ಬೆಂಗಳೂರು: ನಿನ್ನೆ ಚಾಮರಾಜನಗರದಲ್ಲಿ ಆಕ್ಸಿಜನ್​ ಕೊರತೆ ಇದಿದ್ದು ನಿಜ. ಆದರೆ ಎಲ್ಲರೂ ಆಕ್ಸಿಜನ್ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆ ಎಂಬುದು ಸತ್ಯವಾದ ಮಾತಲ್ಲ. ಪ್ರತಿಯೊಂದು ಸಾವಿನ ಕಾರಣ ತಿಳಿದ ನಂತರ ವಿವರಣೆ ನೀಡುವೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್​ ಕುಮಾರ್ ಹೇಳಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ ಪ್ರಕರಣ ಕುರಿತಂತೆ ನ್ಯೂಸ್​ಫಸ್ಟ್​​ನೊಂದಿಗೆ ಮಾತನಾಡಿದ ಸಚಿವರು, ಚಾಮರಾಜನಗರದಲ್ಲಿ ಎರಡು ರೀತಿ ಆಕ್ಸಿಜನ್​ ಪೂರೈಕೆ ಆಗುತ್ತೆ. ಒಂದು ಲಿಕ್ವಿಡ್​ ಆಕ್ಸಿಜನ್​, ಇನ್ನೊಂದು ಸಿಲಿಂಡರ್ ಆಕ್ಸಿಜನ್​. ಸಿಲಿಂಡರ್ ಅಕ್ಸಿಜನ್ ಮೈಸೂರಿನಿಂದ ಬರಬೇಕು. ನಿನ್ನೆ ಚಾಮರಾಜನಗರದಲ್ಲಿ ಆಕ್ಸಿಜನ್​ ಕೊರತೆ ಇದಿದ್ದು ನಿಜ ಎಂದರು. 24 ಸಾವಾದ್ರೂ, ಒಂದೇ ಸಾವು ಆದರೂ ಪ್ರತಿಯೊಂದು ಸಾವಿನಿಂದ ಕೂಡ ನೋವು, ವೇದನೆ ಆಗುತ್ತೆ. 24 ಸಾವಿನ ಕಾರಣದ ಆಡಿಟ್​ ಮಾಡುವಂತೆ ಹೇಳಿದ್ದೇನೆ. ಯಾವ ಕಾರಣದಿಂದ ಸಾವಾಗಿದೆ ಎಂಬುದು ಮಧ್ಯಾಹ್ನದ ವೇಳೆಗೆ ಗೊತ್ತಾಗಲಿದೆ ಎಂದು ಹೇಳಿದ್ರು.

ಇಷ್ಟು ಸಾವಿಗೆ ಎರಡು ಕಾರಣಗಳಿವೆ. ಬಹಳ ವಿಷಮ ಸ್ಥಿತಿಯಲ್ಲಿದ್ದಾಗ ರೋಗಿಗಳು ಬಂದು ಆಸ್ಪತ್ರೆ ಸೇರಿದ್ದಾರೆ. ಆದ್ದರಿಂದ ದಯವಿಟ್ಟು ಸೋಂಕು ಕಂಡುಬಂದ ತಕ್ಷಣ ಆಸ್ಪತ್ರೆಗೆ ದಾಖಲಾಗಿ. ಕಡೆಯ ಕ್ಷಣದಲ್ಲಿ ಬಂದು ದಾಖಲಾಗುತ್ತಿದ್ದಾರೆ. ಇದು ಆಘಾತ ಆಗಿದೆ. ಎರಡನೇಯಾಗಿ ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂಬ ಮಾಹಿತಿ ಇದೆ. ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಹಾಗೂ ಆಕ್ಸಿಜನ್ ಉಸ್ತುವಾರಿ ADGP ಪ್ರತಾಪ್ ರೆಡ್ಡಿ ಜೊತೆ ಮಾತನಾಡಿದ್ದೇನೆ. ಇದಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುತ್ತೇವೆ. ನಾನೂ ಕೂಡ ಇಂದು ಚಾಮರಾಜನಗರಕ್ಕೆ ಭೇಟಿ ನೀಡುತ್ತೇನೆ ಎಂದು ಸ್ಪಷ್ಟಪಡಿಸಿದರು.

The post ಎಲ್ಲರೂ ಆಕ್ಸಿಜನ್​​ ಕೊರತೆಯಿಂದಲೇ ಸಾವನ್ನಪ್ಪಿದ್ದಾರೆಂಬ ಮಾತು ಸತ್ಯವಲ್ಲ- ಸುರೇಶ್​ ಕುಮಾರ್ appeared first on News First Kannada.

Source: newsfirstlive.com

Source link