ಎಲ್ಗಾರ್ ಪರಿಷದ್ ಕೇಸ್​ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ.. ಇವಱರು ಗೊತ್ತಾ?

ಎಲ್ಗಾರ್ ಪರಿಷದ್ ಕೇಸ್​ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ.. ಇವಱರು ಗೊತ್ತಾ?

ನವದೆಹಲಿ: ಮೂರು ವರ್ಷಗಳ ಹಿಂದಿನ ಎಲ್ಗಾರ್ ಪರಿಷದ್ – ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ನಿಧನರಾಗಿದ್ದಾರೆ. 84 ವರ್ಷದ ಸ್ಟಾನ್ ಸ್ವಾಮಿ ಸುಮಾರು ದಿನಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಇವರಿಗೆ ಭಾನುವಾರ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟ ಅಳವಡಿಸಲಾಗಿತ್ತು. ಆದರೀಗ, ಚಿಕಿತ್ಸೆ ಫಲಕಾರಿಯಾಗದೇ ಸ್ಟಾನ್ ಸ್ವಾಮಿ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ 1:30ಕ್ಕೆ ಸಾವನ್ನಪ್ಪಿದ್ದಾರೆ ಎಂದು ಸ್ಟಾನ್ ಸ್ವಾಮಿಪರ ವಕೀಲರು ಮುಂಬೈ ಹೋಕೋರ್ಟ್ಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ ಮೇ 28ನೇ ತಾರೀಕಿನಂದು ಹೈಕೋರ್ಟ್ ಆದೇಶದ ಮೇರೆಗೆ ಸ್ಟಾನ್ ಸ್ವಾಮಿಯವರನ್ನು ಮುಂಬೈನ ಪ್ರತಿಷ್ಠಿತ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ತಜ್ಞ ವೈದ್ಯರಿಂದ ಉತ್ತಮ ಚಿಕಿತ್ಸೆ ನೀಡಲಾಯ್ತು. ಆದರೆ, ಜೈಲಿನಲ್ಲಿದ್ದಾಗಲೇ ಸಮರ್ಪಕ ಮೆಡಿಕಲ್ ಸೌಲಭ್ಯಗಳು ಸಿಗದೇ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು ಎನ್ನಲಾಗಿದೆ. ಆದ್ದರಿಂದಲೇ ಇವರನ್ನು ಕಳೆದುಕೊಳ್ಳುವಂತಾಯ್ತು ಎಂದು ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳು ಆರೋಪಿಸಿವೆ.

ಜಾಮೀನು ಅರ್ಜಿ ಸಲ್ಲಿಕೆ:

ಕಳೆದ ವಾರವೇ ಮುಂಬೈ ಹೈಕೋರ್ಟ್​ನಲ್ಲಿ ತಮ್ಮ ಆರೋಗ್ಯ ಸುಧಾರಣೆಗಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮನ್ನು ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯ(ಯುಎಪಿಎ) ಅಡಿ ಬಂಧಿಸಿರುವುದನ್ನು ಪ್ರಶ್ನಿಸಿದ್ದರು. ಎಲ್ಗಾರ್ ಪ್ರಕರಣದಲ್ಲಿ ಸ್ಟಾನ್ ಸ್ವಾಮಿಯವರನ್ನು ಹಲವು ತಿಂಗಳ ಕಾಲ ಜೈಲಿನಲ್ಲೇ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಟಾನ್ ಸ್ವಾಮಿ ಆರೋಗ್ಯ ಮತ್ತಷ್ಟು ಹದಗೆಟ್ಟ ಪರಿಣಾಮ ಹೀಗಾಗಿದೆ ಎನ್ನಲಾಗಿದೆ.

ಚಾರ್ಜ್​​ಶೀಟ್​​ ಸಲ್ಲಿಕೆ:

ಈ ಹಿಂದೆಯೇ ಎಲ್ಗಾರ್ ಪರಿಷದ್ – ಭೀಮಾ ಕೋರೆಗಾಂವ್ ಪ್ರಕರಣ ಸಂಬಂಧ ಸಾಮಾಜಿಕ ಕಾರ್ಯಕರ್ತರಾದ ಗೌತಮ್ ನವಲಾಖ ಮತ್ತು ಸ್ಟಾನ್ ಸ್ವಾಮಿ ಸೇರಿದಂತೆ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಬಂಧಿಸಿದ್ದರು. ಇವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ ಚಾರ್ಜ್ಶೀಟ್ ಕೂಡ ಹೈಕೋರ್ಟ್​​ಗೆ ಸಲ್ಲಿಸಿತ್ತು.

ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು, ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಪ್ರೊಫೆಸರ್ ಆನಂದ್ ತೆಲ್ತುಂಬೆ, ಮಾವೋವಾದಿ ಮುಖಂಡ ಮಿಲಿಂದ್ ತೆಲ್ತುಂಬೆ ಹಾಗೂ ಕಬೀರ್ ಕಲಾ ಮಂಚ್ನ ಸಾಗರ್ ಗೋರ್ಖೆ, ರಮೇಶ್ ಗಾಯ್ಚೋರ್ ಮತ್ತು ಜ್ಯೋತಿ ಜಗತಪ್ ಅವರು ಚಾರ್ಜ್ಶೀಟ್​​ನಲ್ಲಿರುವ ಇತರ ಆರೋಪಿಗಳಾಗಿದ್ದಾರೆ.

ಯುಎಪಿಎಯಡಿ ಎಫ್​​ಐಆರ್​​:

ಸುಮಾರು 10 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ಈ ಪ್ರಕರಣದ ಇತರ ಆರೋಪಿಗಳ ಜೊತೆ ಈ ಎಂಟು ಮಂದಿ ಶಾಮೀಲಾಗಿ ದೇಶವಿರೋಧಿ ಸಂಚು ರೂಪಿಸಿದ್ದರು ಎಂದು ಹೇಳಲಾಗಿತ್ತು. ಮಾವೋವಾದಿ ಉಗ್ರವಾದಕ್ಕೆ ಕುಮ್ಮಕ್ಕು ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರ ಬಗ್ಗೆ ವಿವರ ನೀಡಲಾಗಿತ್ತು. ಅಪರಾಧ ಸಂಚು, ದೇಶವಿರೋಧಿ ಚಟುವಟಿಕೆಗಳ ಐಪಿಸಿ ಸೆಕ್ಷನ್ಗಳು ಹಾಗೂ ಕಾನೂನು ವಿರೋಧಿ ಚಟುವಟಿಕೆ ಕಾಯ್ದೆ ಅಡಿಯಲ್ಲಿ ಎಂಟು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಏನಿದು ಪ್ರಕರಣ:

2017, ಡಿಸೆಂಬರ್ 31ರಂದು ಎಲ್ಗರ್ ಪರಿಷದ್ “ಭೀಮಾ ಕೋರೆಗಾಂವ್ ಶೌರ್ಯ ದಿನ್ ಪ್ರೇರಣಾ ಅಭಿಯಾನ್” ಎಂಬ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಆನಂದ್ ತೆಲ್ತುಂಬೆ ಸಂಚಾಲಕರಾಗಿದ್ದರು. ಭಾರತ ಸರ್ಕಾರದ ಶಕ್ತಿಗಳನ್ನ ಎಲ್ಲಾ ರೀತಿಯಲ್ಲಿ ಸೋಲಿಸುವ ಸಲುವಾಗಿ ಬುದ್ಧಿಜೀವಿಗಳನ್ನ ಒಗ್ಗೂಡಿಸುವ ಜವಾಬ್ದಾರಿಯನ್ನು ಗೌತಮ್ ನವಲಾಖಗೆ ವಹಿಸಲಾಗಿತ್ತು. ಹಾಗೆಯೇ, ಮಾವೋವಾದಿ ಕಮ್ಯೂನಿಸ್ಟ್ ಸಂಘಟನೆಗೆ ನೇಮಕಾತಿಗಳನ್ನ ಮಾಡುವ ಕಾರ್ಯವನ್ನೂ ಇವರು ಮಾಡುತ್ತಿದ್ದರು ಎಂದು ಎನ್ಐಎ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ವಿಶೇಷ ವರದಿ: ಗಣೇಶ್ ನಚಿಕೇತ್, ಡಿಜಿಟಲ್ ಡೆಸ್ಕ್

The post ಎಲ್ಗಾರ್ ಪರಿಷದ್ ಕೇಸ್​ ಆರೋಪಿ ಫಾದರ್ ಸ್ಟಾನ್ ಸ್ವಾಮಿ ನಿಧನ.. ಇವಱರು ಗೊತ್ತಾ? appeared first on News First Kannada.

Source: newsfirstlive.com

Source link