ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜು ಸದ್ಯದಲ್ಲೇ ಶುರುವಾಗಲಿದೆ. ನಿರೀಕ್ಷೆಯಂತೆಯೇ ಕಳೆದ ಸೀಸನ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಡೇವಿಡ್ ವಾರ್ನರ್ ಹೊರಬಿದ್ದಿದ್ದಾರೆ. ಹೀಗಾಗಿ ಹೈದರಾಬಾದ್ ಪರ ಡೇವಿಡ್ ವಾರ್ನರ್ ಯಾವುದೇ ಕಾರಣಕ್ಕೂ ಆಡೋದಿಲ್ಲ ಎಂಬುದು ಖಚಿತವಾಗಿದೆ.
ಡೇವಿಡ್ ವಾರ್ನರ್ ಆಡಿದ 150 ಪಂದ್ಯಗಳಲ್ಲಿ ಬರೋಬ್ಬರಿ 5500 ರನ್ ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಪೈಕಿ ಐದನೇ ಸ್ಥಾನ ಹೊಂದಿದ್ದಾರೆ. ಹೀಗಿರುವಾಗ ವಿಶ್ವಕಪ್ ಟಿ20 ಬಳಿಕ ಇವರು ಮರಳಿ ಫಾರ್ಮ್ಗೆ ಬಂದಿದ್ದಾರೆ.
ಇನ್ನು, ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಹೈದರಾಬಾದ್ 2016ರಲ್ಲಿ IPL ಪ್ರಶಸ್ತಿಯನ್ನು ಗೆದ್ದುಕೊಂಡಿತು. ಹೀಗಾಗಿ ಹಲವು ಟೀಂಗಳಿಗೆ ಉತ್ತಮ ಕ್ಯಾಪ್ಟನ್ ಬೇಕಿದ್ದು, ಇವರನ್ನು ಖರೀದಿಸೋಕೆ ಮುಂದೆ ಬಂದಿವೆ. ಎಷ್ಟೇ ಕೋಟಿಯಾದ್ರೂ ಈ ಬಾರಿ ಡೇವಿಡ್ ವಾರ್ನರ್ ಖರಿದೀಸಿ ತೀರುತ್ತೇವೆ ಎಂದು ಹಲವು ಫ್ರಾಂಚೈಸಿಗಳು ನಿರ್ಧರಿಸಿವೆ.