ಬೆಂಗಳೂರು: ಕನ್ನಡಿಗರ ಪ್ರೀತಿಯ ನಟ ಪುನೀತ್ ರಾಜಕುಮಾರ್ ನಿಧನದ ನೇತೃದಾನ ಮಾಡುವ ಮೂಲಕ ಹತ್ತಾರು ಮಂದಿಯ ಬದುಕಿಗೆ ಬೆಳಕಾಗಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಹಾದಿಯಲ್ಲೇ ಸಾವಿರಾರು ಅಭಿಮಾನಿಗಳು ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.
ಮಣ್ಣಾಗುವ ಮೊದಲು ಒಂದಿಬ್ಬರ ಬಾಳಿಗೆ ಬೆಳಕಾಗ್ತೀನಿ
ಸದ್ಯ ಇದೀಗ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಕೂಡ ಇದೇ ಹಾದಿಯಲ್ಲಿ ಮುನ್ನಡೆದಿದ್ದು, ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತ ಪೋಟೋಗಳನ್ನು ತಮ್ಮ ಟ್ವೀಟ್ ಖಾತೆಯಲ್ಲಿ ಹಂಚಿಕೊಂಡಿರುವ ಜಮೀರ್, ಮರಣದ ನಂತರ ಈ ದೇಹ ಮಣ್ಣಲಿ ಮಣ್ಣಾಗುವ ಮೊದಲು ಒಂದಿಬ್ಬರ ಬಾಳಿಗೆ ಬೆಳಕಾಗಬೇಕೆಂದು ನೇತ್ರದಾನ ಮಾಡಲು ನಿರ್ಧರಿಸಿ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ. ನನ್ನಿಂದ ಎರಡು ಜೀವಗಳ ಜಗತ್ತು ನೋಡುವಂತಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ನಾಲ್ಕು ಜನರ ಉಪಯೋಗಕ್ಕೆ ಬಂದಾಗಲೇ ಮನುಷ್ಯ ಜೀವನ ಸಾರ್ಥಕವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಅವರ ಇಡೀ ಕುಟುಂಬ ಕೂಡ ನೇತೃದಾನಕ್ಕೆ ಸಹಿ ಹಾಕಿದೆ.
ಮರಣದ ನಂತರ ಈ ದೇಹ ಮಣ್ಣಲ್ಲಿ ಮಣ್ಣಾಗುವ ಮೊದಲು ಒಂದಿಬ್ಬರ ಬಾಳಿಗೆ ಬೆಳಕಾಗಬೇಕೆಂದು ನೇತ್ರದಾನ ಮಾಡಲು ನಿರ್ಧರಿಸಿ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ.
ನನ್ನಿಂದ ಎರಡು ಜೀವಗಳು ಜಗತ್ತು ನೋಡುವಂತಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ.
ನಾಲ್ಕು ಜನರ ಉಪಯೋಗಕ್ಕೆ ಬಂದಾಗಲೇ ಮನುಷ್ಯ ಜೀವನ ಸಾರ್ಥಕ. 🙏 pic.twitter.com/DroPKnAY8A— B Z Zameer Ahmed Khan (@BZZameerAhmedK) November 10, 2021