ಬೆಂಗಳೂರು: ರಾಜ್ಯದಲ್ಲಿ ರೆಮ್​​ಡಿಸಿವಿರ್ ಕೊರತೆ ಇಲ್ಲ. ಹಲವು ಕಂಪನಿಗಳು ರೆಮ್​​ಡಿಸಿವಿರ್ ಕೊಡಲು ಮುಂದೆ ಬಂದಿವೆ. ಕೇಂದ್ರ ಸರ್ಕಾರ ಕೂಡ ರೆಮ್​​ಡಿಸಿವಿರ್ ವಿಚಾರದಲ್ಲಿ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ  ಎಂದಿದೆ ಅಂತಾ ಆರೋಗ್ಯ ಸಚಿವ ಡಾ K. ಸುಧಾಕರ್ ಹೇಳಿದ್ದಾರೆ.

2 ಡೋಸ್ ಲಸಿಕೆ​ ಪಡೆದವರು ಮಾಸ್ಕ್​​ ಮರೆಯದಂತೆ ಮನವಿ
ಇಂದು ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸುಧಾಕರ್, ಮುಂದಿನ 6 ತಿಂಗಳು, 1 ವರ್ಷದವರೆಗೆ ಎಲ್ಲರೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು. ಯಾರು ಎರಡು ಡೋಸ್ ಲಸಿಕೆ ಪಡೆದಿದ್ದೀರಾ, ಎಲ್ಲರಿಗೂ ಲಸಿಕೆ ಪ್ರಕ್ರಿಯೆ ಮುಗಿಯುವವರೆಗೂ, ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಸುಧಾಕರ್ ಮನವಿ ಮಾಡಿದ್ರು.

ಇನ್ನು ಕಪ್ಪು ಫಂಗಸ್​ ಔಷಧಿ ವಿಚಾರದಲ್ಲಿ ಸದಾನಂದಗೌಡರು ಕೆಲಸ ಮಾಡ್ತಿದ್ದಾರೆ. ನಮಗೂ 8-10 ಸಾವಿರ ವಯಲ್ಸ್ ಪೂರೈಕೆ ಮಾಡಿದ್ದಾರೆ. ಫಂಗಸ್​​ನಿಂದ ಮೃತರಾದವರ ಡೆತ್ ಆಡಿಟ್ಗೆ ಸೂಚನೆ ನೀಡಲಾಗಿದೆ. ಬ್ಲ್ಯಾಕ್​ ಫಂಗಸ್​​ನಿಂದ ರಾಜ್ಯದಲ್ಲಿ 30 ರಿಂದ 35 ಸಾವಾಗಿದೆ ಎಂದು ಹೇಳ್ತಾರೆ ಎಂದರು.

ಲಾಕ್​ಡೌನ್​ನಿಂದ ಏನೆಲ್ಲಾ ಒಳ್ಳೆಯದಾಗಿದೆ ಎಂದು ಗೊತ್ತಾಗಿದೆ. ಶೇ. 47ರಷ್ಟಿದ್ದ ಪಾಸಿಟಿವಿಟಿ ರೇಟ್​​ ಕಳೆದ 15 ದಿನಗಳಲ್ಲಿ 14-15ರಷ್ಟು ಇದೆ. ಮೊದಲು ಲಾಕ್​​ಡೌನ್ ಹೇರಿಕೆ ಮಾಡಿದ ರಾಜ್ಯಗಳಲ್ಲಿ ಶೇ. 8-9ರಷ್ಟಿದೆ. ತಾಂತ್ರಿಕ ಸಲಹಾ ಸಮಿತಿಯ ಜೊತೆ ಚರ್ಚೆ ಮಾಡಿ, ಅಂತಿಮವಾಗಿ ಸಿಎಂ ಲಾಕ್ಡೌನ್ ವಿಸ್ತರಣೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ರು.

ಮೂರನೇ ಕೊರೊನಾ ಅಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಧಾಕರ್, ನಾನು ಆರೋಗ್ಯ ಸಚಿವನಾಗಿ ಇಷ್ಟೇ ಹೇಳುತ್ತೇನೆ. ಯಾರಿಗೆ ಬಾಧಿಸುತ್ತೆ, ಯಾರಿಗೆಲ್ಲಾ ಬಾಧಿಸಲ್ಲ ಅನ್ನೋದಕ್ಕಿಂತ.. ಎರಡು ಲಸಿಕೆ ಡೋಸ್ ತೆಗೆದುಕೊಳ್ಳೋವರೆಗೂ ಇದು ಮುಂದುವರೆಯಲಿದೆ ಎಂದರು. ಲಸಿಕೆಯನ್ನು ತಂದು ಎಲ್ಲರಿಗೂ ಪೂರೈಸಲಾಗುವುದು. ಮಕ್ಕಳಿಗೆ ಸೋಂಕು ಬಂದ್ರೆ ಅವರಿಗೂ ಲಸಿಕೆ ನೀಡಲಾಗುವುದು. ಈಗ ಮಕ್ಕಳ ಮೇಲೆ ಪ್ರಯೋಗ ಮಾಡಲಾಗ್ತಿದೆ. ಅನೇಕ ಲಸಿಕಾ ಕಂಪನಿಗಳು ಕೆಲವೆಡೆ ಟ್ರಯಲ್ ರನ್ ಮಾಡುತ್ತಿವೆ. ಎಲ್ಲವನ್ನೂ ನೋಡುಕೊಂಡು ನಮ್ಮ ಮಕ್ಕಳಿಗೂ ಲಸಿಕೆ ಹಾಕಿಸಲಾಗುವುದು. ಹಿರಿಯರಿಗೆ ಮೊದಲು, ನಂತರ ಜನರನ್ನ ಸಂಪರ್ಕಿಸೋ ವೃತ್ತಿಯವರಿಗೆ. ಜೊತೆ ಜೊತೆಯಲ್ಲಿ ಎಲ್ಲರಿಗೂ ಎಲ್ಲಿಯವರೆಗೂ ತಲುಪಲು ಸಾಧ್ಯವೋ ಅಲ್ಲಿವರೆಗೂ ಲಸಿಕೆ ನೀಡುತ್ತೇವೆ ಎಂದು ತಿಳಿಸಿದ್ರು.

The post ಎರಡು ಡೋಸ್ ಕೊರೊನಾ ಲಸಿಕೆ ಪಡೆದಿದ್ದೀರಾ..? ಇದನ್ನ ತಪ್ಪದೇ ಮಾಡಿ appeared first on News First Kannada.

Source: newsfirstlive.com

Source link