ಎರಡು ರಾಜ್ಯಗಳ ‘ಕಾಂಟ್ರಾಕ್ಟರ್​ಗಳ ಗಲಾಟೆ’ಯೇ IT ದಾಳಿಗೆ ಕಾರಣ -ಏನಿದು ಗಲಾಟೆ..?

ಬೆಂಗಳೂರು: ಐಟಿ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆಯೇ ಕಳಂಕಿತ ಕಾಂಟ್ರಾಕ್ಟರ್ಸ್​ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಕಾಂಟ್ರಾಕ್ಟರ್ಸ್​ ನಿವಾಸ ಹಾಗೂ ಕಚೇರಿ ಮೇಲೆ ಲಗ್ಗೆಯಿಟ್ಟಿರುವ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬಿಎಸ್​ವೈ ಆಪ್ತನಿಗೂ IT ಶಾಕ್; 10ಕ್ಕೂ ಹೆಚ್ಚು ಅಧಿಕಾರಿಗಳ ನಿವಾಸದ ಮೇಲೆ ದಾಳಿ

ದಾಳಿಗೆ ಕಾರಣ ಏನು..?
ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ.. ಇಂದಿನ ಐಟಿ ದಾಳಿಗೆ ಎರಡು ರಾಜ್ಯಗಳ ಕಾಂಟ್ರಾಕ್ಟರ್ಸ್ ಮಧ್ಯೆ ನಡೆದ ಗಲಾಟೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ನೀರಾವರಿ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಾಂಟ್ರಾಕ್ಟ್​ ಗಳು ಆಂಧ್ರ ಮೂಲದ ಕಾಂಟ್ರಾಕ್ಟರ್​​ಗಳ ಪಾಲಾಗುತ್ತಿದ್ದವು ಎನ್ನಲಾಗಿದೆ. ಅದರಲ್ಲೂ ಪ್ರಮುಖವಾಗಿ ಕಾವೇರಿ ನಿಗಮ ಹಾಗೂ ಕೃಷ್ಣ ಜಲ ನಿಗಮಗಳ ಟೆಂಟರ್​ಗಳು ಆಂಧ್ರ ಮೂಲದವರ ಪಾಲಾಗುತ್ತಿದ್ದವು ಅಂತಾ ಹೇಳಲಾಗಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭ್ರಷ್ಟರ ಬೇಟೆಗೆ ಇಳಿದ IT ಅಧಿಕಾರಿಗಳು; ಬೆಂಗಳೂರು ಸೇರಿ 50 ಕಡೆ ದಾಳಿ

ಮೂರು ತಿಂಗಳಿಂದ ಮಾಹಿತಿ ಸಂಗ್ರಹ
ಇನ್ನು ಟೆಂಟರ್​​ ಹಂಚಿಕೆ ವಿಚಾರದಲ್ಲಿ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಸಹಾಯಕ ಉಮೇಶ್ ಪಾತ್ರ ಪ್ರಮುಖವಾಗಿತ್ತಂತೆ. ಪದೇ ಪದೇ ಎಲ್ಲಾ ಕಾಂಟ್ರಾಕ್ಟ್​​ಗಳು ಆಂಧ್ರದವರ ಪಾಲಾಗುತ್ತಿದ್ದರಿಂದ ಕರ್ನಾಟಕ ಮೂಲದ 8 ಮಂದಿ ಕಾಂಟ್ರಾಕ್ಟರ್ಸ್ ಐಟಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಆದಾಯ ಮತ್ತು ತೆರಿಗೆ ಇಲಾಖೆ ಕಳೆದ ಮೂರು ತಿಂಗಳಿನಿಂದ ದಾಖಲೆಗಳನ್ನ ಪರಿಶೀಲನೆಗೆ ಒಳಪಡಿಸಿತ್ತು. ಅದರಂತೆ ಇಂದು ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆಯಲ್ಲೂ ಕಾಂಟ್ರ್ಯಾಕ್ಟರ್ ನಿವಾಸದ ಮೇಲೆ ಐಟಿ ದಾಳಿ

News First Live Kannada

Leave a comment

Your email address will not be published. Required fields are marked *