ಎಲ್ಲೆಲ್ಲೂ ಅವನೇ.. ಇಲ್ಲಿನೂ ಅವನೇ ಕಂಡಲೆಲ್ಲ ‘ಬಡವ ರಾಸ್ಕೆಲ್​’


ಡಾಲಿ ಧನಂಜಯ್ ಅಭಿನಯದ ‘ಬಡವ ರಾಸ್ಕಲ್’ ಸಿನಿಮಾ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ವಿಭಿನ್ನವಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತಿರುವ ಸಿನಿಮಾ ತಂಡ, ಜನ ಸಾಮಾನ್ಯರ ಮೂಲಕವೇ ಪ್ರೇಕ್ಷಕರನ್ನು ತಲುಪಲು ಮುಂದಾಗಿದೆ. ಈ ಕುರಿತು ಫೋಟೋಗಳನ್ನು ನಟ ಡಾಲಿ ಧನಂಜಯ್​ ಅವರು ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

ಡಾಲಿ ಪಿಕ್ಚರ್ಸ್​​​ ಬ್ಯಾನರ್​​ನಡಿ, ಜೊತೆಗಾರ ಶಂಕರ್ ಗುರು ಅವರೊಂದಿಗೆ ಕೂಡಿ ಸ್ವತಃ ಧನಂಜಯ್​ ಅವರೇ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದರೊಂದಿಗೆ ಬಿಡುಗಡೆಗೆ ಸಿದ್ಧವಾಗಿರೋ ಸಿನಿಮಾಗೆ ನೂತನ ತಂತ್ರದ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಇದರಂತೆ ಮದುವೆ ಮನೆ, ಮಾರುಕಟ್ಟೆ, ಬೀದಿ ಬದಿ ವ್ಯಾಪಾರ ಮಾಡೋ ಸ್ಥಳ ಸೇರಿದಂತೆ ಹಲವು ಕಡೆಗಳಲ್ಲಿ ಬಡವ ರಾಸ್ಕಲ್​ ಸಿನಿಮಾ ಜೋರಾಗಿದೆ. ಲೆಟೆಸ್ಟ್​ ಆಗಿ ಮದುವೆ ಮಂಟಪದಲ್ಲಿ ಬಡವ ರಾಸ್ಕೆಲ್​​ ಪ್ರಚಾರ ಕುರಿತಂತೆ ಮಾಡಿರೋ ವಿಡಿಯೋವನ್ನು ಧನಂಜಯ್ ಅವರು ತಮ್ಮ ಇನ್​​ಸ್ಟಾದಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ವಧುವನಿಂದ ಸಮಾರಂಭಕ್ಕೆ ಬಂದ ಅತಿಥಿಗಳು ಸೇರಿದಂತೆ ಅಡುಗೆ ಮಾಡುವವರು, ಓಲಗದವರು ಎಲ್ಲರೂ ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದಾರೆ.

ಅಮದಹಾಗೇ, ಸಿನಿಮಾದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದು, ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ಸಿನಿಮಾ ಸಾಗುತ್ತದೆ. ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ಜೋಡಿಯಾಗಿ ಅಮೃತ ಅಯ್ಯಂಗಾರ್‌ ಅಭಿಯಿಸಿದ್ದು, ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಸೇರಿದಂತೆ ಬಹುದೊಡ್ಡ ತಾರಾ ಗಣವನ್ನೇ ಹೊಂದಿದೆ.

 

View this post on Instagram

 

A post shared by Dhananjaya (@dhananjaya_ka)

 

View this post on Instagram

 

A post shared by Dhananjaya (@dhananjaya_ka)

 

View this post on Instagram

 

A post shared by Dhananjaya (@dhananjaya_ka)

The post ಎಲ್ಲೆಲ್ಲೂ ಅವನೇ.. ಇಲ್ಲಿನೂ ಅವನೇ ಕಂಡಲೆಲ್ಲ ‘ಬಡವ ರಾಸ್ಕೆಲ್​’ appeared first on News First Kannada.

News First Live Kannada


Leave a Reply

Your email address will not be published. Required fields are marked *