ಬೆಂಗಳೂರು: ಮಲತಾಯಿಯ ಮಾತು ಕೇಳಿ ತಂದೆಯೊಬ್ಬ ಮೂವರು ಅಪ್ರಾಪ್ತ ಮಕ್ಕಳಿಗೆ ಮನಸೋ ಇಚ್ಛೆ ಕಬ್ಬಿಣದ ರಾಡ್‍ನಿಂದ ಸುಟ್ಟ ಅಮಾಯಕ ಘಟನೆಯೊಂದು ಜೆಪಿ ನಗರದಲ್ಲಿ ವರದಿಯಾಗಿದೆ.

ಮಕ್ಕಳಿಗೆ ಸುಟ್ಟ ಪಾಪಿ ತಂದೆಯನ್ನು ಸೆಲ್ವಂ ಎಂದು ಗುರುತಿಸಲಾಗಿದೆ. ಸೆಲ್ವಂ ಮೊದಲ ಪತ್ನಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸತ್ಯ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಮೊದಲ ಪತ್ನಿಗೆ ಮೂವರು ಮಕ್ಕಳಿದ್ದರು. ಮೊದಲ ಹೆಂಡತಿಯ ಮಕ್ಕಳ ಬಗ್ಗೆ ಸತ್ಯ ಗಂಡನ ಬಳಿ ಚಾಡಿ ಹೇಳುತ್ತಿದ್ದರಿಂದ ಕೋಪಗೊಂಡು ಮಕ್ಕಳ ಮೇಲೆ ಸೆಲ್ವಂ ರಾಡ್‍ನಿಂದ ಸುಟ್ಟು ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಸ್ಪರ್ಧಿಗಳ ಗೇಮ್ ಪ್ಲ್ಯಾನ್ ಕೇಳಿ ಅಚ್ಚರಿಗೊಳಗಾದ್ರು ಸುದೀಪ್..!

ಪುಟ್ಟ ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಮಕ್ಕಳು ಕಿರುಚಾಟ ನಡೆಸಲು ಆರಂಭಿಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಕಾರ್ಯ ಪ್ರವೃತರಾದ ಪೊಲೀಸರು ಸುಟ್ಟ ಗಾಯಗೊಂಡಿದ್ದ ಮೂವರು ಮಕ್ಕಳನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ. ಸೆಲ್ವಂ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಜೆಪಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಎರಡನೇ ಹೆಂಡತಿ ಮಾತು ಕೇಳಿ ಮಕ್ಕಳಿಗೆ ಕಬ್ಬಿಣದ ರಾಡ್‍ನಿಂದ ಸುಟ್ಟ ಪಾಪಿ ತಂದೆ appeared first on Public TV.

Source: publictv.in

Source link