ದಾವಣಗೆರೆ: ನಟ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ಈಡೀ ರಾಜ್ಯಕ್ಕೆ ಸೂತಕದ ಛಾಯೆ ಆವರಿಸಿದೆ. ಅಪ್ಪು ಅಕಾಲಿಕ ನಿಧನದಿಂದ ಸಾರ್ವಜನಿಕರು ನಗರದ ಉದ್ಯಾನವನ ಒಂದಕ್ಕೆ ಅವರ ಹೆಸರನ್ನು ಇಟ್ಟಿದ್ದಾರೆ.
ನಗರದ ಎಂಸಿಸಿ ಬಿ ಬ್ಲಾಕ್ನ ಕುವೆಂಪು ನಗರದಲ್ಲಿರುವ ಉದ್ಯಾನವನಕ್ಕೆ ಅಲ್ಲಿನ ಸ್ಥಳೀಯರು ಅಪ್ಪು ಹೆಸರಿಡುವ ಮೂಲಕ ಕರುನಾಡಿನ ರಾಜಕುಮಾರನಿಗೆ ಗೌರವ ಸಲ್ಲಿಸಿದ್ದಾರೆ. ಪುನೀತ್ ಅಭಿಮಾನಿಗಳು ಹಾಗೂ ವಾರ್ಡ್ನ ಸಾರ್ವಜನಿಕರು ದೀಪ ಬೆಳಗಿಸುವ ಮೂಲಕ ಪವರ್ ಸ್ಟಾರ್ನ ಸ್ಮರಣೆ ಮಾಡಿದ್ದಾರೆ.
ಡಾ.ರಾಜ್ ಕುಮಾರ್ ಸ್ಮರಣಾರ್ಥವಾಗಿ ಅಭಿಮಾನಿಗಳ ಸಂಘ ಅವರ ನೆನಪಿಗೋಸ್ಕರ ಬೆಂಗಳೂರಿನಲ್ಲಿ ಡಾ. ರಾಜ್ ಕುಮಾರ್ ರಸ್ತೆ ಎಂದು ಹೆಸರಿಟ್ಟಿರೋದು ಗೊತ್ತೇ ಇದೆ. ಅಂತಹ ಮಹಾನ್ ಕಲಾವಿದನಿಗೆ ಸಲ್ಲಲೇ ಬೇಕಾದ ಗೌರವ ಅದಾಗಿತ್ತು. ಇದಲ್ಲದೆ ಕೆಲವು ಹಿರಿಯ ಕಲಾವಿದರ ಹೆಸರುಗಳನ್ನೂ ರಸ್ತೆಗಳಿಗೆ ಹೆಸರಿಡಲಾಗಿದೆ. ಇಂತಹ ಗೌರವಗಳ ಸಾಲಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಹೆಸರೂ ಕೇಳಿಬರುತ್ತಿದೆ.
ಇದನ್ನೂ ಓದಿ:“ಪ್ರೇಮಂ ಪೂಜ್ಯಂ” ಚಿತ್ರದಲ್ಲಿ ಯಾರ ಅಭಿನಯ ಅದ್ಭುತ? ಸಿನಿಮಾದ ಪ್ಲಸ್, ಮೈನಸ್