ಎರಡು ಬಾರಿ ಕಾಫಿ ಮಂಡಳಿ ಅಧ್ಯಕ್ಷರಾಗಿದ್ದ ಭೋಜೇಗೌಡ ಹೆಜ್ಜೇನು ದಾಳಿಗೆ ಬಲಿಯಾದರು | Former coffee board president MS Bhojegowda dies in bee attack at his coffee plantation in Chikmagalur ARB


ಚಿಕ್ಕಮಗಳೂರು: ಇದು ಆಘಾತಕಾರಿ ಸುದ್ದಿ. ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಎಮ್ ಎಸ್ ಭೋಜೇಗೌಡ (MS Bhojegowda) ಅವರು ಶನಿವಾರ ಚಿಕ್ಕಮಗಳೂರಿನ ತಾಲ್ಲೂಕಿನಲ್ಲಿರುವ ತಮ್ಮ ಕಾಫಿ ಪ್ಲಾಂಟೇಶನ್ (coffee plantation) ನಲ್ಲಿ ಹೆಜ್ಜೇನು ದಾಳಿಗೊಳಗಾಗಿ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅಸಂಖ್ಯಾತ ಜೇನುನೊಣಗಳು (bees) ಅವರಿಗೆ ತಪ್ಪಿಸಿಕೊಳ್ಳುವ ಅವಕಾಶವನ್ನೂ ನೀಡದೆ ದಾಳಿ ನಡೆಸಿದವು. ಭೋಜೇಗೌಡರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಹೆಜ್ಜೇನು ದಾಳಿಯ ಬಳಿಕ ಅವರನ್ನು ಕೂಡಲೇ ಅಸ್ಪತ್ರೆಗೆ ತೆಗೆದುಕೊಂಡು ಹೋಗಲಾಯಿತಾದರೂ ಅದು ನಿಷ್ಫಲವಾಯಿತು.

ರಾಜಕೀಯ ವಲಯಗಳಲ್ಲಿ ಚತುರ ಅಡಳಿತಗಾರನಾಗಿ ಗುರುತಿಸಿಕೊಂಡಿದ್ದ ಭೋಜೇಗೌಡರು ಎರಡು ಬಾರಿ ಕಾಫಿ ಬೋರ್ಡ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಖುದ್ದು ಕಾಫಿ ಪ್ಲಾಂಟೇಶನ್ ನಲ್ಲಿ ತೊಡಗಿಸಿಕೊಂಡಿದ್ದರಿಂದ ಅವರಿಗೆ ಕಾಫಿ ಬೆಳಗಾರರು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವಿತ್ತು.

ಹಾಗಾಗೇ, ಅವರ ಅವಧಿಯಲ್ಲಿ ಉತ್ತಮ ಕೆಲಸಗಳಾದವು ಎಂದು ಹೇಳಲಾಗುತ್ತದೆ. ಸರಳ ಸ್ವಬಾವದ ಮೂಲಕ ಜನಾನುರಾಗಕ್ಕೆ ಪಾತ್ರರಾಗಿದ್ದ ಗೌಡರು, ಎಲ್ಲ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದು ವಿಶೇಷ. ಜನತಾ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ

ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಅವರು ಕೆಲಸ ಮಾಡಿದ್ದರು.
ಭೋಜೇಗೌಡರ ನಿಧನಕ್ಕೆ ಎಲ್ಲ ಪಕ್ಷಗಳ ಜಿಲ್ಲಾ ಮುಖಂಡರು ಸಂತಾಪ ಸೂಚಿಸಿದ್ದಾರೆ. ಮೂರು ಪಕ್ಷಗಳಲ್ಲೂ ಅವರು ಕೆಲಸ ಮಾಡಿದ್ದರಿಂದ ಎಲ್ಲರಿಗೂ ಅವರು ಸ್ನೇಹಿತರಾಗಿದ್ದರು.

TV9 Kannada


Leave a Reply

Your email address will not be published. Required fields are marked *