‘ಎಲ್ಲರನ್ನೂ ಒಗ್ಗೂಡಿಸುವುದು ಮೊದಲ ಚಾಲೆಂಜ್​’: ಫಿಲ್ಮ್​ ಚೇಂಬರ್​ ಹೊಸ ಅಧ್ಯಕ್ಷ ಭಾ.ಮ. ಹರೀಶ್​ ಪ್ರತಿಕ್ರಿಯೆ | Bha Ma Harish first reaction after winning Karnataka Film Chamber electionBha Ma Harish: ಕನ್ನಡ ಚಿತ್ರರಂಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇವೆ ಎಂಬುದು ನಿಜ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿರುವ ಸವಾಲು ಭಾ.ಮ. ಹರೀಶ್​ ಅವರ ಮುಂದಿದೆ.

TV9kannada Web Team


| Edited By: Madan Kumar

May 29, 2022 | 4:03 PM
ಭಾರಿ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ನಿರ್ಮಾಪಕ ಭಾ.ಮ. ಹರೀಶ್​ (Bha Ma Harish) ಅವರು ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈಗ ಅವರ ಮುಂದೆ ಅನೇಕ ಸವಾಲು ಮತ್ತು ಜವಾಬ್ದಾರಿಗಳಿವೆ. ಕನ್ನಡ ಚಿತ್ರರಂಗದ (Kannada Film Industry) ಹಲವು ಸಮಸ್ಯೆಗಳಿಗೆ ವಾಣಿಜ್ಯ ಮಂಡಳಿ ಮೂಲಕ ಪರಿಹಾರ ಸಿಗಬೇಕಿದೆ. ಆ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸುವುದಾಗಿ ಭಾ.ಮ. ಹರೀಶ್​ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇವೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿದೆ ಎಂದು ಅವರು ಹೇಳಿದ್ದಾರೆ. ಭಾ.ಮ. ಹರೀಶ್​ ಎದುರು ಸಾ.ರಾ. ಗೋವಿಂದು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅವರಿಗಿಂತ ಹೆಚ್ಚು ಮತ ಪಡೆಯುವ ಮೂಲಕ ಭಾ.ಮ. ಹರೀಶ್​ ಗೆಲುವು ಸಾಧಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

TV9 Kannada


Leave a Reply

Your email address will not be published. Required fields are marked *