ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣನ ಕಾಟ ಶುರುವಾಗಿದೆ. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದ್ದು ಅನೇಕ ಸಮಸ್ಯೆಗಳು ಉದ್ಭವಿಸಿವೆ. ಇನ್ನು ಚೆನ್ನೈನಂತೆ ಬೆಂಗಳೂರು ನಗರದಲ್ಲೂ ಗಂಡಾಂತರ ಉಂಟಾಗುವ ಸಾಧ್ಯತೆ ಎದುರಾಗಿದೆ. ಎಲ್ಲೆಂದರಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ ಬಿಸಾಡಿರುವ ಹಿನ್ನೆಲೆ ಡ್ರೈನೇಜ್ ಬ್ಲಾಕ್ ಆಗಿ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.
ತಮಿಳುನಾಡಿನಲ್ಲಿ ಸೈಕ್ಲೋನ್ ಭಾರಿ ಆಪತ್ತು ತಂದೊಡ್ಡಿದೆ. ಭಾರೀ ಮಳೆಗೆ ಮಹಾನಗರಿ ಚೆನ್ನೈ ನಲುಕಿ ಹೋಗಿದೆ. ಚೆನ್ನೈಗೆ ಗಂಡಾಂತರ ತಂದ ವಸ್ತುಗಳಿಂದಲೇ ಬೆಂಗಳೂರಿಗೂ ಸಮಸ್ಯೆ ಕಾದಿದೆ. ಚೆನ್ನೈ ನಗರದ ಬಹುತೇಕ ಮೋರಿಗಳನ್ನು ಪ್ಲಾಸ್ಟಿಕ್ ವಸ್ತುಗಳು ಬ್ಲಾಕ್ ಮಾಡಿದ್ದವು. ಅದರಂತೆಯೇ ಬೆಂಗಳೂರಿನಲ್ಲೂ ಎಲ್ಲೆಂದರಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯ ಕಂಡು ಬಂದಿದ್ದು ಮುಂದೆ ಇದರಿಂದ ಸಮಸ್ಯೆ ಉಂಟಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.
ಸದ್ಯ ಸುರಿಯುತ್ತಿರುವ ಮಳೆಗೆ ಬೆಂಗಳೂರು ತತ್ತರಿಸಿದೆ. ರಸ್ತೆಗಳು ಕೆರೆಯಂತಾಗಿವೆ. ಮನೆಗಳಿಗೆ ನೀರು ನುಗ್ಗಿ ಜನ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಇದೆ. ಇದರ ಜೊತೆಗೆ ಮಳೆ ನೀರು ಸರಾಗವಾಗಿ ಹರಿಯಲು ಪ್ಲ್ಯಾಸ್ಟಿಕ್ ತ್ಯಾಜ್ಯ ಅಡ್ಡಿಯಾಗುತ್ತಿದ್ದು ಮೋರಿಗೆ ನೀರು ಹೋಗದೆ ಸಂಗ್ರಹವಾಗುತ್ತೆ. ಇದರಿಂದ ಬೆಂಗಳೂರು ಜಲಮಯವಾಗುವ ಸಾಧ್ಯತೆ. ಶಾಂತಿನಗರ ಬಸ್ ಸ್ಟಾಪ್ , ಡಬಲ್ ರೋಡ್ನಲ್ಲಿ ಮೋರಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ರಾಜಕಾಲುವೆಗಳಲ್ಲಿ ಯಥೇಚ್ಛವಾಗಿ ಪ್ಲಾಸ್ಟಿಕ್ ತುಂಬಿ ತುಳುಕುತ್ತಿದೆ. ಹೀಗಾಗಿ ತ್ಯಾಜ್ಯ ವಿಲೇವಾರಿಗೆ ಬಿಬಿಎಂಪಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.
ಇದನ್ನೂ ಓದಿ: ‘ಪುಷ್ಪ’ ಚಿತ್ರದಲ್ಲಿ ಸಮಂತಾ ಐಟಂ ಡ್ಯಾನ್ಸ್? ರಶ್ಮಿಕಾ, ಅಲ್ಲು ಅರ್ಜುನ್ ಸಿನಿಮಾ ಬಗ್ಗೆ ಹೊಸ ಗುಸುಗುಸು