ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ – Jothe Jotheyali Serial Update Jende Called sanju As Aryavardhan Anu Got Shocked


ಸಂಜುನೇ ಆರ್ಯ ಎನ್ನುವ ವಿಚಾರ ತಿಳಿದ ನಂತರದಲ್ಲಿ ಝೇಂಡೆಯನ್ನು ಆತ ಭೇಟಿ ಆಗಿರಲಿಲ್ಲ. ರಮ್ಯಾಳ ಎಂಗೇಜ್​ಮೆಂಟ್​ಗೆ ಝೇಂಡೆಗೂ ಆಮಂತ್ರಣ ಇತ್ತು. ಈ ಕಾರಣಕ್ಕೆ ಆತ ವಠಾರಕ್ಕೆ ಬಂದಿದ್ದಾನೆ. ಆಗ ಝೇಂಡೆ ಹಾಗೂ ಸಂಜು ಮುಖಾಮುಖಿ ಆಗಿದ್ದಾರೆ.

ಎಲ್ಲರ ಎದುರು ಸಂಜುಗೆ ಆರ್ಯ ಎಂದು ಕರೆದ ಝೇಂಡೆ; ಸಿಟ್ಟಾದ ಅನು ಸಿರಿಮನೆ

ಸಂಜು-ಝೇಂಡೆ

ಧಾರಾವಾಹಿ: ಜೊತೆ ಜೊತೆಯಲಿ

ವಾಹಿನಿ: ಜೀ ಕನ್ನಡ

ನಿರ್ದೇಶನ: ಆರೂರು ಜಗದೀಶ

ಕಲಾವಿದರು: ಹರೀಶ್ ರಾಜ್, ಮೇಘಾ ಶೆಟ್ಟಿ, ಮಾನಸ ಮನೋಹರ್ ಮೊದಲಾದವರು

ಸಮಯ: ರಾತ್ರಿ: 9.30

ಹಿಂದಿನ ಎಪಿಸೋಡ್​ನಲ್ಲಿ ಏನಾಗಿತ್ತು.

ಝೇಂಡೆ ಮಾಡುತ್ತಿರುವ ಪ್ಲ್ಯಾನ್​ಗಳ ಬಗ್ಗೆ ಸಂಜುಗೆ ತಿಳಿದು ಹೋಗಿದೆ. ಝೇಂಡೆ ವಠಾರದಲ್ಲಿ ತಿರುಗಾಡುತ್ತಿರುವುದರ ಹಿಂದೆ ಅನುಗೆ ತೊಂದರೆ ಕೊಡುವ ಉದ್ದೇಶ ಇದೆ ಎಂದು ಸಂಜು ಭಾವಿಸಿದ್ದಾನೆ. ಆದರೆ, ನಿಜಕ್ಕೂ ಆತ ಅಲ್ಲಿಗೆ ಆಗಮಿಸಿದ್ದು ಸಂಜುಗಾಗಿ. ಸಂಜುನೇ ಆರ್ಯವರ್ಧನ್ ಎನ್ನುವ ವಿಚಾರ ಝೇಂಡೆಗೆ ತಿಳಿದಿದೆ. ಹೀಗಾಗಿ, ತನ್ನ ಕಾರ್ಯ ಸಾಧನೆಗಾಗಿ ಆತ ಸಂಜುನ ಹಿಂದೆ ಬಿದ್ದಿದ್ದಾನೆ.

