ಎರಡನೇ ಮದ್ವೆಗೆ ಮುಂದಾದ ಗಂಡನ ಮರ್ಮಾಂಗವನ್ನೇ ಇಲ್ಲವಾಗಿಸಿ ಕೊಲೆಗೈದ ಪತ್ನಿ

ಎರಡನೇ ಮದ್ವೆಗೆ ಮುಂದಾದ ಗಂಡನ ಮರ್ಮಾಂಗವನ್ನೇ ಇಲ್ಲವಾಗಿಸಿ ಕೊಲೆಗೈದ ಪತ್ನಿ

ಮುಜಾಫ್ಫರ್ ನಗರ: ಉತ್ತರ ಪ್ರದೇಶದ ಮುಜಾಫ್ಫರ್ ನಗರ ಜಿಲ್ಲೆಯ ಶಿಕಾರ್​ಪುರ್ ಗ್ರಾಮದಲ್ಲಿ ಪತ್ನಿಯೇ ಪತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪತಿ ಮತ್ತೊಂದು ಮದುವೆಗೆ ಮುಂದಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ.

ಗುರುವಾರ ಮಸೀದಿಯೊಂದರ ಬಳಿ ಈ ಘಟನೆ ನಡೆದಿದ್ದು ಪತಿ ಮತ್ತು ಪತ್ನಿ ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಎರಡನೇ ಮದುವೆ ವಿಚಾರಕ್ಕೆ ಪತಿಯೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಮಾತಿಗೆ ಮಾತು ಬೆಳೆದು ವಿಪರೀತಕ್ಕೆ ಹೋಗಿದ್ದು ಪತ್ನಿ ತನ್ನ ಪತಿಯ ಮರ್ಮಾಂಗಕ್ಕೆ ಗಂಭೀರ ಗಾಯ ಮಾಡಿ, ಹೊಡೆದು ಕೊಂದುಹಾಕಿದ್ದಾಳೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಭೊರಾಕ್ಲಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಮೃತನ ದೇಹವನ್ನ ಪೋಸ್ಟ್ ಮಾರ್ಟಮ್​ಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಇದೆ.

The post ಎರಡನೇ ಮದ್ವೆಗೆ ಮುಂದಾದ ಗಂಡನ ಮರ್ಮಾಂಗವನ್ನೇ ಇಲ್ಲವಾಗಿಸಿ ಕೊಲೆಗೈದ ಪತ್ನಿ appeared first on News First Kannada.

Source: newsfirstlive.com

Source link