ಕಳೆದ ಆರು ತಿಂಗಳ ಹಿಂದೆ ಜನವರಿ 8ನೇ ತಾರೀಕಿನಂದು ನಟ ಯಶ್​​ ಬರ್ತಡೇ ಪ್ರಯುಕ್ತ ರಿಲೀಸ್​​ ಆಗಿದ್ದ ‘ಕೆಜಿಎಫ್ ಚಾಪ್ಟರ್ ​-2’ ಟೀಸರ್ ಈಗ 200 ಮಿಲಿಯನ್​​​​ ತಲುಪಿದೆ. ಭಾರತದ ಚಿತ್ರರಂಗದಲ್ಲೇ ಧೂಳೆಬ್ಬಿಸಿದ ಈ ಸಿನಿಮಾ ಟೀಸರ್​​​​​​ ಇದುವರೆಗೂ 20 ಕೋಟಿ ವೀಕ್ಷಣೆ ಪಡೆದುಕೊಂಡಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.

ಕೆಜಿಎಫ್ ಚಾಪ್ಟರ್​ -1 ನಂತರ ಭಾರೀ ನಿರೀಕ್ಷೆ ಹುಟ್ಟಿಹಾಕಿರುವ ಕೆಜಿಎಫ್ -2 ಟೀಸರ್​​ ಇಂಡಿಯನ್​​ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದೇ ದಿನದಲ್ಲಿ 10 ಕೋಟಿ ವೀಕ್ಷಣೆ ಪಡೆದ ಮೊದಲ ಟೀಸರ್ ಇದಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ನಟ ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್​​​ ನೀಲ್​​, 200 ಮಿಲಿಯನ್​​​ ವೀಕ್ಷಣೆಗೆ ಸಾಧ್ಯವಾಗಿಸಿದ ಎಲ್ಲಾ ಪ್ರೇಕ್ಷರಿಗೂ ಧನ್ಯವಾದ ತಿಳಿಸಿದ್ದಾರೆ.

ಪ್ರಶಾಂತ್​​ ನೀಲ್​ ನಿರ್ದೇಶನದ ಯಶ್​​ ನಟನೆಯ ಈ ಸಿನಿಮಾದಲ್ಲಿ ನಟ ಪ್ರಕಾಶ್​ ರಾಜ್​​​ ಸೇರಿದಂತೆ ಬಾಲಿವುಡ್​​ನ ಸಂಜಯ್​ ದತ್, ರವೀನಾ ಟಂಡನ್ ಹಲವರು ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿಎಲ್ಲಾ ದಾಖಲೆಗಳೂ ಧೂಳೀಪಟ.. ಕೆಜಿಎಫ್ ಟೀಸರ್ ಆರ್ಭಟ

The post ಎಲ್ಲಾ ದಾಖಲೆಗಳೂ ಉಡೀಸ್​​​.. 20 ಕೋಟಿಗೂ ಹೆಚ್ಚು ವೀಕ್ಷಣೆ ಕಂಡ ಕೆಜಿಎಫ್ 2 ಟೀಸರ್ appeared first on News First Kannada.

Source: newsfirstlive.com

Source link