ಎರಡು ಮಕ್ಕಳ ನೀತಿ ಜಾರಿಗೆ ಮುಂದಾದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ

ಎರಡು ಮಕ್ಕಳ ನೀತಿ ಜಾರಿಗೆ ಮುಂದಾದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ

ಅಸ್ಸಾಂ: ಅಸ್ಸಾಂನಲ್ಲಿ ಕ್ರಮೇಣ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲಾಗುವುದು ಅಂತಾ ಅಸ್ಸಾಂ ಸಿಎಂ ಹಿಮಂತ್​ ಬಿಸ್ವ ಶರ್ಮಾ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅಸ್ಸಾಂ ಸಿಎಂ.. ರಾಜ್ಯದಿಂದ ಪ್ರಾಯೋಜಿತ ನಿರ್ದಿಷ್ಟ ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು ಎರಡು ಮಕ್ಕಳನ್ನು ಮಿತಿಗೊಳಿಸುವ ಯೋಜನೆಗೆ ಪ್ರೋತ್ಸಾಹ ನೀಡಲಿದ್ದೇವೆ ಎಂದಿದ್ದಾರೆ. ಇನ್ನು ಕೇಂದ್ರ ಸರ್ಕಾರವೂ ಅನೇಕ ಯೋಜನೆಗಳು ನೀಡುತ್ತಿರುವುದರಿಂದ ಈ ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ನೀತಿಯು ಅನ್ವಯವಾಗುವುದಿಲ್ಲ ಅಂತಾ ತಿಳಿಸಿದ್ದಾರೆ. ಇನ್ನು ಹಿಮಂತ್​ ಬಿಸ್ವಾ ಅವರ ಈ ನೀತಿಯನ್ನು ವಿರೋಧ ಪಕ್ಷಗಳು ಖಂಡಿಸಿವೆ.

ಹಿಮಂತ್ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ

The post ಎರಡು ಮಕ್ಕಳ ನೀತಿ ಜಾರಿಗೆ ಮುಂದಾದ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ appeared first on News First Kannada.

Source: newsfirstlive.com

Source link