ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿದ್ರು ಆದ್ರೆ ಮುರುಘಾಮಠದ ಶ್ರೀಗಳು ಪಾದಯಾತ್ರೆಗೆ ಬಂದಿದ್ರು, ನಾನು ಅವರಿಗೆ ಶರಣಾಗಿದ್ದೇನೆ -ಡಿಕೆ ಶಿವಕುಮಾರ್ | KPCC President DK Shivakumar on murugha mutt seer bengaluru


ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಹೆದರಿದ್ರು ಆದ್ರೆ ಮುರುಘಾಮಠದ ಶ್ರೀಗಳು ಪಾದಯಾತ್ರೆಗೆ ಬಂದಿದ್ರು, ನಾನು ಅವರಿಗೆ ಶರಣಾಗಿದ್ದೇನೆ -ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್ (ಸಂಗ್ರಹ ಚಿತ್ರ)

ಬೆಂಗಳೂರು: ಮುರುಘಾ ಶರಣರ ಹುಟ್ಟುಹಬ್ಬದ ಸಮಾರಂಭ ಕಾರ್ಯಕ್ರಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭಾಷಣದ ವೇಳೆಯೇ ಅಕ್ಕಪಕ್ಕ ಕುಳಿತುಕೊಂಡು ಡಿ.ಕೆ.ಶಿವಕುಮಾರ್, ಬಿ.ವೈ.ವಿಜಯೇಂದ್ರ ಗುಪ್ತ್ ಗುಪ್ತ್ ಚರ್ಚೆ ನಡೆಸಿದ್ದಾರೆ. ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಿಕೆಶಿ ಮುರುಗಮಠದ ಶ್ರೀಗಳನ್ನು ಹೊಗಲಿದ್ದಾರೆ.

ನಿಮಗೆಲ್ಲ ತಾಳ್ಮೆ ಇದ್ರೆ ಮಾತಾಡ್ತೀನಿ, ಇಲ್ಲ ಅಂದರೆ ನಾನು ಇಲ್ಲೇ ಕೈ ಮುಗಿದು ಹೋಗಿ ಬಿಡ್ತೀನಿ. ನೀವು ಇಲ್ಲಿ ಗಮನಕೊಟ್ಟರೆ ಮಾತನಾಡುವೆ. ಇಲ್ಲ ಅಂದರೆ ನಾನು ಮಾತಾಡೋದು ವೇಸ್ಟ್ ಆಗೋಗುತ್ತೆ. ಅದಕ್ಕಾಗಿ ನಮ್ಮ ಮಾತನ್ನು ಕೇಳಿ ಎಂದು ಮನವಿ ಮಾಡಿ ಡಿಕೆ ಶಿವಕುಮಾರ್ ಭಾಷಣ ಆರಂಭಿಸಿದರು. ಈ ವೇಳೆ ಶ್ರೀಗಳ ಆಶೀರ್ವಾದ ಪಡೆಯಲು ಕೆಲವರು ಮುಂದಾದರು. ಇದಕ್ಕೆ ಗರಂ ಆಗಿ, ರೀ ಈ ಕಡೆ ಬನ್ರೀ, ನಾನು‌ ಬೇರೆ ಕಡೆ ಹೋಗಬೇಕು, ಸಾರ್ವಜನಿಕ ಸಭೆ ಇದೆ ಎಂದು ಡಿಕೆಶಿ ಗದರಿದ್ರು.

