ಬೆಂಗಳೂರು: ರಾಜ್ಯದ ಎಲ್ಲಾ ಅರ್ಹ ಜನರಿಗೆ ಲಸಿಕೆ ನೀಡಲು ಎಷ್ಟು ತಿಂಗಳು ಆಗುತ್ತೋ ಹೇಳಕ್ಕೆ ಆಗಲ್ಲ. ದಿನ, ತಿಂಗಳುಗಳಲ್ಲಿ ಲಸಿಕೆ ಪೂರೈಕೆ ಅಸಾಧ್ಯವಾಗಿದ್ದು, ವರ್ಷಗಳು ಬೇಕಾಗುತ್ತೆ. ಲಸಿಕೆ ಪೂರೈಕೆ ತಡ ಆಗುತ್ತೆ ನಾವೇನು ಮಾಡಕ್ಕೆ ಆಗಲ್ಲ. ಯಾವಾಗ ಬರುತ್ತೆ ಎಂದು ಹೇಳಕ್ಕೆ ಆಗಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.

 

ವಿಧಾನ ಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ರವಿಕುಮಾರ್ ಅವರು, ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಸಮಸ್ಯೆ ಇಲ್ಲ ಎಂದು ಹೇಳಲಿಕ್ಕೆ ಆಗಲ್ಲ. ಎಷ್ಟು ಬೇಡಿಕೆ ಇದೆಯೋ ಅಷ್ಟು ಇಲ್ಲ. ಇರುವುದನ್ನು ಮ್ಯಾನೇಜ್ ಮಾಡ್ತಿದ್ದೇವೆ. ಕೊರೊನಾ ವ್ಯಾಕ್ಸಿನ್ ಎರಡು ಫೇಸ್ ನೀಡಲಾಗ್ತಿದೆ. 45 ವರ್ಷದ ಮೇಲಿನ ವಯಸ್ಸಿನವರಿಗೆ ಕೇಂದ್ರ ಉಚಿತವಾಗಿ ಕೊಡ್ತಿದೆ. ಲಸಿಕೆ ಬಂದಂತೆ ಎಲ್ಲ ಕೊಡ್ತಿದ್ದೇವೆ. 25 ಲಕ್ಷ ಜನಕ್ಕೆ ಎರಡನೇ ಡೋಸ್ ಹಾಕಿದ್ದೇವೆ. ಕೇಂದ್ರ ಇಡೀ ರಾಜ್ಯಕ್ಕೆ ಹಂಚಿಕೆ ಮಾಡಬೇಕಿದೆ. ಎರಡನೇ ಡೋಸ್ ಪಡೆಯುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. 86 ಲಕ್ಷ ಜನರಿಗೆ ಫಸ್ಟ್ ಡೋಸ್ ಹಾಕಿದ್ದೇವೆ. ಲಸಿಕೆ ನೀಡಲು ಮೊದಲು ನಾವೇ ಹೋಗಿ ಕರೆದುಕೊಂಡು ಬರಬೇಕಿತ್ತು. ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಯಾರು ಬರಲಿಲ್ಲ. ಈಗ ಬರ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಮೂರು ಕೋಟಿ ಲಸಿಕೆಗಳನ್ನು ಪೂರೈಕೆ ಮಾಡುವಂತೆ ಅರ್ಡರ್ ಕೊಟ್ಟಿದೆ. ಇದುವರೆಗೂ ಏಳು ಲಕ್ಷ ಲಸಿಕೆ ಮಾತ್ರ ನಮಗೆ ಬಂದಿದೆ. ಅದನ್ನ ಕೊಡ್ತಿದ್ದೇವೆ, ಲಸಿಕೆ ಬುರುವುದು ಸ್ವಲ್ಪ ತಡವಾಗುತ್ತದೆ. ಎರಡನೇ ಹಂತದಲ್ಲಿ 18 ರಿಂದ 45 ವರ್ಷದವರಿಗೆ ರಾಜ್ಯ ಸರ್ಕಾರ ಹಾಗೂ ಪ್ರೈವೇಟ್ ಆಸ್ಪತ್ರೆಯವರು ಕೊಡಬೇಕು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಆಗಾಗ ಬರ್ತಿದೆ. ಕೋ ವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪೂರೈಕೆ ಆಗುತ್ತಿದ್ದು, ಈ ತಿಂಗಳು 13 ಲಕ್ಷ ಕೋವಿಶಿಲ್ಡ್, ಒಂದು ಲಕ್ಷ ಕೋ ವ್ಯಾಕ್ಸಿನ್ ಅಲಾಟ್ ಮೇಂಟ್ ಮಾಡಲಾಗಿದೆ. ಏಳು ಲಕ್ಷ ಕೋವಿಶೀಲ್ಡ್, ಎಂಬಂತ್ತು ಸಾವಿರ ಕೋ ವ್ಯಾಕ್ಸಿನ್ ಬಂದಿದೆ. ಬಂದಿರುವುದನ್ನು ಆದ್ಯತೆ ಮೇರೆಗೆ ವಿತರಣೆ ಮಾಡುತ್ತಿದ್ದೇವೆ ಎಂದರು.

The post ಎಲ್ರಿಗೂ ದಿನ, ತಿಂಗಳುಗಳಲ್ಲಿ ಲಸಿಕೆ ನೀಡಲು ಅಸಾಧ್ಯ.. ವರ್ಷಗಳೇ ಬೇಕು- ಸಿಎಸ್ ರವಿಕುಮಾರ್ appeared first on News First Kannada.

Source: newsfirstlive.com

Source link