ಮಂಗಳೂರು: ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಈಗಾಗಲೇ ಪ್ಯಾಕೇಜ್ ಘೋಷಣೆ ಮಾಡಿದ್ದು ಖಾಸಗಿ ಬಸ್ಸು ಸಿಬ್ಬಂದಿಗೆ ಪರಿಹಾರ ಏಕೆ ಘೋಷಣೆ ಮಾಡಿಲ್ಲ ಎಂದು ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಮಾಲಕ ಸಂಘದ ಮಾಜಿ ಅಧ್ಯಕ್ಷ ಸುಳ್ಯ ನಾರಾಯಣ ರೈ ಪ್ರಶ್ನೆ ಮಾಡಿದ್ದಾರೆ.

ಕಳೆದ ಲಾಕ್ ಡೌನ್ ಅವಧಿಯಲ್ಲಿ ಬಸ್ ಸಿಬ್ಬಂದಿಯನ್ನು ಪ್ಯಾಕೇಜ್ ನಿಂದ ದೂರ ಇಡಲಾಗಿತ್ತು. ಈ ಬಾರಿಯೂ ಬಸ್ ಸಿಬ್ಬಂದಿಯನ್ನು ಕಡೆಗಣಿಸಲಾಗಿದೆ. ಸರ್ಕಾರ ಬಸ್ ಮಾಲಕರು ಮತ್ತು ಬಸ್ ಸಿಬ್ಬಂದಿಗಳಿಗೆ ಲಾಕ್ ಡೌನ್ ಸಮಯದಲ್ಲಿ ಪರಿಹಾರ ನೀಡಬೇಕೆಂದು ಹೇಳುತ್ತಿದೆ. ನಾವು ಬಸ್‍ಗಳನ್ನು ಓಡಿಸದೆ ರಸ್ತೆ ತೆರಿಗೆ, ಬ್ಯಾಂಕ್ ಸಾಲ, ಇನ್ಸ್ರೆನ್ಸ್ ಕಟ್ಟಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಕಾರಣಗಳಿಂದ ಕಳೆದ ಒಂದು ವರ್ಷಗಳಿಂದ ಖಾಸಗಿ ಬಸ್ ಮಾಲಕರ ಸ್ಥಿತಿ ಶೋಚನಿಯವಾಗಿದೆ ಎಂದರು.

ಈ ನಿಟ್ಟಿನಲ್ಲಿ ಖಾಸಗಿ ಬಸ್ ಮಾಲಕರ ಸಮಸ್ಯೆಯನ್ನು ಸರ್ಕಾರ ಗಮನ ಹರಿಸಿ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಇದರೊಂದಿಗೆ ಖಾಸಗಿ ಬಸ್ ಸಿಬ್ಬಂದಿಗೂ ಪರಿಹಾರ ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

The post ಎಲ್ಲರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ ಖಾಸಗಿ ಬಸ್ ಸಿಬ್ಬಂದಿಗೆ ಯಾಕಿಲ್ಲ: ನಾರಾಯಣ ರೈ appeared first on Public TV.

Source: publictv.in

Source link