ಮೈಸೂರು: ಕೊರೊನಾ ನಿರ್ವಹಣೆಯಲ್ಲಿ ಮೈಸೂರು ಜಿಲ್ಲಾಡಳಿತದ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದ ಸಂಸದ ಪ್ರತಾಪ್ ಸಿಂಹ ಅವರು ಮತ್ತೊಮ್ಮೆ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಇಂದು ಕೆ.ಆರ್​ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ್ ಅವರು, ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಅಭಿರಾಮ್ ಅವರನ್ನು ನಾನು ಲೆಕ್ಕ ಕೇಳಿರಲಿಲ್ಲ. ಅವರು ಪಾರದರ್ಶಕ ಅಧಿಕಾರ ನಡೆಸಿದ್ದರು. ಆದರೆ ಈಗಿನ ಜಿಲ್ಲಾಧಿಕಾರಿಯಲ್ಲಿ ಪಾರದರ್ಶಕ ಅಧಿಕಾರ ಕಾಣುತ್ತಿಲ್ಲ ಎಂದರು.

ಇದೇ ವೇಳೆ ಕೋವಿಡ್​ ನಿರ್ವಹಣೆ ಖರ್ಚು ವೆಚ್ಚಗಳ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಂಸದರು, ನಾನು ಬಹಳ ಲೆಕ್ಕ ಕೇಳಿದ್ದೆ. ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ? ಯಾವುದೋ 2, 4, 5 ಅಂತ ರೌಂಡ್ ಫಿಗರ್ ಲೆಕ್ಕ ಕೊಡೋದ್ ಅಲ್ಲ. ಲೆಕ್ಕಕೊಡೊದಾದ್ರೆ ವಸ್ತು ಹಾಗೂ ಖರ್ಚಿನ ಲೆಕ್ಕ ಕೊಡಲಿ. ಸ್ಟೆಪ್ ಡೌನ್ ಆಸ್ಪತ್ರೆಗಳ ಬಗ್ಗೆಯೂ ಕೇಳಿದ್ದೆ ಅದಕ್ಕೆ ಉತ್ತರ ಕೊಟ್ಟಿದ್ದಾರಾ? ಸಿಮ್ಮಿಂಗ್ ಪೂಲ್ ಲೆಕ್ಕ ಕೇಳಿದ್ದೆ ಅದಕ್ಕೆ ಕೊಟ್ಟಿದ್ದಾರಾ? ಸುಮ್ಮನೆ ಹೋಟೆಲ್​ಗಳಿಗೆ 4 ಕೋಟಿ ರೂಪಾಯಿ ಅಂತ ಬರೆಯೋದಲ್ಲ. ಯಾವುದಕ್ಕೆ ಎಷ್ಟು ಅಂತ ಬಿಲ್ ಬೇಕಲ್ವಾ.

ಇದನ್ನೂ ಓದಿ: ಮೈಸೂರಲ್ಲಿ ಕೊರೊನಾ ಸಾವು ಇಳಿದಿಲ್ಲ, ಪೋಸ್​ ಕೊಡೋಕೆ ಮೋಸದ ಲೆಕ್ಕ -ಮಹೇಶ್ ವಾಗ್ದಾಳಿ​

ಅಭಿರಾಮ್​, ಜಿ ಶಂಕರ್ ಇದ್ದಾಗ ಅವರ ಬಳಿ ಲೆಕ್ಕವನ್ನೇ ಕೇಳಿಲ್ಲ. ಅವರ ಬಳಿ ಪಾರದರ್ಶಕತೆ ಇತ್ತು ಅದಕ್ಕೆ ಕೇಳಲಿಲ್ಲ. ಆದರೆ ಈಗಿನ ಜಿಲ್ಲಾಧಿಕಾರಿಗಳ ಬಳಿ ಪಾರದರ್ಶಕತೆ ಕಾಣುತ್ತಿಲ್ಲ. ಹೀಗಾಗಿ ಲೆಕ್ಕ ಕೇಳುತ್ತಿದ್ದೇನೆ. ನಾನು ಇನ್ನು ಮುಂದೆ ಯಾರ ಬಗ್ಗೆಯೂ ಮಾತಾಡಲ್ಲ. ನನಗೆ ನೀಡಿರುವ ಜವಾಬ್ದಾರಿಯನ್ನ ನಾನು ನಿಭಾಯಿಸುತ್ತೇನೆ. ವಾಕ್ಸಿನ್ ಜವಾಬ್ದಾರಿಯನ್ನು ನನ್ನ ಮೇಲೆ ಎಳೆದುಕೊಂಡೇ ಮಾಡುತ್ತೇನೆ. ನನ್ನ ಕೆಲಸಕ್ಕೆ ಬೆರಳು ತೋರಿಸಿ ಯಾರೂ ಮಾತನಾಡಬಾರದು ಅಷ್ಟೇ ಎಂದರು.

ಜಿಲ್ಲೆಯ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ
ಇದೇ ವೇಳೆ ಜಿಲ್ಲೆಯ ಸಾವಿನ ಲೆಕ್ಕದ ಬಗ್ಗೆ ನನಗೂ ಅನುಮಾನ ಇದೆ ಎಂದ ಪ್ರತಾಪ್ ಸಿಂಹ ಅವರು, ನಾವು ಹಲವು ಕಡೆ ಪ್ರವಾಸ ಮಾಡುತ್ತಿರುತ್ತೇವೆ. ಆಗ ಜನರು ಹಲವು ದೂರುಗಳನ್ನು ಹೇಳುತ್ತಿರುತ್ತಾರೆ. ನಾವೇ ಬೆಡ್ ಕೊಡಿಸಿದ ರೋಗಿಗಳಿಗೆ ಐಸಿಯು ಸಿಗದೇ ಸಾವನ್ನಪ್ಪಿದ್ದಾರೆ ಅಂತಾರೆ. ಆದರೆ ಜಿಲ್ಲಾಡಳಿತದ ಲೆಕ್ಕಕ್ಕೂ ಅಂತ್ಯ ಸಂಸ್ಕಾರ ನಡೆಯುತ್ತಿರುವುದಕ್ಕೂ ವ್ಯತ್ಯಾಸ ಇದೆ. ಈ ಬಗ್ಗೆ ನನಗೂ ಅನುಮಾನ ಇದೆ ಎಂದರು.

ಇದನ್ನೂ ಓದಿ: ₹41 ಕೋಟಿಯಲ್ಲಿ ಯಾವುದಕ್ಕೆಲ್ಲಾ ಖರ್ಚಾಗಿದೆ? ಪ್ರತಾಪ್​ಸಿಂಹ ಪ್ರಶ್ನೆಗೆ ಲೆಕ್ಕ ಕೊಟ್ಟ ಸಿಂಧೂರಿ

The post ಎಲ್ಲದಕ್ಕೂ ಲೆಕ್ಕ ಕೊಟ್ಟಿದ್ದಾರಾ? ಸಿಮ್ಮಿಂಗ್ ಪೂಲ್ ಲೆಕ್ಕ ಎಲ್ಲಿ? -ಸಿಂಧೂರಿಗೆ ಪ್ರತಾಪ್​ ಸಿಂಹ ಪ್ರಶ್ನೆ appeared first on News First Kannada.

Source: newsfirstlive.com

Source link