ಎಲ್ಲಾ ಕೇಂದ್ರಗಳಿಗೂ ನಾನೇ ಹೋಗಿ ಪರಿಶೀಲಿಸಲು ಸಾಧ್ಯವೆ? ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ: ಆರಗ ಜ್ಞಾನೇಂದ್ರ ಅಸಹಾಯಕತೆ | Home Minister Araga Jnanendra statement in Ramanagara on PSI Recruitment scam


ಎಲ್ಲಾ ಕೇಂದ್ರಗಳಿಗೂ ನಾನೇ ಹೋಗಿ ಪರಿಶೀಲಿಸಲು ಸಾಧ್ಯವೆ? ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲೂ ಸಾಧ್ಯವಾಗುತ್ತಿಲ್ಲ:  ಆರಗ ಜ್ಞಾನೇಂದ್ರ ಅಸಹಾಯಕತೆ

ಗೃಹ ಸಚಿವ ಆರಗ ಜ್ಞಾನೇಂದ್ರ

2016 ರಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ಬಾರಿ ಪರೀಕ್ಷೆ ನಡೆದಿದೆ. 2014-15 ರಲ್ಲಿ ಎಪಿಪಿ ಸೆಲೆಕ್ಷನ್ ನಲ್ಲಿಯೂ ಅಂಕಗಳನ್ನು ತಿದ್ದಿದ್ದಾರೆ. ಅಂತಹ ನೇಮಕಗಳನ್ನು ತಡೆಹಿಡಿಯಲಾಗಿದೆ. ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ -ಗೃಹ ಸಚಿವ ಆರಗ ಜ್ಞಾನೇಂದ್ರ

ರಾಮನಗರ: ರಾಜ್ಯದಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿರುವ ಪಿಎಸ್‌ಐ ನೇಮಕಾತಿ ಆಕ್ರಮ (PSI Recruitment Scam) ವಿಚಾರವಾಗಿ ರಾಮನಗರದಲ್ಲಿ (Ramanagara) ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jnanendra) ಮಾತನಾಡಿದ್ದಾರೆ. ಪಿಎಸ್ ಐ ಆಕ್ರಮ ನೇಮಕಾತಿ ತನಿಖೆ ನಡೆಯುತ್ತಿದೆ. ಅನೇಕರು ವಂಚಿಸಿದ್ದಾರೆ, ಇದಕ್ಕೆ ಲಾಜಿಕಲ್ ಅಂತ್ಯ ಹಾಡಲಿದ್ದೇವೆ. ಕಷ್ಟಪಟ್ಟು ಓದಿದವರ ಬಾಯಿಗೆ ಮಣ್ಣು ಹಾಕಿದ್ದಾರೆ. ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ. ತಪ್ಪು ಮಾಡಿದ ಪೊಲೀಸರನ್ನೇ ನಾವು ಬಿಡುತ್ತಿಲ್ಲ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು ಪಿಎಸ್‌ಐ ಪರೀಕ್ಷೆ ನಡೆದ 92 ಕೇಂದ್ರಗಳಿಗೂ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೆ? ಯಾರು ಅಕ್ರಮ ನಡೆಸಿದ್ದಾರೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ ಎಂದೂ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ 92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಅಲ್ಲಿ ನಾನು ಹೋಗಿ ಪರಿಶೀಲನೆ ನಡೆಸಲು ಸಾಧ್ಯವೆ ? ಯಾವುದೇ ಮುಲಾಜು, ಪ್ರಭಾವ ಇಲ್ಲದೇ, ಸಿಐಡಿಗೆ ಫ್ರಿ ಹ್ಯಾಂಡ್ ನೀಡಿದ್ದೇವೆ. ಮುಂದಿನ ಪರೀಕ್ಷೆಯಲ್ಲಿ ಅಕ್ರಮ ತಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. 2016 ರಲ್ಲಿ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ನಾಲ್ಕು ಬಾರಿ ಪರೀಕ್ಷೆ ನಡೆದಿದೆ. 2014-15 ರಲ್ಲಿ ಎಪಿಪಿ ಸೆಲೆಕ್ಷನ್ ನಲ್ಲಿಯೂ ಅಂಕಗಳನ್ನು ತಿದ್ದಿದ್ದಾರೆ. ಅಂತಹ ನೇಮಕಗಳನ್ನು ತಡೆಹಿಡಿಯಲಾಗಿದೆ. ಅಮಾಯಕರಿಗೆ ಅನ್ಯಾಯವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಹೆಡ್ ಆಫೀಸ್ ನ ಲಾಕರ್ ನಲ್ಲಿದ್ದ ಒಎಂಆರ್ ಶೀಟ್ ಗಳನ್ನೂ ತಿದ್ದಿದ್ದಾರೆ. ಅಲ್ಲದೇ ಬ್ಲೂಟೂತ್ ಅಕ್ರಮ ನಡೆದಿದೆ‌‌. ಈಗ ಮರು ಪರೀಕ್ಷೆ ಅನಿವಾರ್ಯವಾಗಿದ್ದು, ನೋಟಿಫಿಕೆಷನ್ ರದ್ದು ಪಡಿಸಿಲ್ಲ‌. ಈಗ ಪರೀಕ್ಷೆಯನ್ನೇ ರದ್ದು ಮಾಡಿದ್ದೇವೆ. ಯಾರು ಅಕ್ರಮ ನಡೆಸಿದ್ದಾರೆ ಎಂಬುದನ್ನು ಹೇಳಲೂ ಸಾಧ್ಯವಾಗುತ್ತಿಲ್ಲ. ಇದು ನಮ್ಮ ಅಸಹಾಯಕತೆಯಾಗಿದೆ ಎಂದು ರಾಮನಗರದಲ್ಲಿ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

TV9 Kannada


Leave a Reply

Your email address will not be published. Required fields are marked *