ಎಲ್ಲ ಚುನಾವಣೆಗಳೂ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಅಂತಾ ಹೇಳೋಕಾಗಲ್ಲ: ಡಿ.ಕೆ. ಶಿವಕುಮಾರ್​ ಯಾಕೆ ಹೀಗಂದ್ರು? | All by elections are not Compass needle for general elections dk shivakumar

ಎಲ್ಲ ಚುನಾವಣೆಗಳೂ ಮುಂದಿನ ಚುನಾವಣೆಗಳಿಗೆ ದಿಕ್ಸೂಚಿ ಅಂತಾ ಹೇಳೋಕಾಗಲ್ಲ: ಡಿ.ಕೆ. ಶಿವಕುಮಾರ್​ ಯಾಕೆ ಹೀಗಂದ್ರು?

ಡಿಕೆ ಶಿವಕುಮಾರ್

ಹುಬ್ಬಳ್ಳಿ: ಹಾನಗಲ್ ಹಾಗೂ ಸಿಂಧಗಿ ಅಸೆಂಬ್ಲಿ ಉಪಚುನಾವಣೆ ವಿಚಾರವಾಗಿ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅವರು ಎಲ್ಲಾ ಚುನಾವಣೆಗೂ ಮುಂದಿನ ಚುನಾವಣೆ ದಿಕ್ಸೂಚಿ ಅಂತಾ ಹೇಳೊಕಾಗಲ್ಲ; ಬೈ ಎಲೆಕ್ಷನ್ ಅನ್ನೋದು ಈ ಹಿಂದೆ ಆಗಿರುವ ನೋವನ್ನ ಹೇಳಿಕೊಳ್ಳೋಕೆ ಮತದಾರರಿಗೆ ದೊರೆಯುವ ಅವಕಾಶ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನ ಎರಡೂ ಬೈ ಎಲೆಕ್ಷನ್ ಎಫೆಕ್ಟ್ ಆಗುತ್ತಾ ಅನ್ನೋ ಪ್ರಶ್ನೆಗೆ ಶಿವಕುಮಾರ್​ ಉತ್ತರಿಸಿದರು.

ಹಾನಗಲ್ ಹಾಗೂ ಸಿಂಧಗಿ ಉಪಚುನಾವಣೆ ವಿಚಾರವಾಗಿ ಮತ್ತಷ್ಟು ಮಾತನಾಡಿರುವ ಡಿ.ಕೆ. ಶಿವಕುಮಾರ್​, ಈ ಕ್ಷೇತ್ರಗಳಲ್ಲಿ ಆಡಳಿತ ಯಂತ್ರವೂ ಕೂಡ ಬಹಳ ಬಿಗಿಯಾಗಿದೆ. ಬಿಜೆಪಿಯವರಿಗೆ ಅದು ಚೆನ್ನಾಗಿ ಗೊತ್ತಿದೆ. ಬಿಜೆಪಿಯವರು ಯಾವುದೇ ರೀತಿ ಆಡಳಿತ ದುರುಪಯೋಗ ಮಾಡಿಕೊಂಡರೂ ಮತದಾರರ ತೀರ್ಪು ಅಂತಿಮವಾಗಿರುತ್ತದೆ. ಜನರು ಯಾವುದೇ ಒತ್ತಡಕ್ಕೆ ಹಾಗೂ ಆಮಿಷಕ್ಕೆ ಒಳಗಾಗಿ ಮತ ಹಾಕಲು ಹೋಗಲ್ಲ ಎಂಬ ನಂಬಿಕೆ ಇದೆ ಎಂಬ ಆಶಯ ವ್ಯಕ್ತಪಡಿಸಿದರು.

TV9 Kannada

Leave a comment

Your email address will not be published. Required fields are marked *