ಎಸ್​ಆರ್​ಹೆಚ್​ ಜೊತೆಗೆ ಕ್ರಿಕೆಟ್ ಕಾಮೆಂಟರಿಗೂ ಗುಡ್​ಬೈ ಹೇಳಲಿದ್ದಾರೆ ವಿವಿಎಸ್ ಲಕ್ಷ್ಮಣ್! ಇಲ್ಲಿದೆ ಕಾರಣ | VVS Laxman To Take Charge As NCA Head, Confirms Sourav Ganguly


ಎಸ್​ಆರ್​ಹೆಚ್​ ಜೊತೆಗೆ ಕ್ರಿಕೆಟ್ ಕಾಮೆಂಟರಿಗೂ ಗುಡ್​ಬೈ ಹೇಳಲಿದ್ದಾರೆ ವಿವಿಎಸ್ ಲಕ್ಷ್ಮಣ್! ಇಲ್ಲಿದೆ ಕಾರಣ

ವಿವಿಎಸ್ ಲಕ್ಷ್ಮಣ್

ಇನ್ನು ಮುಂದೆ ಸನ್ ರೈಸರ್ಸ್ ಹೈದರಾಬಾದ್ ಶಿಬಿರದಲ್ಲಿ ವಿವಿಎಸ್ ಲಕ್ಷ್ಮಣ್ ಕಾಣಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಅವರು ಯಾವುದೇ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟ್ ಮಾಡಲು ಸಹ ಕಾಣಿಸುವುದಿಲ್ಲ. ಹೌದು, ಭಾರತೀಯ ಕ್ರಿಕೆಟ್‌ಗೆ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಜವಾಬ್ದಾರಿ ಹೆಚ್ಚಿದ್ದು, ಅವರಿಗೆ ರಾಹುಲ್ ದ್ರಾವಿಡ್ ಹುದ್ದೆ ಸಿಕ್ಕಿದೆ. ಇದಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕಾಮೆಂಟರಿ ಬಾಕ್ಸ್‌ನಿಂದ ದೂರ ಉಳಿಯಬೇಕಾಗಿದೆ. ವಾಸ್ತವವಾಗಿ, ಲಕ್ಷ್ಮಣ್ ಈಗ NCA ಅಂದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಹೊಸ ಮುಖ್ಯಸ್ಥರಾಗಿದ್ದಾರೆ. ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಎನ್​ಸಿಎ ಮುಖ್ಯಸ್ಥರ ಹುದ್ದೆ ತೆರವಾಗಿತ್ತು.

ಆದರೆ, ವಿವಿಎಸ್ ಲಕ್ಷ್ಮಣ್ ಈ ಹಿಂದೆ ಈ ಜವಾಬ್ದಾರಿ ನಿಭಾಯಿಸಲು ನಿರಾಕರಿಸಿದ್ದರು. ಆದರೆ ನಂತರ ಬಿಸಿಸಿಐ ಮನವೊಲಿಸಿದ ನಂತರ ಅವರು ಒಪ್ಪಿಕೊಂಡರು. ಮತ್ತು, ಈಗ ಅವರನ್ನು NCA ಯ ಹೊಸ ಬಾಸ್ ಎಂದು ಕರೆಯಲಾಗುವುದು. ಲಕ್ಷ್ಮಣ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗುವ ಬಗ್ಗೆ ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಆದರೆ, ಲಕ್ಷ್ಮಣ್ ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಟೈಮ್ಸ್ ಆಫ್ ಇಂಡಿಯಾದ ಸುದ್ದಿ ಪ್ರಕಾರ, ಭಾರತ ಎ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವಿವಿಎಸ್ ಲಕ್ಷ್ಮಣ್ ಅಧಿಕಾರ ವಹಿಸಿಕೊಳ್ಳಬಹುದು.

ಲಕ್ಷ್ಮಣ್‌ ಅವರನ್ನು ಎನ್‌ಸಿಎ ಮುಖ್ಯಸ್ಥರನ್ನಾಗಿ ಮಾಡುವುದರಿಂದ ಲಾಭವಾಗಲಿದೆ
BCCI ಅಧಿಕಾರಿಯೊಬ್ಬರು TOI ಗೆ ಮಾತನಾಡಿ, ಲಕ್ಷ್ಮಣ್ ಅವರ ಸ್ವಂತ ಷರತ್ತುಗಳ ಮೇಲೆ NCA ಮುಖ್ಯಸ್ಥರಾಗಲು ಒಪ್ಪಿಕೊಂಡಿದ್ದಾರೆ. ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರನ್ನು NCA ಮುಖ್ಯಸ್ಥರನ್ನಾಗಿ ಮಾಡಲು ಉತ್ಸುಕರಾಗಿದ್ದರು. ಏಕೆಂದರೆ ದ್ರಾವಿಡ್ ಮತ್ತು ಲಕ್ಷ್ಮಣ್ ಉತ್ತಮ ತಿಳುವಳಿಕೆಯನ್ನು ಹೊಂದಿದ್ದಾರೆ ಮತ್ತು ಅದು ಕಾರ್ಯನಿರ್ವಹಿಸುತ್ತದೆ. ಟೀಮ್ ಇಂಡಿಯಾ ಮತ್ತು ಎನ್‌ಸಿಎ ನಡುವಿನ ಸೇತುವೆಯಾಗಿ ಲಕ್ಷ್ಮಣ್ ಅವರ ನೇಮಕಾತಿಯ ನಿಯಮಗಳು ಮತ್ತು ಷರತ್ತುಗಳ ಮೇಲೆ ಕೆಲಸ ಪ್ರಗತಿಯಲ್ಲಿದೆ. ಆದರೆ ಅವರು ಈಗಾಗಲೇ ತಮ್ಮ ಆಲೋಚನೆಗಳನ್ನು ಎನ್‌ಸಿಎಯೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದ್ದಾರೆ.

ಲಕ್ಷ್ಮಣ್ ಎನ್‌ಸಿಎ ಕೋಚ್ ಆಗಿರುವುದು ಸುದೀರ್ಘ ಪ್ರಕ್ರಿಯೆಯ ಭಾಗವಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಸೌರವ್ ಗಂಗೂಲಿ ಮತ್ತು ಜಯ್ ಶಾ ಅವರೊಂದಿಗಿನ ಅವರ ಸಂಭಾಷಣೆಯು ಬಹಳ ಸಮಯದವರೆಗೆ ನಡೆಯಿತು. ಎನ್‌ಸಿಎ ಮುಖ್ಯಸ್ಥರಾಗುವಲ್ಲಿ, ಲಕ್ಷ್ಮಣ್‌ಗೆ ಮೊದಲು ಇದ್ದ ದೊಡ್ಡ ಸಂದಿಗ್ಧತೆ ಹೈದರಾಬಾದ್‌ನಿಂದ ಕುಟುಂಬದೊಂದಿಗೆ ಬೆಂಗಳೂರಿನಲ್ಲಿ ನೆಲೆಸುವುದಾಗಿತ್ತು. ಈ ಕುರಿತು ಚರ್ಚೆ ನಡೆಸಲಾಯಿತು. ಈ ಬಗ್ಗೆ ತಾವು ಮೆಂಟರ್ ಆಗಿರುವ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಬಳಿಯೂ ಮಾತನಾಡಿದ್ದಾರೆ. ಆದರೆ, ಈಗ ಎಲ್ಲ ಗೊಂದಲಗಳು ಬಗೆಹರಿದಿವೆ’ ಎಂದರು.

ಮೂಲಗಳ ಪ್ರಕಾರ ಲಕ್ಷ್ಮಣ್ ಎನ್​ಸಿಎ ಮುಖ್ಯಸ್ಥರಾಗಲು ಈ ಹಿಂದೆ ನಿರಾಕರಿಸಿದ್ದರು. ಅವರು ಟೀಂ ಇಂಡಿಯಾದ ಕೋಚ್ ಆಗಲು ಹೆಚ್ಚಿನ ಆಸಕ್ತಿ ತೋರಿಸಿದ್ದರು. ನಂತರ ದ್ರಾವಿಡ್ ಕೋಚ್ ಆಗಲು ನಿರಾಕರಿಸಿದರೆ, ಲಕ್ಷ್ಮಣ್ ಎರಡನೇ ಆಯ್ಕೆ ಎಂದು ನಿರ್ಧರಿಸಲಾಯಿತು.

TV9 Kannada


Leave a Reply

Your email address will not be published. Required fields are marked *