ಎಷ್ಟೇ ಟ್ರೋಲ್​ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್​ ಕಮೆಂಟ್​ ಬರಲು ಕಾರಣ ಏನು? | Internet sensation Urfi Javed gets trolled for her new dress


ಎಷ್ಟೇ ಟ್ರೋಲ್​ ಮಾಡಿದ್ರೂ ಜಗ್ಗಲ್ಲ ಈ ಯುವತಿ; ಇಷ್ಟೊಂದು ನೆಗೆಟಿವ್​ ಕಮೆಂಟ್​ ಬರಲು ಕಾರಣ ಏನು?

ಊರ್ಫಿ ಜಾವೇದ್

ಸೋಶಿಯಲ್​ ಮೀಡಿಯಾ ಜಗತ್ತಿನಲ್ಲಿ ಯಾರು ಬೇಕಾದರೂ ಫೇಮಸ್​ ಆಗಬಹುದು. ಅಪರಿಚಿತರಾಗಿದ್ದವರು ರಾತ್ರೋರಾತ್ರಿ ಸ್ಟಾರ್​ ಆಗಿ ಬಿಡಬಹುದು. ಅದೇ ರೀತಿ ಟ್ರೋಲ್ (Troll) ಕಾಟಕ್ಕೂ ಗುರಿಯಾಗಿ ನೆಗೆಟಿವ್​ ಕಮೆಂಟ್​ಗಳು ಕೂಡ ಬರಬಹುದು. ಈಗ ನಟಿ ಊರ್ಫಿ ಜಾವೇದ್​ (Urfi Javed) ಅವರ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಅವರು ಸೋಶಿಯಲ್​ ಮೀಡಿಯಾದಲ್ಲಿ ಎಷ್ಟು ಫೇಮಸ್​ ಆಗಿದ್ದಾರೋ ಅಷ್ಟೇ ಪ್ರಮಾಣದಲ್ಲಿ ಟ್ರೋಲ್​ ಕೂಡ ಆಗುತ್ತಿದ್ದಾರೆ. ಅಷ್ಟಕ್ಕೂ ಅವರು ಜನರಿಂದ ಟ್ರೋಲ್​ ಆಗುತ್ತಿರುವುದು ಯಾಕೆ? ಬಟ್ಟೆಗಳ ಕಾರಣಕ್ಕೆ! ಹೌದು, ತಮ್ಮ ಮನಸ್ಸಿಗೆ ಬಂದಂತೆ ಕಾಸ್ಟ್ಯೂಮ್​ ಡಿಸೈನ್​ ಮಾಡಿಕೊಳ್ಳುವ ಅವರು ಚಿತ್ರ-ವಿಚಿತ್ರ ಬಟ್ಟೆ ಧರಿಸುತ್ತಾರೆ. ಸಖತ್​ ಬೋಲ್ಡ್​ ಆಗಿ ಕ್ಯಾಮೆರಾಗೆ ಪೋಸ್​ ನೀಡುತ್ತಾರೆ. ಹಾಗಾಗಿ ಅವರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಊರ್ಫಿ ಜಾವೇದ್​ ಅವರ ಇನ್​ಸ್ಟಾಗ್ರಾಮ್​ ಖಾತೆಗೆ ಹೋಗಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಬಟ್ಟೆಗಳ ಬಗ್ಗೆ ಅವರಿಗೆ ಇರುವಂಥ ಕ್ರೇಜ್​ ಎಂಥದ್ದು ಎಂಬುದು ಗೊತ್ತಾಗುತ್ತದೆ. ಆಗಾಗ ಅವರು ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಫೋಟೋಶೂಟ್​ ಮಾಡಿಸುತ್ತಾರೆ. ಅವುಗಳಿಗೆ ಬರುವುದು ಬಹುತೇಕ ನೆಗೆಟಿವ್​ ಕಮೆಂಟ್​ಗಳೇ. ಇತ್ತೀಚೆಗೆ ಹೊಸ ಫೋಟೋ ಹಂಚಿಕೊಂಡಿದ್ದ ಊರ್ಫಿ ಅವರು, ‘ನಿಮ್ಮ ಬಳಿ ಈಗಾಗಲೇ ರೆಕ್ಕಗಳಿವೆ, ನೀವು ಹಾರಬೇಕಷ್ಟೇ’ ಎಂದು ಕ್ಯಾಪ್ಷನ್​ ನೀಡಿದ್ದರು. ‘ಇದೇನು ಹಗ್ಗ ಸುತ್ತಿಕೊಂಡು ಬಂದಿದ್ದೀರಲ್ಲ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ‘ಈ ರೀತಿ ಮಾಡುವ ಬದಲು ಒಂದೇ ಸಲ ಅಶ್ಲೀಲ ಸಿನಿಮಾ ಮಾಡಿಬಿಡಿ’ ಎಂಬ ಖಾರದ ಕಮೆಂಟ್​ ಕೂಡ ಬಂದಿದೆ.

ಯಾರು ಎಷ್ಟೇ ಟ್ರೋಲ್​ ಮಾಡಿದರೂ ಊರ್ಫಿ ಜಾವೇದ್​ ತಲೆ ಕೆಡಿಸಿಕೊಳ್ಳುವವರಲ್ಲ. ಅವರ ವ್ಯಕ್ತಿತ್ವಕ್ಕೆ ಕೆಲವರು ಫ್ಯಾನ್​ ಆಗಿದ್ದಾರೆ! ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಊರ್ಫಿ ಅವರನ್ನು 19 ಲಕ್ಷಕ್ಕೂ ಹೆಚ್ಚು ಜನರು ಫಾಲೋ ಮಾಡುತ್ತಿದ್ದಾರೆ. ಕರಣ್​ ಜೋಹರ್​ ನಡೆಸಿಕೊಟ್ಟ ‘ಬಿಗ್​ ಬಾಸ್​ ಓಟಿಟಿ’ ಶೋನಲ್ಲಿ ಊರ್ಫಿ ಸ್ಪರ್ಧಿಸಿದ್ದರು. ಅಲ್ಲಿಯೂ ಅವರು ತಮ್ಮ ಕಾಸ್ಟ್ಯೂಮ್​ ಕಾರಣದಿಂದ ಗಮನ ಸೆಳೆದಿದ್ದರು. ಕಸದ ಚೀಲವನ್ನೇ ಬಳಸಿಕೊಂಡು ಅವರು ಕಾಸ್ಟ್ಯೂಮ್ ಡಿಸೈನ್​ ಮಾಡಿಕೊಂಡಿದ್ದರು. ಈ ರೀತಿ ವಿಚಿತ್ರ ಬಟ್ಟೆಗಳನ್ನು ಧರಿಸುವ ಕಾರಣಕ್ಕೆ ಅವರನ್ನು ‘ಲೇಡಿ ರಣವೀರ್​ ಸಿಂಗ್​’ ಎಂದು ಕೂಡ ಕೆಲವರು ಕರೆಯುತ್ತಾರೆ. ಊರ್ಫಿಯ ಫೋಟೋ ಮತ್ತು ವಿಡಿಯೋಗಳು ಟ್ರೋಲ್​ ಪೇಜ್​ಗಳಲ್ಲಿ ವೈರಲ್​ ಆಗುತ್ತಿವೆ.

TV9 Kannada


Leave a Reply

Your email address will not be published. Required fields are marked *