ಎಸ್ಎಸ್​​ಎಲ್​​ವಿ ಉಡಾವಣೆ ನಂತರ ಸಿಗುತ್ತಿಲ್ಲ ಸಿಗ್ನಲ್; ಸಮಸ್ಯೆ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೋ | Small satellite launch vehicle SSLV suffered some data losses in the final stage Isro analysing status


ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್ಎಸ್ಎಲ್​ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು.

ಎಸ್ಎಸ್​​ಎಲ್​​ವಿ ಉಡಾವಣೆ ನಂತರ ಸಿಗುತ್ತಿಲ್ಲ ಸಿಗ್ನಲ್; ಸಮಸ್ಯೆ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಇಸ್ರೋ

ಎಸ್​​ಎಸ್​​ಎಲ್​​ವಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿಪಡಿಸಿದ ಸಣ್ಣ ಉಪಗ್ರಹ ಉಡಾವಣಾ ವಾಹನ (SSLV) ಭಾನುವಾರ ಬೆಳಿಗ್ಗೆ ನಭಕ್ಕೆ ಚಿಮ್ಮಿದ್ದು ಕೊನೆಯ ಹಂತದಲ್ಲಿ ಸಿಗ್ನಲ್ ಕಳೆದುಕೊಂಡಿದೆ. ಈ ಉಪಗ್ರಹಗಳ ಸ್ಥಿತಿ ಮತ್ತು ಎಸ್‌ಎಸ್‌ಎಲ್‌ವಿ ಕಾರ್ಯಕ್ಷಮತೆಯನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದುಇಸ್ರೋ ಟ್ವೀಟ್ ಮಾಡಿದೆ.  ನಾವು ಕಾರ್ಯಾಚರಣೆಯ ಕೊನೆಯ ಹಂತದಲ್ಲಿ ಮಾಹಿತಿ ಕಳೆದುಕೊಂಡಿದ್ದು ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ. ನಾವು ಶೀಘ್ರದಲ್ಲೇ ಉಪಗ್ರಹಗಳ ಸ್ಥಿತಿ ಮತ್ತು ವಾಹನದ ಕಾರ್ಯಕ್ಷಮತೆಯ ಬಗ್ಗೆ ಮಾಹಿತಿ ನೀಡುತ್ತೇವೆ ಎಂದು ಇಸ್ರೋ ಅಧ್ಯಕ್ಷ ಡಾ ಎಸ್. ಸೋಮನಾಥ್ ಹೇಳಿದ್ದಾರೆ.  ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್ಎಸ್ಎಲ್​ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 75 ಶಾಲೆಗಳ ವಿದ್ಯಾರ್ಥಿಗಳು ರೂಪಿಸಿರುವ 50 ಗ್ರಾಂ ತೂಕದ 750 ಪೇಲೋಡ್ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ರೂಪಿಸಿರುವ EOS-02 ಭೂ ನಿಗಾ ಉಪಗ್ರಹ ಮತ್ತು ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ರೂಪಿಸಿರುವ ಪುಟ್ಟ ಉಪಗ್ರಹಗಳು (ಪೇಲೋಡ್) ಇವು.

ಉಪಗ್ರಹವನ್ನು ಕಕ್ಷೆಯಲ್ಲಿ ಇರಿಸಲು ಮೂರು ಘನ ಇಂಧನ ಆಧಾರಿತ ಹಂತಗಳು ಮತ್ತು ದ್ರವ ಇಂಧನ ಆಧಾರಿತ ವೇಗ ಟ್ರಿಮ್ಮಿಂಗ್ ಮಾಡ್ಯೂಲ್ (VTM) ಅನ್ನು ಬಳಸುವ ಎಸ್ಎಸ್​​ಎಲ್​​ವಿ ವಾಣಿಜ್ಯ ಉಡಾವಣೆಗೆ ಬೇಕಾದ ತ್ವರಿತ  ಸಮಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ಶ್ರೀಹರಿಕೋಟಾದಲ್ಲಿರುವ ಭಾರತದ ಏಕೈಕ ಬಾಹ್ಯಾಕಾಶ ನಿಲ್ದಾಣದಿಂದ ಬೆಳಿಗ್ಗೆ 9:18 ಕ್ಕೆ ಉಪಗ್ರಹ ಉಡಾವಣೆ ಆಗಿದ್ದು, ಕೋಸ್ಟಿಂಗ್ ಹಂತದಲ್ಲಿ ಮ್ಯಾಪ್ ಮಾಡಲಾದ ಪಥದಿಂದ ಸ್ವಲ್ಪ ವಿಚಲನ ಕಂಡುಬಂದಿದೆ. ಮೂರನೇ ಹಂತದ ಪ್ರತ್ಯೇಕತೆ, VTM ಇಗ್ನಿಷನ್ ಮತ್ತು ಉಪಗ್ರಹ ಇಂಜೆಕ್ಷನ್ ಬಾಹ್ಯಾಕಾಶ ಸಂಸ್ಥೆಯ ಮಿಷನ್ ಬ್ರೋಷರ್‌ನಲ್ಲಿ ಉಲ್ಲೇಖಿಸಿದ್ದಕ್ಕಿಂತ ಸ್ವಲ್ಪ ವಿಳಂಬವಾಗಿದೆ..

ಲಿಫ್ಟ್-ಆಫ್ ಆದ ನಂತರ 738 ಮತ್ತು 788 ಸೆಕೆಂಡ್‌ಗಳಲ್ಲಿ ಉಪಗ್ರಹಗಳು ಬೇರ್ಪಟ್ಟ ನಂತರ ಮಿಷನ್ ಕಂಟ್ರೋಲ್ ರೂಂಗೆ ಯಾವುದೇ ಮಾಹಿತಿ ಸಿಗಲಿಲ್ಲ

ಎಲ್ಎಸ್ಎಲ್ ವಿ ಡಿ1 ಮೊದಲ ಹಾರಾಟ ಇದೀಗ ಪೂರ್ಣಗೊಂಡಿದೆ. ಎಲ್ಲಾ ಹಂತಗಳು ನಿರೀಕ್ಷೆಯಂತೆ ಕಾರ್ಯವಹಿಸಿವೆ. ಸ್ಥಿರವಾದ ಕಕ್ಷೆಯನ್ನು ಸಾಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಕಾರ್ಯಾಚರಣೆಯ ಫಲಿತಾಂಶವನ್ನು ತೀರ್ಮಾನಿಸಲು ನಾವು ಪ್ರಸ್ತುತ ಡೇಟಾವನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದಿದ್ದಾರೆ ಸೋಮನಾಥ್.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *