ದಾವಣಗೆರೆ: ದಾರಿಯಲ್ಲಿ ಹೋಗುವಾಗ 10 ರೂಪಾಯಿ ಸಿಕ್ಕರೆ ಆಕಡೆ ಈಕಡೆ ನೋಡಿ ಜೇಬಲ್ಲಿ ಇಟ್ಕೊಳ್ಳೋ ಜನರಿದ್ದಾರೆ. ಅಂತದ್ರಲ್ಲಿ ಅವರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಬಂದ್ರೆ ಹೇಗಿರುತ್ತೆ. ಅಂತದ್ದೇ ಘಟನೆ ಬೆಣ್ಣೆ ನಗರಿಯಲ್ಲಿ ನಡೆದಿದೆ. ಆದ್ರೆ ಆ ಅದೃಷ್ಟ ಇದ್ದಿದ್ದು ಕೆಲ ಕಾಲ ಮಾತ್ರ.

ವಾವ್​ ಯಾರಿಗುಂಟು ಯಾರಿಗಿಲ್ಲ, ದಾವಣಗೆರೆ ಪಾಲಿಕೆ ಸದಸ್ಯರು ತಮ್ಮ ಮೊಬೈಲ್​ಗೆ ಬಂದ ಸಂದೇಶ ನೋಡಿ ಕುಣಿದು ಕುಪ್ಪಳಿಸಿದ್ದರು. ಯಾಕಂದ್ರೆ ತಮ್ಮ ಬ್ಯಾಂಕ್​ ಖಾತೆಗೆ ಸಾವಿರಗಟ್ಟಲೇ ಹಣ ಬರುತ್ತೆ ಅಂತ ಕಾಯ್ತಿದ್ದವರಿಗೆ ಜಾಕ್​ಪಾಟ್​ ಹೊಡೆದಿತ್ತು. ಯಾಕಂದ್ರೆ ಬಂದಿದ್ದು ಸಾವಿರ ಅಲ್ಲ ಲಕ್ಷ ಲಕ್ಷ.

ಹೌದು, ದಾವಣಗೆರೆ ಪಾಲಿಕೆಯ ಮೇಯರ್​​, ಉಪ ಮೇಯರ್​, ಸದಸ್ಯರಿಗೆ ಲಕ್ಷಾಂತರ ಹಣ ಜಮಾವಣೆಯಾಗಿದೆ. ಆದ್ರೆ ಬಂದ ದಾರಿಯಲ್ಲೇ ವಾಪಸ್ಸಾಗೋ ಮೂಲಕ ಪಾಲಿಕೆ ಸದಸ್ಯರಿಗೆ ನಿರಾಸೆ ಮೂಡಿಸಿದೆ. ಪಾಲಿಕೆ ಸದಸ್ಯರಿಗೆ ಕಳೆದ ತಿಂಗಳು 29 ರಂದು ಲಕ್ಷಾಂತರ ರೂಪಾಯಿ ಹಣ ಬಂದಿತ್ತು. ದಾವಣಗೆರೆ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸದಸ್ಯರಿಗೆ ನೀಡುವ ಗೌರವ ಧನ ನೀಡುವಂತೆ ಬರೋಡಾ ಬ್ಯಾಂಕ್​ಗೆ ಚೆಕ್ ನೀಡಿದ್ರು.