ವಠಾರ ಬಿಟ್ಟು ಹೊರಟ ಸಂಜು

ಆರಾಧನಾಗೆ ಪತಿ ಸಂಜು ಬಗ್ಗೆ ಆತಂಕ ಶುರುವಾಗಿದೆ. ಆಕೆಯಿಂದ ಆತ ದೂರ ಇರಲು ಪ್ರಯತ್ನಿಸುತ್ತಿದ್ದಾನೆ. ಈ ಬಗ್ಗೆ ಆಕೆಗೆ ಬೇಸರ ಇದೆ. ಕಚೇರಿ ವಿಚಾರಕ್ಕಾಗಿ ಅನು ಮನೆಗೆ ತೆರಳಿದ್ದ ಸಂಜು ಅಲ್ಲಿಯೇ ಉಳಿದುಕೊಂಡಿದ್ದ. ಅನು ಗೆಳತಿ ರಮ್ಯಾಳ ಎಂಗೇಜ್​ಮೆಂಟ್​ನಲ್ಲಿ ಆತ ಭಾಗಿ ಆಗಿದ್ದ. ಈ ಸಂದರ್ಭಕ್ಕೆ ಸರಿಯಾಗಿ ಆರಾಧನಾಳು ಸಂಜುಗಾಗಿ ಹುಡುಕಾಡುತ್ತಿದ್ದಾಳೆ ಎನ್ನುವ ಸುದ್ದಿ ಅನು ಕಿವಿಗೆ ಬಿದ್ದಿದೆ. ಹೀಗಾಗಿ, ಸಂಜುಗೆ ವಠಾರ ಬಿಟ್ಟು ಆರಾಧನಾ ಬಳಿ ತೆರಳುವಂತೆ ಹೇಳಿದ್ದಾಳೆ. ಹೀಗಾಗಿ, ಆತ ವಠಾರ ಬಿಟ್ಟು ಹೊಡುವವನಿದ್ದ.

ಸಂಜು-ಝೇಂಡೆ ಮುಖಾಮುಖಿ

ಸಂಜುನೇ ಆರ್ಯ ಎನ್ನುವ ವಿಚಾರ ತಿಳಿದ ನಂತರದಲ್ಲಿ ಝೇಂಡೆಯನ್ನು ಆತ ಭೇಟಿ ಆಗಿರಲಿಲ್ಲ. ರಮ್ಯಾಳ ಎಂಗೇಜ್​ಮೆಂಟ್​ಗೆ ಝೇಂಡೆಗೂ ಆಮಂತ್ರಣ ಇತ್ತು. ಈ ಕಾರಣಕ್ಕೆ ಆತ ವಠಾರಕ್ಕೆ ಬಂದಿದ್ದಾನೆ. ಆಗ ಝೇಂಡೆ ಹಾಗೂ ಸಂಜು ಮುಖಾಮುಖಿ ಆಗಿದ್ದಾರೆ. ಸಂಜುನ ಕಂಡು ಝೇಂಡೆ ಖುಷಿಪಟ್ಟಿದ್ದಾನೆ. ಆದರೆ, ಸಂಜು ಸಿಟ್ಟಾಗಿದ್ದಾನೆ.

ಅನುಗೆ ಹಾನಿ ಮಾಡುವ ಉದ್ದೇಶದಿಂದಲೇ ಝೇಂಡೆ ವಠಾರಕ್ಕೆ ಬಂದಿದ್ದಾನೆ ಅನ್ನೋದು ಸಂಜುನ ಬಲವಾದ ನಂಬಿಕೆ. ರಾತ್ರಿ ವೇಳೆಯೂ ಝೇಂಡೆ ಬಂದಿದ್ದ. ಬಂದು ಸಂಜುನ ನೋಡಿ ಹಾಗೆಯೇ ಹೋಗಿದ್ದ. ಇದನ್ನು ವಿಡಿಯೋ ಮಾಡಿ ಇಟ್ಟುಕೊಂಡಿದ್ದಾನೆ ಸಂಜು. ನದಿಯಲ್ಲಿ ಆರ್ಯನ ಅಸ್ಥಿ ಬಿಡಲು ಹೋದಾಗ ಅನುನ ಕೊಲ್ಲಲು ಪ್ರಯತ್ನಿಸಿದ್ದು ಇದೇ ಝೇಂಡೆ ಎನ್ನುವ ವಿಚಾರ ಸಂಜುಗೆ ತಿಳಿದಿದೆ. ಈ ಎಲ್ಲಾ ಕಾರಣದಿಂದ ಝೇಂಡೆ ಬಗ್ಗೆ ಸಂಜು ದ್ವೇಷ ಸಾಧಿಸುತ್ತಿದ್ದಾನೆ.

