ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೊನಾ ಹೆಚ್ಚು ಉಲ್ಬಣಗೊಂಡ ಹಿನ್ನೆಲೆಯಲ್ಲಿ  ಹಾಗೂ ಲಾಕ್​ಡೌನ್​ ವಿಸ್ತರಣೆ ಮಾಡಿರುವ ಹಿನ್ನೆಲೆ ಸಂಸತ್ತಿನ ಎಲ್ಲಾ ಸಿಬ್ಬಂದಿಗೆ ಮನೆಯಿಂದ ಕೆಲಸ ಮಾಡುವಂತೆ ಲೋಕಸಭಾ ಸಚಿವಾಲಯ ಆದೇಶ ಹೊರಡಿಸಿದೆ.

ರಾಜ್ಯಸಭಾ ಸಚಿವಾಲಯವು ಕೂಡ ಕೆಲವು ದಿನಗಳ ಹಿಂದೆ ತನ್ನ ನೌಕರರಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚನೆ ನೀಡಿತ್ತು. ಇದೀಗ ಲೋಕಸಭೆ ಸಚಿವಾಲಯ ಸಹ ತನ್ನ ಸಿಬ್ಬಂದಿಗೆ ವರ್ಕ್​ ಫ್ರಮ್ ಹೋಂಗೆ ಸೂಚಿಸಿದೆ. ಜೊತೆಗೆ ಮನೆಯಲ್ಲಿಯೇ ಕೊರೊನಾ ನಿಯಮ ಪಾಲಿಸುವಂತೆ ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

ಮೇ 3ರ ಬೆಳಗ್ಗೆ 5 ಗಂಟೆವರೆಗೆ ದೆಹಲಿಯಲ್ಲಿ ಲಾಕ್​ಡೌನ್ ವಿಸ್ತರಣೆ ಮಾಡಲಾಗಿದೆ.

The post ಎಲ್ಲಾ ಸಂಸತ್ ಸಿಬ್ಬಂದಿಗೆ ವರ್ಕ್ ಫ್ರಂ ಹೋಮ್ appeared first on News First Kannada.

Source: News First Kannada
Read More