ಇದರಂತೆ ಪಾಲಿಕೆಯಲ್ಲಿ ಒಟ್ಟು 50 ಸದಸ್ಯರಿದ್ದು ಮೇಯರ್​ಗೆ 16 ಸಾವಿರ, ಉಪ ಮೇಯರ್​ಗೆ 10 ಸಾವಿರ, ಉಳಿದ ಸದಸ್ಯರಿಗೆ 6 ಸಾವಿರ ರೂಪಾಯಿ ಗೌರವ ಧನ ನೀಡಬೇಕಿತ್ತು. ಆದ್ರೆ ಬ್ಯಾಂಕ್​ ಸಿಬ್ಬಂದಿ ಯಡವಟ್ಟಿನಿಂದ ಗೌರವ ಧನಕ್ಕೆ ಎರಡು ಎಕ್ಸ್​ಟ್ರಾ ಸೊನ್ನೆ ಸೇರಿದ ಪರಿಣಾಮ, 6 ಸಾವಿರದ ಬದಲು 6 ಲಕ್ಷ, 10 ಸಾವಿರ ಬದಲು 10 ಲಕ್ಷ ಅಂತ ಒಟ್ಟು 50 ಸದಸ್ಯರಿಗೆ 3 ಕೋಟಿ ರೂಪಾಯಿ ಹಣ ಬಂದಿದೆ. ಇದರಿಂದ ಸದಸ್ಯರೆಲ್ಲರೂ ಖುಷಿಯಿಂದ ಕುಣಿದಾಡಿದ್ದು, ದಿಢೀರ್​ನೇ ಸಿಕ್ಕ ಹಣ ಡ್ರಾ ಮಾಡಿದ್ದಾರೆ. ಆದ್ರೆ ಬ್ಯಾಂಕ್​ನವರು ಸಂಜೆ ಆಡಿಟ್ ನೋಡಿದಾಗ ಯಡವಟ್ಟು ಬೆಳಕಿಗೆ ಬಂದಿದ್ದು ಎಲ್ಲರ ಖಾತೆ ಹೋಲ್ಡ್ ಮಾಡಿ ಹಣ ವಾಪಸ್ ಪಡೆದಿದ್ದಾರೆ. ಇನ್ನು ಕೆಲವರ ಅಕೌಂಟ್​ಗೆ ಹಣ ಬಂದಾಗ ಲೋನ್ ಮತ್ತು ಇತರೆ ಹಣ ಕಟ್ ಆಗಿದೆ.

ಇನ್ನು ಈ ವಿಷ್ಯ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರೋ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಇದು ಬ್ಯಾಂಕ್​ನವರ ಕಣ್ತಪ್ಪಿನಿಂದ ಆಗಿದೆ. ಕೆಲವರು ಹಣವನ್ನ ವಾಪಾಸ್ ಮಾಡಿದ್ದಾರೆ. ಇನ್ನೂ ಕೆಲವರು ಹಣ ಸ್ವಂತಕ್ಕೆ ಬಳಸಿಕೊಂಡಿದ್ದು, ಬ್ಯಾಂಕ್​ನವರು ವಾಪಸ್ ಪಡೆಯುತ್ತಾರೆ ಅಂದ್ರು.

ಒಟ್ಟಿನಲ್ಲಿ ತಮ್ಮ ಖಾತೆಗೆ ಹಣ ಬಂದಿದೆ ಅಂತ ಖುಷಿ ಪಟ್ಟಿದ್ದ ಸದಸ್ಯರ ಸಂತೋಷ ಇದ್ದದ್ದು ಕೆಲ ಕಾಲ ಮಾತ್ರ. ಬ್ಯಾಂಕ್ ಎಡವಟ್ಟಿನಿ‌ಂದ ಬಂದ ಹಣ‌‌ ಅಂತ ಬೇಜಾರು ಮಾಡ್ಕೊಂಡು ಅದನ್ನ ವಾಪಸ್ ಮಾಡಿದ್ದಾರೆ.

The post ಎರಡೇ ಎರಡು ಸೊನ್ನೆಗಳಿಂದಾಯ್ತು ಬಿಗ್ ಮಿಸ್ಟೇಕ್: ಪಾಲಿಕೆ ಸದಸ್ಯರ ಅಕೌಂಟ್​ಗೆ ಬಿತ್ತು ಲಕ್ಷ ಲಕ್ಷ ಹಣ appeared first on News First Kannada.

Source: newsfirstlive.com

Source link