ಎಲ್ರೂ ಕಾಲ್​ ಮಾಡಿ ಜಿಮ್ ಮಾಡೋದು ಬಿಟ್ಟುಬಿಡಿ ಅಂತಿದ್ದಾರೆ.. ಆದ್ರೆ -ಪ್ರೇಮ್


ಮಂಡ್ಯದಲ್ಲಿ ಪವರ್ ಸ್ಟಾರ್ ಪುನೀತ್ ಸಾವಿಗೆ ಸಂತಾಪ ಸೂಚಿಸಿ ನೆನಪಿರಲಿ ಪ್ರೇಮ್ ಮಾತನಾಡಿ.. ಅಪ್ಪು ಸಾವಿಗೆ ಜಿಮ್​ನ ವರ್ಕ್​ಔಟ್​ ಕಾರಣ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಪ್ಪು ಸಾವಿಗೆ ಅತಿಯಾದ ಜಿಮ್ ಕಾರಣ ಎಂದು ಹಬ್ಬಿಸಿದ್ದಾರೆ. ಇದರಿಂದ ಜಿಮ್​ನಲ್ಲಿ ವರ್ಕೌಟ್ ಮಾಡೋರಿಗೆ ಆತಂಕ ಶುರುವಾಗಿದೆ ಎಂದರು.

ಅಲ್ಲದೇ ಬಹುತೇಕ ನಗರಗಳಲ್ಲಿ ಜಿಮ್ 90% ಅಡ್ಮಿಷನ್ ಕಡಿಮೆಯಾಗಿದೆ. ಈ ರೀತಿಯಾಗಿ ಜಿಮ್ ಬಗ್ಗೆ ತಪ್ಪು ಕಲ್ಪನೆ ಸರಿಯಲ್ಲ. ಅಪ್ಪು ಸರ್ ತೀರಿಕೊಂಡ ಮೇಲೆ ನನಗೆ ಹಲವು ಕಾಲ್ ಬಂದ್ವು, ಜಿಮ್ ಮಾಡೋದನ್ನ ಬಿಟ್ಟು ಬಿಡಿ ಅಂತ. ಜಿಮ್ ಮಾಡಿದ್ದರಿಂದಲೇ ಅಪ್ಪು ಸಾವಾಗಿದೆ ಅನ್ನೋದು ತಪ್ಪು ಭಾವನೆ ಎಂದರು.

ನನಗೆ ಹಾಗೂ ನನ್ನ ಫ್ಯಾಮಿಲಿಗೆ ಆತ್ಮೀಯರಾದ ಗೆಳೆಯ ಅಪ್ಪು. ನನ್ನ ಮಕ್ಕಳ ಹುಟ್ಟುಹಬ್ಬದ ದಿನ ನೆನಪಿಟ್ಟಿಕೊಂಡು ಫೋನ್ ಮಾಡ್ತಿದ್ರು. ಬಹಳ ಆತ್ಮೀಯ ಗೆಳಯ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕನ್ನಡ ಇಂಡಸ್ಟ್ರಿ ದೊಡ್ಡ ಆಸ್ತಿಯನ್ನ ಕಳೆದುಕೊಂಡಿದೆ ಎಂದು ಭಾವುಕರಾದರು.

News First Live Kannada


Leave a Reply

Your email address will not be published.