ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಇಂದು ಬಡವರಿಗೆ ಫುಡ್ ಕಿಟ್ ಹಂಚುವ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಜಮೀರ್​ ಅಹ್ಮದ್​ರನ್ನ ಸಿದ್ದರಾಮಯ್ಯ ಹಾಡಿಹೊಗಳಿದ್ರು.

ಜಮೀರ್​ನ ನಾನು ದುಡ್ಡು ಎಲ್ಲಿದ್ದ ತರ್ತಿಯಾ ಅಂತ ಕೇಳಿದೆ.. ಬಡವರಿಗೆ ಸಹಾಯ ಮಾಡ್ತಿದ್ರೆ ದುಡ್ಡು ಬರುತ್ತೆ ಅಂತಾರೆ. ಎಲ್ಲಿಂದಲಾದರೂ ಕಿತ್ಕೊಂಡು ಬಂದು ಜಮೀರ್ ಬಡವರಿಗೆ ಸಹಾಯ ಮಾಡ್ತಾರೆ ಎಂದು ಹೇಳಿದ್ರು. ಅಲ್ಲದೇ.. ನಾನು ಚಾಮರಜಪೇಟೆ ಕಾರ್ಯಕ್ರಮಕ್ಕೆ ಬರ್ತಿರೋದು 5-6ನೇ ಬಾರಿ.. ಜಮೀರ್ ಹೃದಯವಂತ ರಾಜಕಾರಣಿ. ಕ್ಷೇತ್ರ ಸೇರಿದಂತೆ ಬೇರೆ ಕಡೆ ಕಷ್ಟದಲ್ಲಿರುವವರಿಗೆ ಸ್ಪಂದಿಸೋದು ಜಮೀರ್ ಹುಟ್ಟುಗುಣ.. ಇರೋದನ್ನ ಕಿತ್ಕೊಂಡು ತಿನ್ನುವವರೇ ಜಾಸ್ತಿ. ತಾವು ಮಾಡಿರುವ ಸಂಪಾದನೆಯನ್ನ ಬೇರೆಯವರಿಗೆ ಹಂಚ್ತಾರೆ.

ಜಮೀರ್ ಮಾದರಿ ಶಾಸಕ.. ಇಂತ ಶಾಸಕರನ್ನ ಪಡೆದ ಚಾಮರಾಜಪೇಟೆ ಜನ ಧನ್ಯರು. ಜಮೀರ್ ಜಾತಿ ಧರ್ಮ ನೋಡಲ್ಲ. ಅದು ಮನುಷ್ಯ ಧರ್ಮ.. ಅರ್ಜಿ ಹಾಕೊಂಡು ಯಾರೂ ಹುಟ್ಟಲ್ಲ ಎಂದು ಗುಣಗಾನ ಮಾಡಿದ್ರು.

The post ಎಲ್ಲಿಂದಲಾದ್ರೂ ಕಿತ್ಕೊಂಡು ಬಂದು ಜಮೀರ್ ಬಡವರಿಗೆ ಸಹಾಯ ಮಾಡ್ತಾರೆ- ಸಿದ್ದರಾಮಯ್ಯ ಗುಣಗಾನ appeared first on News First Kannada.

Source: newsfirstlive.com

Source link