ವಠಾರದಲ್ಲಿ ಸಂಜುನ ಎದುರುಗೊಳ್ಳುತ್ತಿದ್ದಂತೆ ಝೇಂಡೆ ಖುಷಿಯಿಂದ ಮಾತನಾಡಲು ಪ್ರಯತ್ನಿಸಿದ್ದಾನೆ. ಇದಕ್ಕೆ ಸಂಜು ಸಿಟ್ಟಾಗಿದ್ದಾನೆ. ‘ಅನುಗೆ ತೊಂದರೆ ಮಾಡುವ ಉದ್ದೇಶದಿಂದ ನೀವು ಇಲ್ಲಿಗೆ ಬಂದಿದ್ದೀರಿ. ನೀವು ಮೊದಲು ಇಲ್ಲಿಂದ ನಡೆಯಿರಿ’ ಎಂದು ಸಂಜು ಆವಾಜ್ ಹಾಕಿದ್ದಾನೆ. ಇದರಿಂದ ಝೇಂಡೆಗೆ ಕೋಪ ಬಂದಿದೆ. ಅದೇ ಸಮಯಕ್ಕೆ ಅನು ಕೂಡ ಅಲ್ಲಿಗೆ ಬಂದಿದ್ದಾಳೆ.

‘ನೋಡಿ ಅನು ಅವರೇ ಇವರು ಇಲ್ಲಿಗೂ ಬಂದಿದ್ದಾರೆ. ಇದರ ಹಿಂದೆ ತೊಂದರೆ ಮಾಡುವ ಉದ್ದೇಶ ಇದೆ’ ಎಂದು ಹೇಳಿದ್ದಾನೆ ಸಂಜು. ಈ ಮಾತನ್ನು ಕೇಳಿ, ‘ಆರ್ಯ ನಿನಗೆ ನಾನು ಯಾರು ಎಂದು ತಿಳಿಯುತ್ತಿಲ್ಲವಾ? ನನಗೆ ಗೆಟ್​ಔಟ್ ಅಂತೀಯಾ’ ಎಂದು ಸಿಟ್ಟಾಗಿ ಕೂಗಾಡಿದ್ದಾನೆ ಝೇಂಡೆ. ಸಂಜುಗೆ ಆರ್ಯ ಎಂದು ಹೇಳಿದ್ದು ಕೇಳಿ ಅನು ಕೋಪಗೊಂಡಿದ್ದಾಳೆ. ‘ನಿಮಗೆ ಅವರ ಹೆಸರು ಹೇಳುವ ಅರ್ಹತೆಯೂ ಇಲ್ಲ’ ಎಂದು ಸಿಟ್ಟಾಗಿದ್ದಾಳೆ.

ಮುರಿದು ಬಿತ್ತು ಎಂಗೇಜ್​ಮೆಂಟ್​?

ರಮ್ಯಾನ ಎಂಗೇಜ್​ಮೆಂಟ್ ವಿಚಾರ ಇತ್ತೀಚೆಗೆ ಹೈಲೈಟ್ ಆಗಿತ್ತು. ಸಂಪಿಗೆಪುರದ ಪ್ರಾಪರ್ಟಿಯನ್ನು ಕಬಳಿಸಲು ಝೇಂಡೆ ಪ್ಲ್ಯಾನ್ ಮಾಡಿದ್ದ. ಇದಕ್ಕೆ ಸಾತ್ ಕೊಟ್ಟಿದ್ದು ರಮ್ಯಾ ಮದುವೆ ಆಗಲು ಬಂದ ಹುಡುಗನ ತಂದೆ. ಅನು ಹಾಗೂ ಝೇಂಡೆ ಜಗಳದಿಂದ ಈ ವಿಚಾರವೂ ಬೆಳಕಿಗೆ ಬಂದಿದೆ. ರಮ್ಯಾ ಇದನ್ನು ಬಾಯ್ಬಿಟ್ಟಿದ್ದಾಳೆ. ಈ ಎಲ್ಲಾ ಕಾರಣದಿಂದ ಎಂಗೇಜ್​ಮೆಂಟ್ ಮುರಿದು ಬೀಳುವ ಸೂಚನೆ ಸಿಕ್ಕಿದೆ.

TV9 Kannada


Leave a Reply

Your email address will not be published. Required fields are marked *