ಎಲ್​ಎಸಿ ಗಡಿ ಬಳಿ ಚೀನಾ ಮೇಲೆ ಕಣ್ಣಿಡಲು 4 ಇಸ್ರೇಲಿ ಹೆರಾನ್​ ಡ್ರೋನ್​​ಗಳನ್ನು ನಿಯೋಜಿಸಿದ ಭಾರತೀಯ ಸೇನೆ | Indian Army gets 4 Israeli drones to keep an eye on China


ಎಲ್​ಎಸಿ ಗಡಿ ಬಳಿ ಚೀನಾ ಮೇಲೆ ಕಣ್ಣಿಡಲು 4 ಇಸ್ರೇಲಿ ಹೆರಾನ್​ ಡ್ರೋನ್​​ಗಳನ್ನು ನಿಯೋಜಿಸಿದ ಭಾರತೀಯ ಸೇನೆ

ಸಾಂಕೇತಿಕ ಚಿತ್ರ

ಭಾರತಕ್ಕೆ ಗಡಿಯ ಎರಡೂ ಕಡೆಗಳಲ್ಲಿ ಇರುವುದು ವೈರಿ ರಾಷ್ಟ್ರಗಳೇ ಆಗಿವೆ. ಒಂದು ಕಡೆ ಚೀನಾ ಇದ್ದರೆ, ಇನ್ನೊಂದು ಕಡೆ ಪಾಕಿಸ್ತಾನ. ಇತ್ತೀಚೆಗಂತೂ  ಚೀನಾ ದೇಶವು ಗಡಿಯಲ್ಲಿ ಭಾರತದ ಭೂಪ್ರದೇಶದ ಮೇಲೆ ನಿರಂತರವಾಗಿ ಅತಿಕ್ರಮಣ ಮಾಡುತ್ತಲೇ ಇದೆ. ಚೀನಾ ಗಡಿಯಲ್ಲಿ ಬೇಲಿ ಇಲ್ಲದೇ ಇರುವುದರಿಂದ ಅತಿಕ್ರಮಣದ ಮೇಲೆ ಕಣ್ಣಿಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಈಗ ಭಾರತೀಯ ಸೇನೆಯು 4  ಇಸ್ರೇಲ್ ಡ್ರೋನ್ ಗಳನ್ನು ಗಡಿಯಲ್ಲಿ ನಿಯೋಜಿಸಿದೆ.

ಚೀನಾ ಗಡಿಯಲ್ಲಿ ಭಾರತದಿಂದ ಇಸ್ರೇಲ್ ಡ್ರೋನ್ ನಿಯೋಜನೆ
ಭಾರತವು ತನ್ನ ಸೇನಾ ಸಾಮರ್ಥ್ಯಗಳನ್ನು ಬಲಪಡಿಸಲು ಹಾಗೂ ಲಡಾಖ್ ಸೆಕ್ಟರ್‌ನಲ್ಲಿ ಚೀನಾದ ಚಲನವಲನಗಳ ಮೇಲೆ ತೀವ್ರವಾಗಿ ಕಣ್ಣಿಡಲು ಭಾರತೀಯ ಸೇನೆಯು ಇಸ್ರೇಲ್‌ನಿಂದ 4 ಹೆರಾನ್ ಡ್ರೋನ್‌ಗಳನ್ನು ತಂದು ಚೀನಾ ಗಡಿಯಲ್ಲಿ ನಿಯೋಜಿಸಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ(LAC) ಉದ್ದಕ್ಕೂ ಯಥಾಸ್ಥಿತಿಯನ್ನು ಬದಲಾಯಿಸಲು ಚೀನಾದ ಪ್ರಯತ್ನಗಳನ್ನು ನಡೆಸುತ್ತಿದೆ. ಭಾರತವು ಏಪ್ರಿಲ್ 2020 ರ ಗಾಲ್ವಾನ್ ಕಣಿವೆಯ ಘರ್ಷಣೆಯ ಬಳಿಕ ಚೀನಾದ ಗಡಿಯಲ್ಲಿ ತನ್ನ ಸೈನ್ಯದ ನಿಯೋಜನೆಯನ್ನು ಹೆಚ್ಚಿಸಿದೆ.

ನಾಲ್ಕು ಇಸ್ರೇಲ್ ಡ್ರೋನ್‌ಗಳನ್ನು ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ಕಣ್ಗಾವಲುಗಾಗಿ ನಿಯೋಜಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ನಾಲ್ಕು ಹೊಸ ಡ್ರೋನ್‌ಗಳು ಪ್ರಸ್ತುತ ಪಡೆಯ ಶಸ್ತ್ರಾಸ್ತ್ರಗಳಿಗಿಂತ ಹೆಚ್ಚು ಸುಧಾರಿತವಾಗಿವೆ. ಸುಧಾರಿತ ಡ್ರೋನ್‌ಗಳ ಆ್ಯಂಟಿ-ಜಾಮಿಂಗ್ ಸಾಮರ್ಥ್ಯವು ಅವುಗಳ ಹಿಂದಿನ ಆವೃತ್ತಿಗಳಿಗಿಂತ ಉತ್ತಮವಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಕ್ಷಣಾ ಪಡೆಗಳಿಗೆ ನೀಡಿದ್ದ ತುರ್ತು ಹಣಕಾಸು ಅಧಿಕಾರದ ಅಡಿಯಲ್ಲಿ ಡ್ರೋನ್‌ಗಳನ್ನು ಇಸ್ರೇಲ್ ನಿಂದ ಖರೀದಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ಪಡೆಗಳು ಶೀಘ್ರದಲ್ಲೇ ಆಮೆರಿಕಾದಿಂದ ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲಿವೆ. ಇದು ದೇಶದ ಮಾನವರಹಿತ ಕಣ್ಗಾವಲು ಮತ್ತು ದಾಳಿಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಕೆಲವು ವರ್ಷಗಳಿಂದ ಭಾರತವು ಯುನೈಟೆಡ್ ಸ್ಟೇಟ್ಸ್‌ನಿಂದ ಸುಮಾರು 21,000 ಕೋಟಿ ರೂಪಾಯಿ ಮೌಲ್ಯದ 30 ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸಲು ಯತ್ನಿಸುತ್ತಿದೆ.

ವರದಿ-ಚಂದ್ರಮೋಹನ್

ಇದನ್ನೂ ಓದಿ: ರಿಲಯನ್ಸ್ ಜಿಯೋ ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಸ್ಮಾರ್ಟ್ ಟಿವಿ ಮತ್ತು ಟ್ಯಾಬ್, ವಾರ್ಷಿಕ ಸಭೆಯಲ್ಲಿ ಅಧಿಕೃತ ಘೋಷಣೆ ಆಗಲಿದೆ

TV9 Kannada


Leave a Reply

Your email address will not be published. Required fields are marked *