ಮುರುಗಮಠದ ಶ್ರೀಗಳ ಜನ್ಮ ದಿನಾಚರಣೆ ಮಾಡ್ತಿರೋದು ನಮಗೆಲ್ಲಾ ಭಾಗ್ಯ, ಸೌಭಾಗ್ಯ. ನಾನು ಇಲ್ಲಿಗೆ ಬಂದಿರೋದು ಶ್ರೀಗಳ ಪಾದ ಸ್ಪರ್ಶ ಮಾಡಲು. ಮೇಕೆದಾಟು ಪಾದಯಾತ್ರೆಗೆ ಶ್ರೀಗಳು ಬಂದಿದ್ದನ್ನು ನಾನು ಜೀವನ ಪರ್ಯಂತ ಮರೆಯೋಕೆ ಆಗೋದಿಲ್ಲ. ಕಷ್ಟ ಕಾಲದಲ್ಲಿ ಯಾರು ಆಶೀರ್ವಾದ ಮಾಡ್ತಾರೆ ಅದೇ ನಮಗೆ ಮುಖ್ಯ. ನಾವು ಹುಟ್ಟುವಾಗ ಯಾವುದೇ ಜಾತಿ ಅರ್ಜಿ ಹಾಕಿಲ್ಲ. ಸಾಯುವಾಗ ಮುಹೂರ್ತ ಕೂಡ ಯಾರು ನಿಗಧಿ ಮಾಡಲ್ಲ. ಹುಟ್ಟು ಸಾವಿನ ನಡುವೆ ನಾವೆಲ್ಲರೂ ಇದ್ದೇವೆ. ಸಮಾಜದ ಎಲ್ಲಾ ವರ್ಗಕ್ಕೆ ಶಕ್ತಿ ಕೊಟ್ಟವರು ಮುರುಗಮಠದ ಶ್ರೀಗಳು. ನಮ್ಮ ವಯಸ್ಸಿನಲ್ಲಿ ಒಂದೊಂದು ವರ್ಷ ಅವರಿಗೆ ಕೊಟ್ಟು, ಅವರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು ಅಷ್ಟೇ ಎಂದು ಡಿಕೆ ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ಇದೇ ವೇಳೆ ಡಿಕೆ ಶಿವಕುಮಾರ್, ರಾಜ್ಯದ ಕೆಲ ಶ್ರೀಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಬರಲು ಅನೇಕರು ಹೆದರಿದರು. ಎಷ್ಟೋ ಸ್ವಾಮೀಜಿಗಳು ಸರ್ಕಾರಕ್ಕೆ ಗಢಗಢ ನಡುಗಿದರು. ಆದರೆ ಮುರುಘಾಮಠದ ಶ್ರೀಗಳು ಪಾದಯಾತ್ರೆಗೆ ಬಂದಿದ್ದರು. 12ಕ್ಕೂ ಹೆಚ್ಚು ಸ್ವಾಮೀಜಿಗಳನ್ನು ಕರೆದುಕೊಂಡು ಬಂದಿದ್ದರು. ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಶ್ರೀಗಳು ಆಶೀರ್ವಾದ ಮಾಡಿದ್ರು. ಇದನ್ನ ನನ್ನ ಜೀವ ಇರೋವರೆಗೂ ಮರೆಯೋಕೆ ಸಾಧ್ಯವಿಲ್ಲ. ಕಷ್ಟ ಕಾಲದಲ್ಲಿ ಧೈರ್ಯ, ಆಶೀರ್ವಾದವೇ ನಮಗೆ ಮುಖ್ಯ. ಶರಣಾಗಿದ್ದೇನೆ, ಶರಣಾಗಿಸಿದ್ದೇನೆ ಎಂದು ಕೈ ಮುಗಿದ್ರು.

ಡಿಕೆಶಿ ಭಾಷಣ ಹೊಗಳಿದ ಮುರುಘಾ ಶ್ರೀಗಳು
ಡಿಕೆಶಿ‌ ನಮ್ಮ ನಡುವಿನ ಆಶಾ ಕಿರಣ. ಡಿಕೆಶಿ ಈ ಕಾರ್ಯಕ್ರಮದಲ್ಲಿ ಸಿಂಹ ಗರ್ಜನೆ ಮಾಡಿದ್ದಾರೆ. ಡಿಕೆಶಿಯವ್ರಿಗೆ ಉತ್ಸಾಹ ಇದೆ, ಸಾಧಿಸುವ ಜೀವನೋತ್ಸಾಹ ಇದೆ. ಚಪ್ಪಾಳೆ ತಟ್ಟಿ ಎಂದು ಮುರುಘಾ ಶ್ರೀ ಡಿಕೆಶಿ ಹೊಗಳುವ ವೇಳೆ ಸಭಿಕರಿಗೆ ಚಪ್ಪಾಳೆ ತಟ್ಟುವಂತೆ ಹೇಳಿದ್ರು. ಚಪ್ಪಾಳೆ ಸರಿಯಾಗಿ ಬಾರದಿದ್ದಾಗ, ನೀವೆಲ್ಲ ಯಾಕೋ ನಿರುತ್ಸಾಹಗೊಂಡಿದ್ದೀರಿ. ನೀವೆಲ್ಲ ರೀಚಾರ್ಜ್ ಆಗಬೇಕು ಅಂತ ಸಭಿಕರಿಗೆ ಮುರುಘಾ ಶ್ರೀ ಹೇಳಿದ್ರು.

ನಮ್ಮ ಮಠದಲ್ಲಿ ನಾವು ಬಂದ ಮೇಲೆ ಲಿಂಗ ತಾರತಮ್ಯ ನಿವಾರಣೆ ಮಾಡಿದ್ದೇವೆ. ಅಸ್ಪೃಶ್ಯತೆ ನಿವಾರಣೆ ಮಾಡಿದ್ದೇವೆ. ಮಠದಲ್ಲಿ ಸವರ್ಣೀಯ ದಲಿತ ಎಂಬ ಅಸ್ಪೃಶ್ಯತೆ ಇಲ್ಲ. ಸಹ ಪಂಕ್ತಿ‌ಭೋಜನ ಇದೆ ನಮ್ಮ ಮಠದಲ್ಲಿ. ಆದ್ರೆ ದೇಶದಲ್ಲಿ ಅಸ್ಪೃಶ್ಯತೆ ಇನ್ನೂ ಇದೆ. ಇದನ್ನು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಅನಾಥ ಮಕ್ಳಳಿಗೆ ಅನಾಥಾಶ್ರಮ ತೆರೆದ ಕೀರ್ತಿ ಮುರುಘಾ ಮಠಕ್ಕೆ ಇದೆ. ಲಿಂಗಾಯತ ಮಠಗಳಲ್ಲೆಲ್ಲ ಮುರುಘಾ ಮಠವೇ ಮೊದಲು ಅನಾಥಾಶ್ರಮ ತೆರೆದಿದ್ದು ಎಂದರು.

TV9 Kannada


Leave a Reply

Your email address will not be published.