಇನ್ನೆರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಆಪ್ತ ವೈದ್ಯ ಡಾ. ರವಿಕುಮಾರ್ ಅವರ ಸಲಹೆಯಂತೆ ಇನ್ನು ಎರಡು ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯ ನಾನ್ ಕೋವಿಡ್ ಸ್ಪೆಷಲ್ ವಾರ್ಡ್​ನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಎರಡು ದಿನಗಳ ನಂತರ ತಮ್ಮ ನಿವಾಸಕ್ಕೆ ಹಿಂತಿರುಗಲಿದ್ದಾರೆ ಎನ್ನಲಾಗಿದೆ.

The post ಎರಡನೇ ಟೆಸ್ಟ್​​ನಲ್ಲೂ ಸಿದ್ದರಾಮಯ್ಯಗೆ ಕೋವಿಡ್ ನೆಗೆಟಿವ್: ಇನ್ನೆರಡು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ appeared first on News First Kannada.

Source: newsfirstlive.com

Source link