ಎಸಿಬಿ ದಾಳಿಗೊಳಗಾಗಿದ್ದ ಅಧಿಕಾರಿ ಎಲ್.ಸಿ ನಾಗರಾಜು ಅವರ ಪತ್ನಿ ನಿಧನ


ಬೆಂಗಳೂರು: ಕಳೆದವಾರ ಎಸಿಬಿ ದಾಳಿಗೆ ಒಳಗಾಗಿದ್ದ ನೆಲಮಂಗಲದ ಅಧಿಕಾರಿ  ಎಲ್. ಸಿ ನಾಗರಾಜು ಪತ್ನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಸೋಮವಾರ ನಾಗರಾಜು ಪತ್ನಿ ಅವರಿಗೆ ಹೃದಯಾಘಾತವಾದ ಹಿನ್ನೆಲೆ ಅವರನ್ನು ಯಶವಂತಪುರದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಬೆಳಗಿನ ಜಾವ 3.30ರ ಸುಮಾರಿಗೆ ಕೊನೆಯುಸಿರೆಳದಿದ್ದಾರೆ.

ಎಲ್. ಸಿ. ನಾಗರಾಜ್, ಸಕಾಲ ಸೇವೆಗಳಲ್ಲಿ  ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನವೆಂಬರ್​ 24 ರಂದು ಇವರ ಮನೆ ಮೇಲೆ  ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶಾಕ್​ ನೀಡಿದ್ದರು . ಈ ವೇಳೆ ಅಧಿಕಾರಿಯ ಮನೆಯಲ್ಲಿ 1,76 ಗ್ರಾಂ ಚಿನ್ನಾಭರಣಗಳು, 43,00,000 ಲಕ್ಷ  ನಗದು ಪತ್ತೆಯಾಗಿತ್ತು. ಜೊತೆಗೆ  ಬೆಂಗಳೂರು ನಗರದಲ್ಲಿ 1 ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ 1 ವಾಸದ ಮನೆ ಹಾಗೂ ಸುಮಾರು 11 ಎಕರೆ 25 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ವಿವಿಧ ಕಂಪನಿಯ ಕಾರುಗಳು ಪತ್ತೆಯಾಗಿದ್ದವು .

ಇದನ್ನೂ ಓದಿ:ಬೆಳ್ಳಂ‌ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್ -ರಾಜ್ಯದ 60 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ

News First Live Kannada


Leave a Reply

Your email address will not be published. Required fields are marked *