ಕ್ರಿಕೆಟ್​​​ ಸಂಭಂದಿ ವಿಚಾರಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯವಾಗಿರುವ ಟೀಮ್ ಇಂಡಿಯಾ ಆಪ್​ ಸ್ಪಿನ್ನರ್​​​ ಆರ್​.ಅಶ್ವಿನ್​ ಈ ಬಾರಿ ಆತಂಕದ ಮಾತುಗಳನ್ನಾಡಿದ್ದಾರೆ. ತಾವು ಕಲಿತು ಬೆಳದ ಶಾಲೆಯಲ್ಲಾಗಿರುವ ಲೈಂಗಿಕ ಕಿರುಕುಳದ ಘಟನೆಯ ವಿರುದ್ಧ ಕೇರಂ ಸ್ಪಿನ್ನರ್​​ ಧ್ವನಿ ಎತ್ತಿದ್ದಾರೆ. ಚೆನ್ನೈನ ಪಿಎಸ್​​ಬಿಬಿ ಶಾಲೆಯ ಶಿಕ್ಷಕನನ್ನ ಇಬ್ಬರು ಬಾಲಕಿಯರ ಲೈಂಗಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಶ್ವಿನ್​ ಪ್ರತಿಕ್ರಿಯೆ ನೀಡಿದ್ದು, ಇಬ್ಬರು ಹೆಣ್ಣು ಮಕ್ಕಳ ತಂದೆಯಾಗಿ ನಾನು ವಿಚಲಿತನಾಗಿದ್ದೇನೆ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

‘ಪಿಎಸ್‌ಬಿಬಿಯ ಹಳೆಯ ವಿದ್ಯಾರ್ಥಿಯಾಗಿ ಮಾತ್ರವಲ್ಲದೆ ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿಯೂ ಕಳೆದ ಕೆಲವು ರಾತ್ರಿಗಳಿಂದ ನಾನು ವಿಚಲಿತನಾಗಿದ್ದೇನೆ. ರಾಜಗೋಪಾಲ್​ ಎಂಬ ಹೆಸರು ಇದೀಗ ಹೊರಬಂದಿದೆ. ಭವಿಷ್ಯದಲ್ಲಿ ನಮ್ಮ ಸುತ್ತ ಇಂತಹ ಘಟನೆಗಳನ್ನು ತಡೆಗಟ್ಟಲು, ನಾವು ಕ್ರಮ ಕೈಗೊಳ್ಳಬೇಕು ಮತ್ತು ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಗಿದೆ’ ಎಂದು ಅಶ್ವಿನ್ ಬರೆದುಕೊಂಡಿದ್ದಾರೆ. ವದರಿಯ ಪ್ರಕಾರ ಲೈಗಿಂಕ ಕಿರುಕುಳದ ಆರೋಪ ಹೊತ್ತ ಶಿಕ್ಷಕನನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗದೆ ಎಂದು ತಿಳಿದುಬಂದಿದೆ.

The post ಎರಡು ಹೆಣ್ಣು ಮಕ್ಕಳ ತಂದೆಯಾಗಿ ಕೆಲವು ರಾತ್ರಿಗಳು ನನ್ನನ್ನು ವಿಚಲಿತಗೊಳಿಸಿವೆ- ಅಶ್ವಿನ್​ appeared first on News First Kannada.

Source: newsfirstlive.com

Source link